ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರಿಂದ ಅಧಿಕಮಾಸದ ಅಂಗವಾಗಿ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ಚಾಲನೆ

????????????????????????????????????

ಮಂತ್ರಾಲಯ:ಜೂ-5:ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಅಧಿಕಮಾಸದ ಅಂಗವಾಗಿ ಶ್ರೀಮಠದಲ್ಲಿ ಆಯೋಜಿಸಲಾದ ಅಖಂಡನಾಮಸಂಕೀರ್ತನಾ ಕಾರ್ಯಕ್ರಮಕ್ಕೆ ದೀಪಪ್ರಜ್ವಾಲನೆಯ ಮೂಲಕ ಚಾಲನೆ ನೀಡಿದರು.

ಇದಕ್ಕೂ ಪೂರ್ವದಲ್ಲಿ ಶ್ರೀಕ್ಷೇತ್ರ ತಿರುಮಲೆಯಿಂದ ಆಗಮಿಸಿರುವ ಶ್ರೀ ಭೂ ಸಮೇತ ಶ್ರೀನಿವಾಸದೇವರ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸುಮಾರು ೩೦೦೦ ಕ್ಕು ಅಧಿಕ ಭಜನಾ ಮಂಡಲಿಯ ಸಭ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪೂಜ್ಯ ಶ್ರೀ ಶ್ರೀಪಾದಂಗಳವರು ಶ್ರೀಮಠದ ಪರಿಸರದಲ್ಲಿರುವ ಉದ್ಯಾನಕ್ಕೆ ಭೇಟಿ ನೀಡಿ ಅಲ್ಲಿನ ಗಿಡ ಮರಗಳಿಗೆ ನೀರೆರೆದರು. ಹಾಗೂ ಅಲ್ಲಿನ ವ್ಯವಸ್ಥೆ ಯನ್ನು ಪರಿಶೀಲಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ