ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

 

ಬೆಂಗಳೂರು, ಜೂ.6 ಕೊರಮ -ಕೊರಚ ಜನಾಂಗದ ಮಕ್ಕಳು ಎಸ್.ಎಸ್.ಎಲ್.ಸಿ-ಪಿಯುಸಿಯಲ್ಲಿ ಶೇ-80ಕ್ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಜೂನ್ 16 ರಂದು ಚಾಲುಕ್ಯ ಹೋಟೆಲ್ ಪಕ್ಕದ ಭಾರತೀಯ ವಿದ್ಯಾಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಪ್ರತಿಭಾಪುರಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜನಾಂಗದ ಸಮಾನ ಮನಸ್ಕರ್ ಒಕ್ಕೂಟದ ಸಂಚಾಲಕ ಮೋಹನ್‍ರಾಜ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಜನಾಂಗವು ರಾಜ್ಯದಲ್ಲಿ 25ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, ಸಮಾಜದಲ್ಲಿ ನಮ್ಮ ಜನಾಂಗಕ್ಕೆ ಯಾವುದೇ ಸ್ಥಾನವನ್ನು ನೀಡುತ್ತಿಲ್ಲ ಎಂದರು.
ರಾಜಕೀಯ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ನಮ್ಮ ಸಮಾಜ ನಮ್ಮ ಹಿಂದುಳಿದಿದೆ. ನಮ್ಮ ಜನಾಂಗಕ್ಕೆ ಯಾವುದೇ ರೀತಿಯ ಸೌಲಭ್ಯಗಳು ನೀಡುತ್ತಿಲ್ಲ ರಾಜಕೀಯ ಪಕ್ಷವು ನಮ್ಮ ಜನಾಂಗವನ್ನು ಕೇವಲ ಮತ ಬ್ಯಾಂಕ್‍ಗಳನ್ನಾಗಿ ಬಳಸಿಕೊಂಡಿದೆ ಎಂದರು.
ಆದ್ದರಿಂದ ಹಿಂದುಳಿದಿರುವ ನಮ್ಮ ಜನಾಂಗದ 50 ಮಕ್ಕಳಿಗೆ ಪ್ರತಿಭಾಪುರಸ್ಕಾರವನ್ನು ನಮ್ಮ ಜನಾಂಗದ ವತಿಯಿಂದ ನೀಡುತ್ತಿರುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ