ಶಿರಸಿ; ಕೃಷಿ ಸಾಲಮನ್ನಾಕ್ಕೆ 15 ದಿನದಲ್ಲಿ ಪೂರಕ ನಿರ್ಣಯ, ರೈತರು ಧೃತಿಗೆಡುವ ಅವಶ್ಯಕತೆ ಇಲ್ಲ

ಶಿರಸಿ: ಸತತ ಬರಗಾಲದಿಂದ ತತ್ತರಿಸಿದ ರಾಜ್ಯದರೈತರಿಗೆ ನೆರವಾಗುವ ದಿಶೆಯಲ್ಲಿ ಎಚ್.ಡಿ. ಕುಮಾರಸ್ವಾಮಿಯವರ ನೇತೃತ್ವದ ಸರ್ಕಾರ ರೈತರ ಕೃಷಿ ಸಾಲಮನ್ನಾಕ್ಕೆ ಪೂರಕವಾದ ನಿರ್ಣಯ ಮುಂದಿನ ಹದಿನೈದು ದಿನಗಳಲ್ಲಿ ತೆಗೆದುಕೊಳ್ಳುವುದರಿಂದ ರೈತರು ಧೃತಿಗೆಡದೇ ಆತ್ಮಹತ್ಯೆಗೆ ಶರಣಾಗಬಾರದೆಂದು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಜೆ.ಡಿ.ಎಸ್. ಪಕ್ಷದ ಸಂಘಟನೆ ಉಸ್ತುವಾರಿ ಎ.ರವೀಂದ್ರ ನಾಯ್ಕ ಹೇಳಿದರು.
ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬನವಾಸಿ ಘಟಕದ ಆಶ್ರಯದಲ್ಲಿ ಕನರ್ಾಟಕದ ನೂತನ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿಯವರಿಗೆ ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಆಥರ್ಿಕ ಶಿಸ್ತಿನ ಅಡಿಯಲ್ಲಿಯೇ ಸಂಪೂರ್ಣ ಬೆಳೆಸಾಲ ಮನ್ನಾ ಮಾಡುವ ಜೊತೆಯಲ್ಲಿ ರೈತರ ಶ್ರೇಯೋಭಿವೃದ್ದಿ ದಿಶೆಯಲ್ಲಿ ಆರ್ಥಿಕ ಮಟ್ಟ ಹೆಚ್ಚಿಸುವ ಜೊತೆಯಲ್ಲಿ ಕೃಷಿ ಉತ್ಪನ್ನ ಪ್ರಮಾಣವನ್ನು ಹೆಚ್ಚಿಸುವ ಕಾರ್ಯ ಯೋಜನೆಗೆ ಕುಮಾರಸ್ವಾಮಿಯವರ ಸಕರ್ಾರ ಬದ್ಧವಾಗಿರುತ್ತದೆ. ಈ ದಿಶೆಯಲ್ಲಿ ಪೂರ್ಣ ಪ್ರಮಾಣದ ಸಾಲಮನ್ನಾ ಮತ್ತು ಕೃಷಿ ಅಭಿವೃದ್ಧಿ ಯೋಜನೆ ರೂಪಿಸುವಲ್ಲಿ ಕಾಲಾವಕಾಶ ಬೇಕಾಗಿರುವುದರಿಂದ ಸಾಲಮನ್ನಾ ಘೋಷಣೆಗೆ ವಿಳಂಬವಾಗಿರುತ್ತದೆ ವಿನಾ: ಸಾಲಮನ್ನಾ ಮಾಡುವಲ್ಲಿ ಸರ್ಕಾರಕ್ಕೆ ಹಿಂಜರಿಕೆಇಲ್ಲವೆಂದು ಹೇಳಿದರು.
ಸರ್ಕಾರದ ನಿಲುವಿನಲ್ಲಿ ನೈಜರೈತರ ಹಿತಕಾಪಾಡಲು ಸರ್ಕಾರವು ಚಿಂತಿಸುತ್ತಿದ್ದು ರೈತರಲ್ಲದ ಬಂಡವಾಳಶಾಹಿಗೆ ನೆರವಾಗದ ರೀತಿಯಲ್ಲಿ ಸಕಾಲದಲ್ಲಿರೈತರಿಗೆ ಸರ್ಕಾರವು ಸ್ಪಂದಿಸುವ ಮನೋಭಾವನೆ ಹೊಂದಿರುವುದರಿಂದ ರೈತರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬನವಾಸಿ ಬ್ಲಾಕ್ ಅಧ್ಯಕ್ಷ ರಾಜಶೇಖರಗೌಡ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಮೋಹನನಾಯ್ಕ ಅಂಡಗಿ, ಎಮ್.ಆರ್. ನಾಯ್ಕ ಕಂಡ್ರಾಜಿ, ನೆಹರೂ ನಾಯ್ಕ, ಕೆರಿಯ (ಬೆಳ್ಳ ಗೌಡ) ಬಂಕನಾಳ, ಪುಟ್ಟಪ್ಪ ಹರಿಜನ ಕಂತ್ರಾಜಿ, ವಿ.ಎಂ.ಬೈಂದೂರು, ದೇವರಾಜ ಕೋವೇರ, ಮನೋಜ ನಾಯ್ಕ, ಸೋಮಶೇಖರಗೌಡ, ನಾಗರಾಜತಿಗಣಿ, ಬಿ.ಸಿ. ನಾಯ್ಕ ಕಲಕರಡಿ, ಮಲ್ಲೇಶಿ ಬಾಳೆಹಳ್ಳಿ, ರಾಜು ಕಾಳಂಗಿ, ಕೃಷ್ಣ ಬನವಾಸಿ, ಸೋಮೆ ಗೌಡ ಉಂಚಳ್ಳಿ ಮುಂತಾದವರು ಉಪಸ್ಥಿತರಿದ್ದರು.
40 ಸಾವಿರಕೋಟಿ ಮೀಸಲು:
ಸರ್ವಋತು ಕೃಷಿ ಚಟುಚಟಿಕೆಗೆರೈತರಿಗೆ ನೆರವಾಗುವುದೊಂದಿಗೆ ಕೃಷಿ ಉತ್ಪನ್ನ ಹೆಚ್ಚಿಸುವ ಕಾರ್ಯಯೋಜನೆಗೆ ಪೂರಕವಾಗಿಕೆರೆ, ನದಿ, ಹಳ್ಳದಿಂದ ರೈತಾಪಿ ಜಮೀನಿಗೆ ಸರ್ವಋತು ನೀರು ಪೂರೈಕೆಯ ಕ್ರಾಂತಿಕಾರಿ ಯೋಜನೆ ಸರ್ಕಾರದ ಮುಂದೆ ಇದ್ದು ಯೋಜನೆಯ ಪೂರ್ಣ ಪ್ರಮಾಣದ ಪ್ರಗತಿಗೆ ಪಕ್ಷಾತೀತವಾಗಿ ರೈತ ಸಂಘಟನೆಗಳ ಸಹಕಾರ ಅವಶ್ಯವೆಂದು ರವೀಂದ್ರ ನಾಯ್ಕ ತಿಳಿಸಿದರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ