ಒತ್ತಡಕ್ಕೆ ಮಣಿಯದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ: ಪೆÇಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕರಾದ ಎಂ.ಎಸ್.ಮೇಘರಿಕ್

 

ಮೈಸೂರು, ಜೂ.1-ಯಾವುದೇ ಒತ್ತಡಕ್ಕೆ ಮಣಿಯದೆ ನಿಮ್ಮ ಕರ್ತವ್ಯವನ್ನು ನಿರ್ವಹಿಸಿ ಎಂದು ಪೆÇಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕರಾದ ಎಂ.ಎಸ್.ಮೇಘರಿಕ್ ಹೇಳಿದರು.
ನಗರದಲ್ಲಿರುವ ಕಾರಾಗೃಹಗಳ ಸಿಬ್ಬಂದಿ ತರಬೇತಿ ಸಂಸ್ಥೆ ಕವಾಯತು ಮೈದಾನದಲ್ಲಿ ಇಂದು ಬೆಳಗ್ಗೆ 45ನೆ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಪರಾಧಿಗಳಿಗೆ ಕಾನೂನಿನಡಿ ಬರುವ ಶಿಕ್ಷೆ ವಿಧಿಸಿ ಅವರು ತಾವು ಮಾಡಿರುವ ತಪ್ಪುಗಳನ್ನು ಒಪ್ಪಿಕೊಂಡು ಮತ್ತೆ ಅಂತಹ ತಪ್ಪುಗಳನ್ನು ಮಾಡದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪೆÇಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಈಗಾಗಲೇ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ನೇಮಕಾತಿ ಪತ್ರಗಳನ್ನು ಸದ್ಯದಲ್ಲೇ ನೀಡಲಾಗುವುದು ಎಂದರು.
ಇದಕ್ಕೂ ಮುನ್ನ ಅವರು ಪ್ರಶಿಕ್ಷಣಾರ್ಥಿಗಳಿಂದ ನಡೆದ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಅತ್ಯುತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಒಳಾಂಗಣ ವಿಭಾಗದಲ್ಲಿ ದೀಪ ಶಿಂಗಾಡೆಪ್ಪ ಇಳಗಲ ಕೇಂದ್ರ ಕಾರಾಗೃಹ ಬೆಳಗಾವಿ, ಹೊರಾಂಗಣ ವಿಭಾಗದಲ್ಲಿ ಲೀಲೋಪಾರ ಗುತ್ತೇದಾರ ಕೇಂದ್ರ ಕಾರಾಗೃಹ ಕಲಬುರಗಿ, ಫೈರಿಂಗ್ ವಿಭಾಗದಲ್ಲಿ ಭಾಗ್ಯಶ್ರೀ ಬಾಳಾಗಿ (ಪ್ರಥಮ ಬಹುಮಾನ), ಜಿಲ್ಲಾ ಕಾರಾಗೃಹ ಚಿಕ್ಕಬಳ್ಳಾಪುರ ಬಿಂದು (ದ್ವಿತೀಯ), ಜಿಲ್ಲಾ ಕಾರಾಗೃಹ ಮಡಿಕೇರಿ ವಿಭಾಗದಲ್ಲಿ ಉತ್ತಮ ನಡತೆ-ಮಮತಾ ಕೇಂದ್ರ ಕಾರಾಗೃಹ ಬೆಂಗಳೂರು ಇವರಿಗೆ ಪ್ರಶಸ್ತಿಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಕಾರಾಗೃಹ ಪೆÇಲೀಸ್ ಉಪ ಮಹಾನಿರ್ದೇಶಕರಾದ ಎಚ್.ಎಸ್.ರೇವಣ್ಣ, ಕಾರಾಗೃಹಗಳ ಹೆಚ್ಚುವರಿ ಮಹಾನಿರೀಕ್ಷಕ ವೀರಭದ್ರಸ್ವಾಮಿ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅಮಿತ್‍ಸಿಂಗ್, ಐಜಿಪಿ ಸೌಮೇಂದು ಮುಖರ್ಜಿ, ಕಾರಾಗೃಹ ಅಧೀಕ್ಷಕಿ ದಿವ್ಯಶ್ರೀ, ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೇಶವಮೂರ್ತಿ ಸೇರಿದಂತೆ ಮತ್ತಿತರರಿದ್ದರು.
88 ಮಂದಿ ಮಹಿಳಾ ಪ್ರಶಿಕ್ಷಣಾರ್ಥಿಗಳಿಂದ ನಿರ್ಗಮನ ಪಥ ಸಂಚಲನ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ