ಸಾಲಭಾದೆಯಿಂದ ಇನ್ನೋರ್ವ ರೈತ ಆತ್ಮಹತ್ಯೆ

ವಿಜಯಪುರ: ಜೂ-5: ಸಾಲದ ಬಾದೆಗೆ ಮತ್ತೋರ್ವ ರೈತ ವಿಷ‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಂದಗಿಯಲ್ಲಿ ನಡೆದಿದೆ.

ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ ಸಾಯಬಗೌಡ ಮಲ್ಲನಗೌಡ ಪಾಟೀಲ್ (38) ಆತ್ಮಹತ್ಯೆ ಮಾಡಿಕೊಂಡ ರೈತ.

ಸಿಂಡಿಕೇಟ್ ಹಾಗೂ ಗ್ರಾಮೀಣ ಬ್ಯಾಂಕ್ ಸೇರಿ 10 ಲಕ್ಷ ಸಾಲ ಹೊಂದಿದ್ದ ರೈತ ಮೂರು ವರ್ಷಗಳಿಂದ ಬೆಳೆದ ಬೆಳೆ ಕೈಕೊಟ್ಟಿದ್ದಕ್ಕೆ‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇವರಹಿಪ್ಪರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ