ರಾಯಚೂರಿನಲ್ಲಿ ಕಾಲ ಚಿತ್ರ ಬಿಡುಗಡೆದೆ ಭಾರೀ ವಿರೋಧ; ಪೋಸ್ಟರ್ ಹರಿದು ಅಕ್ರೋಶ

ರಾಯಚೂರು:ಜೂ-7: ರಜನಿಕಾಂತ್ ಅಭಿನಯದ ಕಾಲಾ ಚಿತ್ರ ಪ್ರದರ್ಶನಕ್ಕೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಬಾರಿ ವಿರೋಧ ವ್ಯಕ್ತವಾಗಿದ್ದು, ಚಿತ್ರದ ಪೋಸ್ಟರ್ ಹರಿದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಂಧನೂರು ಪಟ್ಟಣದ ಸಂಗಮೇಶ್ವರ ಟಾಕೀಸ್’ನಲ್ಲಿ ಕಾಲಾ ಚಿತ್ರ ತೆರೆ ಕಂಡಿತ್ತು. ಆದ್ರೆ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಚಿತ್ರದ ಪೋಸ್ಟರ್ ಹರಿದು ಹಾಕಿ, ರಜನಿಕಾಂತ್ ಭಾವಚಿತ್ರಕ್ಕೆ ಕಪ್ಪು ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದ್ರು‌.

ಮತ್ತೊಂದೆಡೆ ರಾಯಚೂರಿನ ಪದ್ಮನಗರ ಸಿನಿಮಾ ಥಿಯೇಟರ್ ಮೊದಲ ಚಿತ್ರ ಪ್ರದರ್ಶನಕ್ಕೆ ಪ್ರೇಕ್ಷಕರಿಗೆ ಟಿಕೆಟ್ ನೀಡಲಾಯಿತು. ಆದ್ರೆ ಪ್ರತಿಭಟನೆ ಬಿಸಿ ಹಿನ್ನಲೆಯಿಂದಾಗಿ ಚಿತ್ರ ಪ್ರದರ್ಶನ ರದ್ದುಗೊಳಿಸಿ, ಥಿಯೇಟರ್‌ನ ಮಾಲೀಕರು ಪ್ರೇಕ್ಷಕರಿಗೆ ವಾಪಸ್‌ ಹಣ ನೀಡಿದ್ರು.

ಇದರಿಂದ ಸಿನಿಮಾ ನೋಡಲು ಬಂದಿದ್ದ ರಜನಿ ಫ್ಯಾನ್ಸ್‌ ನಿರಾಸೆಯಿಂದ ವಾಪಸ್ ತೆರಳಿದ್ರು‌. ಇನ್ನು ಜಿಲ್ಲೆಯ ಮಾನವಿ ಪಟ್ಟಣದ ಅಪರ್ಣ, ದೇವದುರ್ಗದ ಭಾರತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾದ್ರೂ ಮೊದಲ ಪ್ರದರ್ಶನ ಸದ್ಯ ಚಿತ್ರಮಂದಿರ ಸ್ಥಗಿತಗೊಳಿಸಲಾಗಿದೆ. ಮುನ್ನೆಚ್ಚರಿಕೆಯ ಕ್ರಮ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ