ಆದಿಜಾಂಬವ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಬೇಕು: ಜೈ ಆದಿ ಜಾಂಬವ ಮಹಾಸಭಾ ಒತ್ತಾಯ

Varta Mitra News

 

ಬೆಂಗಳೂರು, ಮೇ 29-ರಾಜ್ಯ ಸಚಿವ ಸಂಪುಟದಲ್ಲಿ ಆದಿಜಾಂಬವ ಜನಾಂಗದ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂದು ಜೈ ಆದಿ ಜಾಂಬವ ಮಹಾಸಭಾ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಭೀಮರಾಜು ಮಾತನಾಡಿ, ಇದುವರೆಗೂ ಆದಿಜಾಂಬವ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ರಾಜ್ಯದಲ್ಲಿ ಸುಮಾರು 1 ಕೋಟಿಯಷ್ಟು ಜನಸಂಖ್ಯೆ ಇರುವ ಆದಿಜಾಂಬವ ಜನಾಂಗದವರು ತುಳಿತಕ್ಕೊಳಗಾಗಿದ್ದಾರೆ ಎಂದರು.

ಯಾವ ರಾಜಕೀಯ ಪಕ್ಷಗಳು ಈ ಜನಾಂಗಕ್ಕೆ ನ್ಯಾಯ ಒದಗಿಸಿಲ್ಲ. ಆದ್ದರಿಂದ ನೂತನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸಚಿವ ಸಂಪುಟದಲ್ಲಿ ನಮ್ಮ ಸಮಾಜದ ಮೂವರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಿಸಿದರು.
ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು, ಆದಿಜಾಂಬವ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು, ಮೇಲ್ಮನೆ ಸದಸ್ಯರನ್ನು ಆಯ್ಕೆ ಮಾಡುವಾಗ ನಮ್ಮ ಜನಾಂಗಕ್ಕೆ ಎರಡು ಸ್ಥಾನಗಳನ್ನು ನೀಡಬೇಕು. ಈ ಜನಾಂಗದ ಭೂ ರಹಿತರಿಗೆ ಸರ್ಕಾರಿ ಜಮೀನು ಮಂಜೂರು ಮಾಡಬೇಕು. ಈ ಜನಾಂಗದ ಕುಂದುಕೊರತೆಗಳ ಬಗ್ಗೆ ಚರ್ಚಿಸಿ 2 ತಿಂಗಳಿಗೊಮ್ಮೆ ಜನಾಂಗದ ಮುಖಂಡರು ಸಭೆ ನಡೆಸಬೇಕು ಎಂದರು.
ಉಪಾಧ್ಯಕ್ಷ ನರಸಿಂಹಯ್ಯ, ರಾಜ್ಯ ಕಾರ್ಯದರ್ಶಿ ಎನ್.ಅಮರ್‍ನಾರಾಯಣ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ