ಅನುದಾನ ರಹಿತ ಶಾಲೆಗಳಿಗೆ ಹೆಚ್ಚಿನ ಅನುದಾನ ಮತ್ತು ಬಿಸಿಯೂಟ ಸೌಲಭ್ಯಕ್ಕೆ ಮನವಿ

Varta Mitra News

 

ಬೆಂಗಳೂರು, ಜೂ.1- ಅನುದಾನ ರಹಿತ ಶಾಲೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಬಿಸಿಯೂಟ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಅನುದಾನ ರಹಿತ ಶಾಲೆಗಳ ಒಕ್ಕೂಟ ಮನವಿ ಮಾಡಿದೆ.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ನಿರ್ದೇಶಕ ಶಿವನಗೌಡ ಮಾಲಿ ಪಟೇಲ್ ಮಾತನಾಡಿ, ಗ್ರಾಮಾಂತರ ಹಳ್ಳಿಗಳಲ್ಲಿ ಅನುದಾನರಹಿತ ಶಾಲೆಯ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಯಾವ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆಯೋ ಅದೇ ರೀತಿ ಅನುದಾನ ರಹಿತ ಶಾಲೆಗಳಿಗೆ ನೀಡಬೇಕು ಎಂದು ತಿಳಿಸಿದರು.

ಹಳ್ಳಿಗಳಲ್ಲಿ ಬಡತನ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಊಟದ ಸೌಲಭ್ಯ ಕಲ್ಪಿಸಿಕೊಡಬೇಕು. ಈ ರೀತಿಯ ಬೇಡಿಕೆಗಳ ಬಗ್ಗೆ ನಾವು ಹಲವು ಬಾರಿ ಧರಣಿಗಳನ್ನು ಮಾಡಿದ್ದೇವೆ. ಆದರೆ, ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿರುವುದು ಅಷ್ಟೆಯಾಗಿದೆ. ಆದ್ದರಿಂದ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕಾದರೆ ಬಸವರಾಜ ಹೊರಟ್ಟಿ ಇವರಿಗೆ ಶಿಕ್ಷಣ ಸಚಿವ ಸ್ಥಾನ ನೀಡುವುದರಿಂದ ನಮ್ಮ ಕೊರತೆಗಳು ನೀಗಬಹುದು ಎಂದರು.
ಬಸವರಾಜ ಹೊರಟ್ಟಿ ಇವರಿಗೆ ಶಿಕ್ಷಣದ ಬಗ್ಗೆ ಬಹಳ ಆಸಕ್ತಿ ಇದೆ. ಇವರು ಶಿಕ್ಷಣ ಪ್ರಿಯರು. ಇವರಿಗೆ ಶಿಕ್ಷಣ ಸಚಿವ ಸ್ಥಾನ ನೀಡುವುದರಿಂದ ನಮ್ಮ ಬೇಡಿಕೆಗಳು ಈಡೇರಬಹುದು. ಆದ್ದರಿಂದ ಇವರಿಗೆ ಶಿಕ್ಷಣ ಸಚಿವ ಸ್ಥಾನ ನೀಡುವುದಾಗಿ ಅವರು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ