ಕುರಿಗಾಹಿಯ ಸಂಗೀತ ಪ್ರತಿಭೆ

Varta Mitra News

ಇಂದಿನ ಆಧುನಿಕ ಜಗತ್ತಿನಲ್ಲಿ ಎಲೆಮರಿಕಾಯಿಯಂತೆ ಇರುವ ಪ್ರತಿಭೆಗಳಿಗೆ ಸಾಮಾಜಿಕ ಜಾಲತಾಣಗಳು ಉತ್ತಮ ವೇದಿಕೆಯಾಗಿವೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇಂತಹದೇ

ಒಂದು ಪ್ರತಿಭೆ ಇಂದು ಬೆಳಕಿಗೆ ಬಂದಿದೆ. ಕುರಿಗಾಹಿಯಲ್ಲೂ ಅದ್ಭುತ ಕಲೆಯಿರುತ್ತೆ ಅನ್ನೋದಕ್ಕೆ ಈ ಕಲಾವಿದ ಸಾಕ್ಷಿ.. ಯಾಕಂದ್ರೆ ಹನಮಂತ ಎನ್ನುವ ಕುರಿಗಾಹಿ ದಿನ ಬೆಳಗಾಗುವದರಲ್ಲಿ ರಾಜ್ಯ ಕ್ಕೆ ಪ್ರಸಿದ್ಧಿ ಯಾಗಿದ್ದಾನೆ.. ತನ್ನ ಕಂಠಸಿರಿಯಿಂದ ಹಾಡನ್ನ ಹಾಡಿ ಸೆಲ್ಫಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಇನ್ನು ಕುರಿಗಾಹಿಗಳೆಲ್ಲರೂ ಕಲಾವಿದರು ಯಾಕಂದ್ರೆ ಕುರಿಗಳನ್ನು ಕಾಯುತ್ತಾ ಬೇಸರವಾದಾಗ ಹಾಡುಗಳನ್ನು ಹಾಡುತ್ತಾ ಮೈಮರೆಯುತ್ತಾರೆ.. ಅಲ್ದೆ ಹಬ್ಬ ಹರಿದಿನಗಳಲ್ಲಿ ಡೊಳ್ಳಿನ ಪದ ಹಾಡಿ ಜನರನ್ನು ರಂಜಿಸ್ತಾರೆ. ಇಂತಹ ಅದ್ಬುತ ಕಲಾವಿದರು ಇನ್ನೂ ಸಾಕಷ್ಟು ಇದ್ದಾರೆ ಅವರ ಪ್ರಚಾರವಾಗಬೇಕಿದೆ..ಇನ್ನು ಕುರಿಗಾಹಿ ಹನಮಂತನ ಕಂಠಕ್ಕೆ ನನ್ನದೊಂದು ಸಲಾಂ…!!!

ಈ ವಿಡಿಯೋಗಳು ನಾವು ತಯಾರಿಸಿದ್ದಲ್ಲ. ವಾಟ್ಸಪ್ಪ್ ನಲ್ಲಿ ವೈರಲ್ ಆಗಿರೋ ವಿಡಿಯೋಗಳು. ನಾವು ಅವುಗಳನ್ನು ಪರಿಶೀಲಿಸಿ ನಿಮ್ಮೊಂದಿಗೆ ಕೇವಲ ಮನೋರಂಜನೆಗಾಗಿ ತೋರಿಸುತ್ತಿದ್ದೇವೆ. ನಾವು ಈ ವಿಡಿಯೋಗಳ ಮಾಲೀಕತ್ವದ ಹಕ್ಕು ಪಡೆಯುವುದಿಲ್ಲ. ಯಾರನ್ನು ನೋವುಂಟು ಮಾಡುವ ಅಥವಾ ತೇಜೋವಧೆ ಮಾಡುವ ಉದ್ದೇಶವು ನಮಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ