ಗುರುತಿನ ಚೀಟಿ ಪತ್ತೆಯಾದ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ:ಶಾಸಕ ಮುನಿರತ್ನ ಸ್ಪಷ್ಟನೆ

ಬೆಂಗಳೂರು, ಮೇ 10-ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್‍ಮೆಂಟ್‍ವೊಂದರಲ್ಲಿ ಸಾವಿರಾರು ಮತದಾನದ ಗುರುತಿನ ಚೀಟಿ ಪತ್ತೆಯಾದ ಪ್ರಕರಣಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಮುನಿರತ್ನ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಎಸ್‍ಎಲ್‍ವಿ ಅಪಾರ್ಟ್‍ಮೆಂಟ್‍ನಲ್ಲಿ ವೋಟರ್ ಐಡಿಗಳು ಪತ್ತೆಯಾಗಿರುವುದರಲ್ಲಿ ಬಿಜೆಪಿ ಕೈವಾಡವಿದೆ. ನನ್ನ ಭಾವಚಿತ್ರವಿರುವ ಕರಪತ್ರಗಳನ್ನು ಅಲ್ಲಿ ಇದ್ದುದ್ದಕ್ಕೆ ನನ್ನ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ನಾನು ಸುಮಾರು 40 ಸಾವಿರ ಕರಪತ್ರಗಳನ್ನು ಆಯೋಗದ ಅನುಮತಿ ಪಡೆದು ಹಂಚಿದ್ದೇನೆ. ಪ್ರತಿ ಮನೆಯಲ್ಲೂ ನನ್ನ ಕರಪತ್ರಗಳಿವೆ. ನನ್ನ ಫೆÇೀಟೋ ಇರುವ ವಾಟರ್‍ಕ್ಯಾನ್ ಮತ್ತು ಕರಪತ್ರ ಇದೆ ಎಂದು ನನ್ನ ಮೇಲೆ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ನನಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಈ ಅಪಾರ್ಟ್‍ಮೆಂಟ್‍ಗೆ ಬಿಜೆಪಿ ಕಾರ್ಯಕರ್ತರು ಬಂದು ನೋಡಿದಾಗ ಕೂಗಳತೆಯಲ್ಲಿರುವ ಪೆÇಲೀಸ್ ಸ್ಟೇಷನ್‍ಗೆ ದೂರು ನೀಡಬೇಕಿತ್ತು. ಪೆÇಲೀಸರು ಬರುವ ಮುಂಚೆಯೇ ಇವರು ವಿಡಿಯೋ ಮಾಡುವುದರ ಅಗತ್ಯವೇನಿತ್ತು? ಈ ವೋಟರ್‍ಐಡಿಗಳೆಲ್ಲಾ ಸ್ಲಂಗೆ ಸೇರಿದವು. ಅಲ್ಪಸಂಖ್ಯಾತರು ಮತ್ತು ದಲಿತರವು. ಅವೆಲ್ಲ ಕಾಂಗ್ರೆಸ್ ವೋಟ್‍ಬ್ಯಾಂಕ್. ಇವುಗಳನ್ನು ಪಡೆಯುವ ಅಗತ್ಯ ನಮಗೆ ಇಲ್ಲ. ಇದೆಲ್ಲ ಬಿಜೆಪಿಯವರ ಕೈವಾಡ. ಹಿಂದೆ ಹೆಬ್ಬಾಳ ಕ್ಷೇತ್ರದಲ್ಲೂ ಇದೇ ರೀತಿ ಬಿಜೆಪಿಯವರು ಮಾಡಿದ್ದರು ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ