ಕೆಆರ್‍ಎಸ್ ಜಲಾಶಯದಲ್ಲಿ ಇಂದು 74.40 ಅಡಿಗಳಷ್ಟು ನೀರು

ಮೈಸೂರು, ಮೇ 31-ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ನದಿಗಳಲ್ಲಿ ನೀರು ಹರಿದು ಬರುತ್ತಿದೆ. ಇತ್ತ ಬರಡಾಗುವತ್ತ ಸಾಗಿದ್ದ ಸುಪ್ರಸಿದ್ದ ಕೆಆರ್‍ಎಸ್ ಜಲಾಶಯದಲ್ಲಿ ಇಂದು 74.40 ಅಡಿಗಳಷ್ಟು ನೀರು ತುಂಬಿದೆ. ಕೆಆರ್‍ಎಸ್ ಜಲಾಶಯಕ್ಕೆ 2916 ಕ್ಯೂಸೆಕ್ ನೀರು ಬರುತ್ತಿದೆ. ಜಲಾಶಯದಿಂದ 294 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕಬಿನಿ ಜಲಾಶಯದಲ್ಲಿ 57.25 ಅಡಿ ನೀರು ಇದ್ದು, 245 ಕ್ಯೂಸೆಕ್ ಹರಿದು ಬರುತ್ತಿದೆ. 300 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ