ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು ಸಮಯ ಸಾಧಿಸಿ 40 ಗ್ರಾಂ ಸರ ಎಗರಿಸಿ ಪರಾರಿ

 

ಬೆಂಗಳೂರು, ಜೂ.15- ಪ್ರತಿ ನಿತ್ಯ ಒಂದಲ್ಲಾ ಒಂದು ಕಡೆ ಸರ ಅಪಹರಣ ಪ್ರಕರಣಗಳು ನಡೆಯುತ್ತಲೇ ಇದ್ದು, ನಿನ್ನೆ ಇಬ್ಬರು ಮಹಿಳೆಯರ ಸರಗಳನ್ನು ಕಳ್ಳರು ಎಗರಿಸಿದ್ದಾರೆ.
ಸಿಕೆ ಅಚ್ಚುಕಟ್ಟು:
ಅಂಗಡಿಗೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ಮಹಿಳೆಯನ್ನು ಬೈಕ್‍ನಲ್ಲಿ ಹಿಂಬಾಲಿಸಿದ ಸರಗಳ್ಳರು ಸಮಯ ಸಾಧಿಸಿ 40 ಗ್ರಾಂ ಸರ ಎಗರಿಸಿ ಪರಾರಿಯಾಗಿದ್ದಾರೆ.
ರಾತ್ರಿ 9.45ರಲ್ಲಿ ಶಾಂತಮ್ಮ(68)ಎಂಬುವರು ಅಂಗಡಿಗೆ ಹೋಗಿ ಕಾವೇರಿನಗರ, ಕೆಂಪೇಗೌಡ ಲೇಔಟ್‍ನ ಬಿಎಸ್‍ಕೆ ಮೂರನೇ ಹಂತದ ಮೂಲಕ ಮನೆಗೆ ನಡೆದುಕೊಂಡು ಹೋಗುತ್ತಿದ್ದರು.
ಈ ಸಂದರ್ಭದಲ್ಲಿ ಇವರನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಸರಗಳ್ಳರು ಶಾಂತಮ್ಮ ಅವರು ಧರಿಸಿದ್ದ 40 ಗ್ರಾಂ ಸರ ಎಳೆದುಕೊಂಡು ಪರಾರಿಯಾಗಿದ್ದಾರೆ.
ಸಿದ್ದಾಪುರ:
ಜಯನಗರದ ಒಂದನೇ ಬ್ಲಾಕ್, ಹತ್ತನೇ ಬಿ ಮುಖ್ಯರಸ್ತೆಯಲ್ಲಿ ಶಾರದಾ ಎಂಬುವರು ನಿನ್ನೆ ಸಂಜೆ 7 ಗಂಟೆಯಲ್ಲಿ ನಡೆದು ಹೋಗುತ್ತಿದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರು 28 ಗ್ರಾಂ ಸರ ಅಪಹರಿಸಿ ಪರಾರಿಯಾಗಿದ್ದಾರೆ.
ಈ ಎರಡೂ ಪ್ರಕರಣಗಳನ್ನು ಆಯಾ ಠಾಣೆ ಪೆÇಲೀಸರು ದಾಖಲಿಸಿಕೊಂಡಿದ್ದಾರೆ
.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ