ಪ್ರಜೆಗಳೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ: ರಾಯಚೂರು ಜಿಲ್ಲಾಡಳಿತ ಮನವಿ

ರಾಯಚೂರು: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ದಿನಾಂಕ:12-05-2018 ಶನಿವಾರದಂದು ಬೆಳಿಗ್ಗೆ 7:00 ಗಂಟೆಯಿಂದ ಸಂಜೆ 6:00 ಗಂಟೆಯವರೆಗೆ ನಡೆಯುತ್ತಿರುವುದು ಮತದಾರರಾದ ತಮ್ಮೆಲ್ಲರಿಗೂ ತಿಳಿದ ಸಂಗತಿ, ಪ್ರಜಾಪ್ರಭುತ್ವದ ಯಶಸ್ಸು ನಿಂತಿರುವುದು ಪ್ರಜೆಗಳೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೇಲೆ. ` ನಮ್ಮ ನಾಯಕರ ಆಯ್ಕೆ ನಮ್ಮ ಹಕ್ಕು’ ಇದು ಪ್ರಜಾಪ್ರಭುತ್ವ ನಮಗೆ ನೀಡಿದ ಹಕ್ಕು, ಸುಭದ್ರ ಮತ್ತು ಸದೃಡ ದೇಶ ನಿರ್ಮಾಣದಲ್ಲಿ ಚುನಾವಣೆಗಳು ಮಹತ್ವದ ಪಾತ್ರ ವಹಿಸುತ್ತವೆ. ಇದಕ್ಕಾಗಿ 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನದ ಪವಿತ್ರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ತುಂಬಾ ಅವಶ್ಯ. “ ಮತದಾನ ಮಹಾದಾನ ” ಎಂದು ತಿಳಿದು 12-05-2018 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ. ಈಗಾಗಲೇ ಜಿಲ್ಲಾಡಳಿತವು ಮತದಾರ ಜಾಗೃತಿ ಅಭಿಯಾನದಂತಹ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಮತದಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವ ಪ್ರಯತ್ನ ಮಾಡಿದೆ. “ For Stronger democracy greater participation” ಈ ಚುನಾವಣೆಯ ಧ್ಯೇಯ ವಾಕ್ಯವಾಗಿದೆ. ದೇಶದ ಭವಿಷ್ಯದ ಹಿತಕ್ಕಾಗಿ ಯೋಗ್ಯ ಪ್ರತಿನಿಧಿಗಳ ಆಯ್ಕೆ ನಿಮ್ಮ ಕೈಯಲ್ಲಿದೆ. ಮತದಾನ ನಿಮ್ಮ ಹಕ್ಕು, ನಿಮ್ಮ ಶಕ್ತಿ. ಬನ್ನಿ ಎಲ್ಲರೂ ಮತದಾನದಲ್ಲಿ ಭಾಗಿಯಾಗಿ ಮತ ಚಲಾಯಿಸಿ, ನಿಷ್ಪಕ್ಷಪಾತ, ನಿರ್ಭೀತ ಮುಕ್ತ ಮತ್ತು ನ್ಯಾಯಯುತ ಚುನಾವಣೆ ನಡೆಸಲು ರಾಯಚೂರು ಜಿಲ್ಲಾಡಳಿತವು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ತಪ್ಪದೇ ಈ ಪವಿತ್ರ ಕಾರ್ಯದಲ್ಲಿ ಭಾಗಿಯಾಗಲು ತಮ್ಮಲ್ಲಿ ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ. “ನಿಮ್ಮದು ಕೇವಲ ಮತವಲ್ಲ ಅದು ಪ್ರಜಾಪ್ರಭುತ್ವದ ಮೌಲ್ಯ” “ನಿಮಗೆ ತಿಳಿದಿರಲಿ ನಿಮ್ಮ ಹಕ್ಕು ಬೆರಳ ತುದಿಗಳಲ್ಲಿದೆ “.

ಮತದಾರರ ಗುರುತಿನ ಚೀಟಿ ಹೊಂದಿದಲ್ಲದೇ ಇದ್ದರೇ ಈ ಕೆಳಗಿನ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು.
1) ಪಾಸಪೋರ್ಟ್, 2) ಡ್ರೈವಿಂಗ್ ಲೈಸೆನ್ಸ್ 3) ಭಾವಚಿತ್ರಹೊಂದಿರುವ ಸೇವಾ ಗುರುತಿನ ಚೀಟಿ 4)ಬ್ಯಾಂಕ ಇಲ್ಲವೇ ಪೋಸ್ಟ ಆಫೀಸ್ ಭಾವಚಿತ್ರವಿರುವ ಪಾಸ್ ಪುಸ್ತಕ 5)ಪಾನ್ ಕಾರ್ಡ 6) ಖಉI ಅಡಿಯಲ್ಲಿನ ಓPಖ ನೀಡಿರುವ ಸ್ಮಾರ್ಟ ಕಾರ್ಡ 7) ಎಂನರೇಗಾ ಜಾಬ್ ಕಾರ್ಡ 8) ಕಾರ್ಮಿಕ ಸಚಿವಾಲಯದಿಂದ ನೀಡಿರುವ ಆರೋಗ್ಯ ವಿಮೆ ಕಾರ್ಡ 9) ಭಾವಚಿತ್ರವಿರುವ ಪಿಂಚಣಿ ದಾಖಲಾತಿ 10) ಎಂಪಿ/ಎಂಎಲಎ/ಎಂಎಲಸಿಗಳಿಗೆ ನೀಡಿರುವ ಗುರುತಿನ ಚೀಟಿ 11) ಆಧಾರ ಕಾರ್ಡ 12) ಭಾವಚಿತ್ರವಿರುವ ಮತದಾರರ ಚೀಟಿ.

ಮೇಲಿನ ಎಲ್ಲಾ ಪ್ರಯತ್ನಗಳನ್ನು ರಾಯಚೂರು ಜಿಲ್ಲೆಯ ಪ್ರತಿಯೊಬ್ಬ ಮತದಾರನು ಮತದಾನದಲ್ಲಿ ಭಾಗವಹಿಸಬೇಕೆಂದು ಜಿಲ್ಲಾಡಳಿತದ ಸದಾಶಯವಾಗಿರುತ್ತದೆ. ಮತದಾನದಲ್ಲಿ ಪ್ರತಿಯೊಬ್ಬರೂ ಭಾಗವಹಿಸುವ ಮೂಲಕ ಜಿಲ್ಲಾಡಳಿತದ ಸದಾಶಯದಂತೆ ಚುನಾವಣೆ ಯಶಸ್ವಿಗೊಳಿಸುತ್ತೀರೆಂದು ಜಿಲ್ಲಾಡಳಿತ ಪ್ರೀತಿಯಿಂದ ಧನ್ಯವಾದಗಳನ್ನು ಹೇಳುತ್ತದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ