ರಾಜ್ಯ ವಿಧಾನಸಭೆ ಚುನಾವಣೆ: ಮತದಾನಕ್ಕೆ ರಾಜ್ಯಾದ್ಯಂತ 56,696 ಮತಗಟ್ಟೆಗಳ ನಿರ್ಮಾಣ

ಬೆಂಗಳೂರು, ಮೇ 10-ರಾಜ್ಯ ವಿಧಾನಸಭೆಗೆ ಇದೇ 12 ರಂದು ಚುನಾವಣೆ ನಡೆಸಲು ಆಯೋಗ ಸಜ್ಜಾಗಿದ್ದು, ಮತದಾನಕ್ಕೆ ರಾಜ್ಯಾದ್ಯಂತ 56,696 ಮತಗಟ್ಟೆಗಳನ್ನು ನಿರ್ಮಿಸಿದೆ.
ರಾಜಧಾನಿ ಬೆಂಗಳೂರಿನಲ್ಲಿ 1595, ಬೆಳಗಾವಿಯಲ್ಲಿ 891, ಮೈಸೂರು-632 ಸೇರಿದಂತೆ ಜಯನಗರ ಹೊರತುಪಡಿಸಿ 223 ಕ್ಷೇತ್ರಗಳಲ್ಲಿ 12,008 ಕ್ರಿಟಿಕಲ್ ಪೆÇೀಲಿಂಗ್ ಸ್ಟೇಷನ್‍ಗಳೆಂದು ಗುರುತಿಸಲಾಗಿದೆ.

ಮುಕ್ತ ಮತ್ತು ಶಾಂತಿಯುತವಾಗಿ ಚುನಾವಣೆ ನಡೆಸಲು ಕ್ರಿಟಿಕಲ್ ಪೆÇೀಲಿಂಗ್ ಸ್ಟೇಷನ್‍ಗೆ ಹೆಡ್‍ಕಾನ್‍ಸ್ಟೆಬಲ್, ಕಾನ್‍ಸ್ಟೆಬಲ್‍ವೊಬ್ಬರನ್ನು, ಸೂಕ್ಷ್ಮ ಮತಗಟ್ಟೆಗೆ ಕಾನ್‍ಸ್ಟೆಬಲ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ, ಸಾಮಾನ್ಯ ಮತಗಟ್ಟೆಗೆ ಒಬ್ಬರು ಕಾನ್‍ಸ್ಟೆಬಲ್‍ನ್ನು ಭದ್ರತೆಗಾಗಿ ನಿಯೋಜಿಸಿದೆ.
ಎಂಟರಿಂದ ಹತ್ತು ಮತಗಟ್ಟೆಗಳ ವ್ಯಾಪ್ತಿಗೆ ಅಧಿಕಾರಿಯೊಬ್ಬರನ್ನು ಉಸ್ತುವಾರಿಗೆ ನೇಮಿಸಲಾಗಿದೆ. ಸಬ್‍ಇನ್ಸ್‍ಪೆಕ್ಟರ್, ಇನ್ಸ್‍ಪೆಕ್ಟರ್, ಡಿವೈಎಸ್‍ಪಿಗಳು ಆಯಾ ವ್ಯಾಪ್ತಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದಾರೆ.

ಸ್ಥಳೀಯ ಪೆÇಲೀಸರ ಜೊತೆಗೆ ಕೇಂದ್ರ ಪಡೆಗಳು ಮತ್ತು ನೆರೆಹೊರೆ ರಾಜ್ಯದ ಪೆÇಲೀಸರೂ ಸಹ ಚುನಾವಣಾ ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.
ಹಿರಿಯ ಅಧಿಕಾರಿಗಳು ಗಸ್ತಿನಲ್ಲಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಿದ್ದಾರೆ.
ಸುಮಾರು ಮೂರು ಲಕ್ಷಕ್ಕೂ ಹೆಚ್ಚು ಮತಗಟ್ಟೆ ಸಿಬ್ಬಂದಿ ನಾಳೆ ಆಯಾ ವಿಧಾನಸಭಾ ಕೇಂದ್ರಗಳಲ್ಲಿ ಸಮಾವೇಶಗೊಂಡು ಚುನಾವಣಾ ಪರಿಕರಗಳೊಂದಿಗೆ ಮತಗಟ್ಟೆಗೆ ತೆರಳಲಿದ್ದಾರೆ. ಇದಕ್ಕಾಗಿ ಸುಮಾರು ಏಳು ಸಾವಿರಕ್ಕೂ ಹೆಚ್ಚು ಬಸ್‍ಗಳು ಸಿದ್ಧವಾಗಿವೆ.
ಪ್ರತಿ ಮತಗಟ್ಟೆಗೆ ಮತಗಟ್ಟೆ ಅಧಿಕಾರಿ ಸೇರಿದಂತೆ ಐವರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

ಪುರುಷರು, ಮಹಿಳೆಯರು, ಸೇವಾ ಮತದಾರರು ಹಾಗೂ ಇತರೆ ಸೇರಿ ಒಟ್ಟು ಐದು ಕೋಟಿಗೂ ಹೆಚ್ಚು ಮತದಾರರಿದ್ದಾರೆ.
ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಈ ಬಾರಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಜೊತೆ ವಿವಿ ಪ್ಯಾಟ್‍ಗಳಿರುವುದರಿಂದ ನಾವು ಮತದಾನ ಯಾರಿಗೆ ಮಾಡಿದ್ದೇವೆ ಎಂಬುದನ್ನು ಖಚಿತಪಡಿಸಿ ಕೊಳ್ಳಬಹುದಾಗಿದೆ.
ಮಲೆನಾಡು, ಕರಾವಳಿ, ನಕ್ಸಲ್ ಭೀತಿ ಇರುವ ಪ್ರದೇಶಗಳಿಗೆ ಹೆಚ್ಚಿನ ಪೆÇಲೀಸ್ ಭದ್ರತೆಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.
ಕೋಮುಗಲಭೆ ಉಂಟಾಗುವ ಪ್ರದೇಶಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೆÇಲೀಸ್ ಭದ್ರತಾ ಸಿಬ್ಬಂದಿಯನ್ನು ನಿಯೋಜನೆ ಮಾಡಲು ನಿರ್ಧರಿಸಲಾಗಿದೆ.
ಹೈವೋಲ್ಟೇಜ್ ಕ್ಷೇತ್ರಗಳ ಮೇಲೆ ಆಯೋಗ ಹದ್ದಿನ ಕಣ್ಣಿಟ್ಟಿದ್ದು, ಚುನಾವಣಾ ಅಕ್ರಮ, ಸಂಭಾವ್ಯ ಅಹಿತಕರ ಘಟನೆಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ