ವಿಶ್ವ ಪರಿಸರ ದಿನಾಚರಣೆ

ದಾಂಡೇಲಿ : ನಗರ ಸಭೆಯ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ಮಂಗಳವಾರ ಆಚರಿಸಲಾಯಿತು.

ನಗರದ ಕೇಂದ್ರ ಬಸ್ ನಿಲ್ದಾಣದ ಸಮೀಪದಿಂದ ಆರಂಭಗೊಂಡ ಸ್ವಚ್ಚತಾ ಕಾರ್ಯವನ್ನು ನಗರದ ಜೆ.ಎನ್.ರಸ್ತೆ ಸೇರಿ ಪ್ರಮುಖ ರಸ್ತೆಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ವಿಶೇಷ ತಹಶೀಲ್ದಾರ್ ಶೈಲೇಶ ಪರಮಾನಂದ ಅವರು ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು. ಆ ನಿಟ್ಟಿನಲ್ಲಿ ಜನಾಂದೋಲನವಾಗಬೇಕಾಗಿದೆ ಎಂದರು. ಸಮೃದ್ದ ಪರಿಸರವೆ ರಾಷ್ಟ್ರದ ಮಹತ್ವದ ಆಸ್ತಿಯಾಗಿದ್ದು, ಈ ಆಸ್ತಿಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತರಾಗಬೇಕೆಂದು ಕರೆ ನೀಡಿದರು.

ನಗರ ಸಭೆಯ ಪೌರಾಯುಕ್ತ ಜತ್ತಣ್ಣ ಅವರು ಮಾತನಾಡಿ ಸ್ವಚ್ಚ ಪರಿಸರ ನಿರ್ಮಾಣಕ್ಕೆ ನಗರ ಸಭೆ ಸದಾ ಕಂಕಣಬದ್ಧವಾಗಿದೆ. ನಗರವನ್ನು ಸದಾ ಸ್ವಚ್ಚವಾಗಿಡುವ ಪೌರಕಾರ್ಮಿಕರು ನಿಜವಾಗಿಯೂ ನಗರದ ಜನತೆಯ ಆರೋಗ್ಯ ಸಂರಕ್ಷಕರಾಗಿದ್ದಾರೆ ಎಂದರು. ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ ಕುಮಾರ್ ಮಾತನಾಡಿ ಪರಿಸರಕ್ಕೆ ಕಂಠಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸ್ವಯಂಪ್ರೇರಣೆಯಿಂದ ನಿಷೇಧಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಜನಜಾಗೃತಿ ಅವಶ್ಯ ಬೇಕಾಗಿದೆ. ವಿಶ್ವ ಪರಿಸರ ದಿನಾಚರಣೆಯ ಈ ಶುಭ ದಿನದಂದು ನಾವೆಲ್ಲರೂ ನಮ್ಮನ್ನು ರಕ್ಷಿಸುವ ಪರಿಸರವನ್ನು ಸಂರಕ್ಷಿಸುವುದರ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಕ್ಕೆ ಮುಂದಡಿಯಿಡಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ನಗರ ಸಭೆಯ ಸದಸ್ಯ ಅಬ್ದುಲ್ ವಹಾಬ್ (ಮುನ್ನಾ), ನಗರ ಸಭೆಯ ಅಧಿಕಾರಿಗಳಾದ ಮೈಕಲ್ ಫರ್ನಾಂಡೀಸ್, ಬಾಲು ಗವಸ, ಕುಲಕರ್ಣಿ, ಡಿ.ಕೆ.ನಾಯ್ಕ, ಕೆ.ಎಂ.ಜೋಶಿ, ಉಪ್ಪಾರ, ಜಗದೀಶ, ನಾಗರಾಜ ತೇರದಾಳ, ಪ್ರೆಸಿಲ್ಲಾ ಪೆನರ್ಾಂಡೀಸ್, ಕಿರಣ್, ಫೀಲಿಪ್, ತಹಶೀಲ್ದಾರ್, ಆದಿ ಹಾಗೂ ನಗರ ಸಭೆಯ ಸಿಬ್ಬಂದಿಗಳು, ಪೌರಕಾರ್ಮಿಕರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ