ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ: ಭಯಭೀತರಾಗಿರುವ ಜನತೆ

ರಾಯಚೂರು, ಮೇ 17- ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಜಿಲ್ಲೆಯಾದ್ಯಾಂತ ಹರಡಿದ್ದು ಭಯಭೀತರಾಗಿರುವ ಜನತೆ ರಾತ್ರಿಯೆಲ್ಲಾ ಜಾಗರಣೆಯಿದ್ದು, ಅಪರಿಚಿತ ತಂಡವೊಂದನ್ನು ಥಳಿಸಿರುವ ಘಟನೆ ನಡೆದಿದೆ.
ಎಲ್‍ಬಿಎಸ್‍ನಗರ, ಸಿಯಾತ್ ತಲಾಬ್ ಮತ್ತಿತರ ಬಡಾವಣೆಗಳಲ್ಲಿ ನಿವಾಸಿಗಳು ರಾತ್ರಿಯೆಲ್ಲಾ ನಿದ್ದೆ ಗೆಟ್ಟು ಕಾದು ಕುಳಿತಿದ್ದರು. ಈ ವೇಳೆ ಅಪರಿಚಿತರ ತಂಡ ನಗರದಲ್ಲಿ ಅಡ್ಡಾಡುತ್ತಿದ್ದುದನ್ನು ಕಂಡು ಥಳಿಸಿದ್ದಾರೆ. ಈ ಸಮಯದಲ್ಲಿ ಬಿಗುವಿನ ವಾತಾವರಣ ಉಂಟಾಗಿ ವಿಷಯ ತಿಳಿದು ಪೆÇಲೀಸರು ಸ್ಥಳಕ್ಕೆ ಧಾವಿಸಿ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.
ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆಯಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹಬ್ಬಿದ್ದು ಪೆÇಷಕರು ತೀವ್ರ ಆತಂಕಕ್ಕೊಳಗಾಗಿ ಪೆÇಲೀಸರ ಮೊರೆ ಹೋಗಿದ್ದಾರೆ.
ಕೆಲ ಗ್ರಾಮಗಳಲ್ಲಿ ಜನರು ಬಡಿಗೆಗಳೊಂದಿಗೆ ರಾತ್ರಿಯೆಲ್ಲಾ ಜಾಗರಣೆ ಮಾಡಿ ಅಪರಿಚಿತರು ಯಾರು ಒಳಗೆ ಬರದಂತೆ ನೋಡಿಕೊಂಡರು.
ವದಂತಿ ಸುಳ್ಳು :
ಮಕ್ಕಳ ಕಳ್ಳರ ವದಂತಿ ಹೆಚ್ಚಾಗುತ್ತಿದಂತೆ ಜಿಲ್ಲಾ ಪೆÇಲೀಸ್ ವರಿಷ್ಟಾಧಿಕಾರ ತುರ್ತು ಪತ್ರಿಕಾಗೋಷ್ಠಿ ನಡೆಸಿ ವದಂತಿ ಸುಳ್ಳು ಎಂದು ಸ್ಪಷ್ಟಪಡಿಸಿದರು.
ಸಾರ್ವಜನಿಕರು ಇಂತಹ ವದಂತಿಗಳನ್ನು ನಂಬಬಾರದು ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಬಾರದು ಎಂದು ಮನವಿ ಮಾಡಿದ್ದಾರೆ.
ಅಪರಿಚಿತರ ಮೇಲೆ ದಾಳಿ ಮಾಡಬಾರದು ಕಾನೂನುನನ್ನು ಕೈಗೆ ತೆಗದುಕೊಳ್ಳಬಾರದು ಹಾಗೇನಾದರೂ ಮಾಡಿದರೆ ಕ್ರಮ ತೆಗೆದುಕೊಳಬೇಕಾಗುತ್ತದೆ ಎಂದು ಎಸ್ಪಿ ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ