ವಿಜಯಪುರ-ಯಾರ ಮುಡಿಗೆ?

* ಕಡೇ ಆಟ ರೋಚಕ !

* ಬಹಿರಂಗ ಪ್ರಚಾರಕ್ಕೆ ಇಂದು ತೆರೆ.

* ನಾಳೆ ಆಂತರಿಕ ಮತಬೇಟೆ ಹಾಗೂ ಅಂತಿಮ ಕಸರತ್ತು.

* ಶನಿವಾರ ಮತದಾನ ನಡೆಸಲು ಚುನಾವಣೆ ಆಯೋಗ ಸಿದ್ಧತೆ.

* ಕಳೆದ 10 ದಿನ ಜಿಲ್ಲೆಯಲ್ಲಿ ಜೋರಾಗಿದ್ದ ಪ್ರಚಾರದ ಭರಾಟೆ.

* ಮನೆ, ಮನೆಗೆ ಎಡತಾಕುತ್ತಿರುವ ರಾಜಕೀಯ ಮುಖಂಡರು ಹಾಗೂ ಅಭ್ಯರ್ಥಿಗಳು.
________
* ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ, ಮಾಜಿ ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಪ್ರಚಾರ.

* ಕಾಂಗ್ರೆಸ್ನಿಂದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಸಿಎಂ ಸಿದ್ಧರಾಮಯ್ಯ, ಸುಶೀಲಕುಮಾರ್ ಶಿಂಧೆ, ಅಶೊಕ ಚವ್ಹಾಣ, ಸಿ.ಎಂ.ಇಬ್ರಾಹಿಂ ಪ್ರಚಾರ.

* ಬಬಲೇಶ್ವರ ಮತಕ್ಷೇತ್ರದಲ್ಲಿ ಸಚಿವ ಎಂ.ಬಿ.ಪಾಟೀಲ ಪರ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ಕೈಗೊಂಡಿದ್ದರು.

* ಜೆಡಿಎಸ್’ನಿಂದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಎರಡು ಬಾರಿ ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು.
________
* ಗೆಲ್ಲಲು ಜಿಲ್ಲೆಯ ಎಂಟು ಮತಕ್ಷೇತ್ರಗಳಲ್ಲಿ ಕೊನೆಯ ಕ್ಷಣದ ರಣತಂತ್ರ.

* ಆರು ಕಡೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ.

* ಇಂಡಿ, ಮುದ್ದೇಬಿಹಾಳದಲ್ಲಿ ಮಾತ್ರ ಬಹುಕೋನ ಪೈಪೆÇೀಟಿ.

* ಪ್ರಮುಖ ಪಕ್ಷಗಳ ಗೆಲುವಿಗೆ ಬಂಡಾಯ, ಪಕ್ಷೇತರರ ಅಡ್ಡಗಾಲು.

* ಜಾತಿ, ಮತ ಸೆಳೆಯಲು ಅಂತಿಮ ಕಸರತ್ತು.

* ಜಿಲ್ಲೆಯ 8 ಮತಕ್ಷೇತ್ರಗಳಲ್ಲಿ 85 ಅಭ್ಯರ್ಥಿಗಳು ಕಣದಲ್ಲಿ.

* ಆರು ಕಡೆ ತ್ರಿಕೊನ, ಎರಡು ಕಡೆ ಬಹುಕೋನ, ಉಳಿದ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಹ ಸ್ಥಿತಿ.

* ಎಲ್ಲೆಡೆ ಸೋಲು ಗೆಲುವಿನ ಲೆಕ್ಕಾಚಾರ.

* ನಿರ್ಣಾಯಕ ಸ್ಥಿತಿಗೆ ತಲುಪಿದ ಜಿದ್ದಾಜಿದ್ದಿಯ ರಾಜಕಾರಣ.
________
* ಬಬಲೇಶ್ವರ ಮತಕ್ಷೇತ್ರ ರಾಜ್ಯದ ಹೈ ವೋಲ್ಟೇಜ್ ಮತಕ್ಷೇತ್ರ.

* ಪಾಟೀಲರ ನಡುವೆ ಜಂಗೀ ಕುಸ್ತಿ.

* ಕಾಂಗ್ರೆಸ್ ಅಭ್ಯರ್ಥಿ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹಾಗೂ ವಿಜಯಕುಮಾರ ಪಾಟೀಲ್ ನಡುವೆ ನೇರ ಹಣಾಹಣಿ.

* ಇಬ್ಬರಿಗೂ ಮಾಡು ಇಲ್ಲವೆ ಮಡಿ ಹೊರಾಟ.

* ಲಿಂಗಾಯತ ಪ್ರತ್ಯೇಕ ಧರ್ಮ, ನೀರಾವರಿ ಮತ್ತು ಸೋಲಿನ ಅನುಕಂಪ ವಿಷಯಗಳ ಮೇಲೆ ಮತಬೇಟೆ.
________
* ವಿಜಯಪುರ ನಗರದಲ್ಲಿ ಎಸ್.ಕೆ.ಬೆಳ್ಳುಬ್ಬಿ ಯಾರಿಗೆ ಅಡ್ಡ?

* ವಿಜಯಪುರ ನಗರದಲ್ಲಿ ಸಹ ಹೈ ಟೆನ್ಶನ್.

* ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ, ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಮುಷ್ರೀಫ್ ನಡುವೆ ಹಣಾಹಣಿ.

* ಬಸವನ ಬಾಗೇವಾಡಿಯಿಂದ ವಲಸೆ ಬಂದು, ಬಿಜೆಪಿ ತೊರೆದು, ಜೆಡಿಎಸ್’ನಿಂದ ಸ್ಪರ್ಧಿಸಿರುವ ಎಸ್.ಕೆ.ಬೆಳ್ಲುಬ್ಬಿ ಅಡ್ಡಗಾಲು.

* ಇಬ್ಬರ ಕಾಳಗದಲ್ಲಿ ನನಗೇ ಗೆಲುವು ಎನ್ನುತ್ತಿರುವ ಬೆಳ್ಳುಬ್ಬಿ.

* ಯತ್ನಾಳ ಹಾಗೂ ಮುಷ್ರೀಫ್ ನಡುವೆ ಯಾರಿಗೆ ಮುಳ್ಳಾಗುತ್ತಾರೆ ಬೆಳ್ಲುಬ್ಬಿ ಎಂಬ ಕುತೋಹಲ.
________
* ಇಂಡಿ ಗೆಲುವು ನಿಗೂಢ

* ಇಂಡಿ ಮತಕ್ಷೆತ್ರದ ರಾಜಕಾರಣ ಇತರ ಕ್ಷೇತ್ರಗಳಿಗಿಂತ ಭಿನ್ನ.

* ಕಾಂಗ್ರೆಸ್ಸಿನ ಯಶವಂತರಾಯಗೌಡ ಪಾಟೀಲ್, ಪಕ್ಷೇತರ ಅಭ್ಯರ್ಥಿ ರವಿಕಾಂತ ಪಾಟೀಲ್, ಬಿಜೆಪಿಯ ದಯಾಸಾಗರ ಪಾಟೀಲ್, ಜೆಡಿಎಸ್’ನ ಬಿ.ಡಿ.ಪಾಟೀಲರ ನಡುವೆ ಪ್ರಭಲ ಪೈಪೆÇೀಟಿ.

* ಪಕ್ಷೇತರ ರವಿಕಾಂತ ಪಾಟೀಲ್ ಬಿಜೆಪಿಯ ದಯಾಸಾಗರ ಪಾಟೀಲರಿಗೆ ಮಗ್ಗುಲ ಮುಳ್ಲು.

* ಜೆ.ಡಿ.ಎಸ್’ನ ಬಿ.ಡಿ.ಪಾಟೀಲ್ ಹಾಲಿ ಶಾಸಕ ಯಶವಂತರಾಯಗೌಡರಿಗೆ ಅಡ್ಡಗಾಲು.

* ಮಹಾದೇವ ಸಾಹುಕಾರ ಬೈರಗೊಂಡ ಬೆಂಬಲ ಯಾರಿಗೆ?

* ಗಂಟೆಗೊಂದು ತಿರುವು ಪಡೆದುಕೊಳ್ಲುತ್ತಿರುವ ಕದನ ಕಣ.

* ಯಾರೇ ಗೆದ್ದರೂ ಪಾಟೀಲರೇ ಆದರೂ ಯಾವ ಪಾಟೀಲ? ಎನ್ನುವುದು ನಿಗೂಢ.
________
* ಬಸವನ ಬಾಗೇವಾಡಿ ಯಾರ ಮುಡಿಗೆ?

* ಸಮ ಸಮಾಜದ ನಿರ್ಮಾತೃ ಅಣ್ಣ ಬಸವಣ್ಣನ ನೆಲದಲ್ಲಿ ಈ ಸಲ ಜಾತಿ ಆಧಾರಿತ ಚುನಾವಣೆ.

* ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಶಿವಾನಂದ ಪಾಟೀಲರಿಗೆ ಪ್ರಭಲ ಪೈಪೆÇೀಟಿ ನೀಡುತ್ತಿರುವ ಜೆಡಿಎಸ್ ಅಭ್ಯರ್ಥಿ ಸೋಮನಗೌಡ ಪಾಟೀಲ್ (ಮನಗೂಳಿ)

* ಬಿಜೆಪಿ ಟಿಕೆಟ್ ವಂಚಿತ, ಮಾಜಿ ಸಚಿವ ಬೆಳ್ಳುಬ್ಬಿ ಬೆಂಬಲ ಜೆಡಿಎಸ್ ಅಭ್ಯರ್ಥಿಗೆ.

* ಇವರಿಬ್ಬರಿಗೆ ಟಾಂಗ್ ಕೊಡಲು ಮುಂದಾಗಿರುವ ಬಿಜೆಪಿ ಅಭ್ಯರ್ಥಿ ಸಂಗರಾಜ ದೇಸಾಯಿ.

* ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ, ಆಂತರಿಕವಾಗಿ ಜಾತಿ ಆಧಾರಿತ ಚುನಾವಣೆ.
________
* ಮುದ್ದೇಬಿಹಾಳದಲ್ಲಿ ನಾಡಗೌಡರಿಗೆ ಪಂಚರ ಕಾಟ

* ಮುದ್ದೇಬಿಹಾಳ ಮತಕ್ಷೇತ್ರವನ್ನ ಇದುವರೆಗೂ ಆಳಿದ ದೇಶಮುಖ್ ಹಾಗೂ ನಾಡಗೌಡ ಮನೆತನ.

* ನಾಡಗೌಡರ ನಾಗಾಲೋಟಕ್ಕೆ ಬ್ರೇಕ್ ಹಾಕಲು ನಡಹಳ್ಳಿ ಹಾಗೂ ಮಂಗಳಾದೇವಿ ಕಸರತ್ತು.

* ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ), ಬಿಜೆಪಿಯಿಂದ ಎ.ಎಸ್.ಪಾಟೀಲ್ ನಡಹಳ್ಳಿ, ಜೆಡಿಎಸ್’ನಿಂದ ಮಂಗಳಾದೇವಿ ಬಿರಾದಾರ ಗೆಲ್ಲಲು ಕಸರತ್ತು.

* ಇವರೊಂದಿಗೆ ಜನಸಾಮಾನ್ಯರ ಪಕ್ಷದ ಡಾ.ಅಯ್ಯಪ್ಪ ದೊರೆ, ಪಕ್ಷೇತರ ಅಭ್ಯರ್ಥಿ ಗಂಗಾಧರರಾವ್ ನಾಡಗೌಡ @ ಮುನ್ನಾಧಣಿ (ಶಾಸಕ ನಾಡಗೌಡರ ಸಹೋದರ) ಹಾಗೂ ನಮ್ಮ ಕಾಂಗ್ರೆಸ್ ಪಕ್ಷದ ರಕ್ಷಿತ್ ವರ್ತೂರು ಪಡೆಯುವ ಮತಗಳು ಪ್ರಮುಖ ಪಕ್ಷಗಳ ಗೆಲುವಿಗೆ ಅಡ್ಡಗಾಲು.
________
* ದೇವರ ಹಿಪ್ಪರಗಿ ವಾರಸುದಾರ ಯಾರು?

* ದೇವರ ಹಿಪ್ಪರಗಿ ಮತಕ್ಷೇತ್ರದ ಪುನರ್ ವಿಂಗಡಣೆ ಬಳಿಕ ಸತತ ಎರಡು ಬಾರಿ ಕಾಂಗ್ರೆಸ್ ಗೆಲುವು.

* ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎ.ಎಸ್.ಪಾಟೀಲ್ ನಡಹಳ್ಳಿ ಶಾಸಕರಾಗಿ ಆಯ್ಕೆ.

* ಕ್ಷೇತ್ರ ಹಾಗೂ ಪಕ್ಷ ಬದಲಿಸಿದ ನಡಹಳ್ಳಿ.

* ಬಿಜೆಪಿಯ ಸೋಮನಗೌಡ ಪಾಟೀಲ್ (ಸಾಸನೂರ), ಜೆಡಿಎಸ್’ನ ಭೀಮನಗೌಡ ಪಾಟೀಲ್ @ ರಾಜುಗೌಡ (ಕುದರಿ ಸಾಲವಾಡಗಿ) ಇಬ್ಬರಿಗೂ ಕಳೆದ ಚುನಾವಣೆಯ ಸೋಲಿನ ಅನುಕಂಪದ ಕಾರಣ ಪ್ರಭಲ ಸ್ಪರ್ಧೆ.

* ಇವರಿಬ್ಬರಿಗೂ ಟಕ್ಕರ್ ನೀಡಲು ಸಜ್ಜಾಗಿರುವ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್.ಪಾಟೀಲ್ (ಯಾಳಗಿ).
________
* ಸಿಂದಗಿ ಜಿಂದಗಿ ಯಾರಿಗೆ?

* 2004ರಿಂದ ಬಿಜೆಪಿ ಭದ್ರಕೊಟೆಯಾಗಿರುವ ಸಿಂದಗಿ ಮತಕ್ಷೇತ್ರ.

* ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಹಾಲಿ ಬಿಜೆಪಿ ಶಾಸಕ ರಮೇಶ ಭೂಸನೂರ.

* ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ.

* ಬಿಜೆಪಿಯ ರಮೇಶ ಭೂಸನೂರ, ಜೆಡಿಎಸ್’ನ ಎಂ.ಸಿ.ಮನಗೂಳಿ, ಕಾಂಗ್ರೆಸ್’ನ ಮಲ್ಲಣ್ಣ ಸಾಲಿ ನಡುವೆ ತೀರ್ವ ಪೈಪೆÇೀಟಿ.

* ಗೆಲುವಿಗೆ ರಣತಂತ್ರ ರೂಪಿಸಿ ಹಾಲುಮತ ಸಮಾಜದ ಅಭ್ಯರ್ಥಿ ಕಣಕ್ಕಿಳಿಸಿದ ಕಾಂಗ್ರೆಸ್.

* ಕೊನೆಯ ಚುನಾವಣೆ ಎಂದು ಅನುಕಂಪ ಗಿಟ್ಟಿಸುತ್ತಿರುವ ಮಾಜಿ ಸಚಿವ, ಜೆಡಿಎಸ್’ನ ಎಂ.ಸಿ.ಮನಗೂಳಿ.

* ಬಿಜೆಪಿಯ ರಮೇಶ ಭೂಸನೂರ ಹಾಗೂ ಜೆಡಿಎಸ್’ನ ಎಂ.ಸಿ.ಮನಗೂಳಿ ನಡುವೆ ನೇರ ಹಣಾಹಣಿ.
________
* ನಾಗಠಾಣಕ್ಕೆ ಗಟ್ಟಿಗನ್ಯಾರು?

* ಅಭ್ಯರ್ಥಿ ಆಯ್ಕೆಯಲ್ಲೂ ಗೌಪ್ಯತೆ ಕಾಪಾಡಿಕೊಂಡಿದ್ದ ಎರಡು ರಾಷ್ಟ್ರೀಯ ಪಕ್ಷಗಳು ನಾಗಠಾಣ ಮೀಸಲು ಮತಕ್ಷೇತ್ರವನ್ನ ಪ್ರತಿಷ್ಠೆಯಾಗಿ ಪರಿಗಣಿಸಿವೆ.

* ಕಳೆದ ಚುನಾವಣೆಯಲ್ಲಿ ಕೆಲವೇ ಮತಗಳ ಅಂತರದ ಸೋಲಿನ ಅನುಕಂಪ ಗಿಟ್ಟಿಸುವ ತವಕದಲ್ಲಿರುವ ಜೆಡಿಎಸ್ ಅಭ್ಯರ್ಥಿ ದೇವಾನಂದ ಚೌವ್ಹಾಣ.

* ಬಿಜೆಪಿ ಟಿಕೆಟ್ ವಂಚಿತರಾದ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ ಕಟಕಧೋಂಡ ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ.

* ಇಬ್ಬರಿಗೂ ಟಕ್ಕರ್ ಕೊಡಲು ಹಿರಿತಲೆಗಳ ಅಣತಿಯಂತೆ ಬಿಜೆಪಿಯಿಂದ ಕಣಕ್ಕಿಳಿದ ಅಭ್ಯರ್ಥಿ ಡಾ.ಗೋಪಾಲ ಕಾರಜೋಳ.

* ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ, ಜೆಡಿಎಸ್ ಅಭ್ಯರ್ಥಿಗೆ ಅನುಕಂಪ ಸಾಧ್ಯತೆ.
——————————
ಚುನಾವಣೆ: ವಿಜಯಪುರ ಜಿಲ್ಲಾದ್ಯಂತ ಇಂದಿನಿಂದ ನಿಷೇಧಾಜ್ಞೆ

* ಜಿಲ್ಲಾದ್ಯಂತ ಮತದಾನ ಮುಕ್ತಾಯಗೊಳ್ಳುವ ಅವಧಿಯ 48 ಗಂಟೆಗಳ ಪೂರ್ವದಲ್ಲಿ ಕಲಂ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಸ್.ಬಿ.ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

* ಮೇ ಹತ್ತರ ಸಂಜೆ ಆರರಿಂದ ಹದಿಮೂರರ ಸಂಜೆ ಆರರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಅಥವಾ ರಾಜಕೀಯ ಸಭೆ, ಸಮಾರಂಭ ನಡೆಸುವಂತಿಲ್ಲ.

* ಚುನಾವಣಾ ಅಭ್ಯರ್ಥಿಗಳು, ಬೆಂಬಲಿಗರು ಮನೆ ಮನೆಗೆ ತೆರಳಿ ಪ್ರಚಾರ ಮಾಡಬಹುದು.

* ಆದರೆ ಹತ್ತಕ್ಕಿಂತ ಹೆಚ್ಚು ಜನರು ಸೇರಬಾರದು, ಯಾವುದೇ ಮಾರಕಾಸ್ತ್ರಗಳೋಂದಿಗೆ ತಿರುಗಾಡುವುದನ್ನು ನಿಷೇಧಿಸಲಾಗಿದೆ.

* ಮನುಷ್ಯರ ಶವ ಅಥವಾ ಅವುಗಳ ಆಕೃತಿ ಹಾಗೂ ಪ್ರತಿಮೆಗಳನ್ನ ಪ್ರದರ್ಶನವನ್ನು ನಿರ್ಬಂಧಿಸಲಾಗಿದೆ.

* ಜಿಲ್ಲಾದ್ಯಂತ ಬಹಿರಂಗ ಘೋಷಣೆ, ಪದ ಹಾಡುವುದು, ವಾದ್ಯ ಬಾರಿಸುವುದು, ಸಾರ್ವಜನಿಕವಾಗಿ ಪ್ರಚೋದನಾತ್ಮಕವಾಗಿ ಹಾಗೂ ಉದ್ರೇಕಕಾರಿ ಭಾಷಣ ಮಾಡುವುದು, ಹಾಡುಗಳು, ಕೂಗಾಟ, ವ್ಯಕ್ತಿಗಳ ತೇಜೋವಧೆ ಮಾಡುವಂಥ ಚಿತ್ರಗಳು, ಚಿನ್ಹೆಗಳು, ಪ್ರತಿಕೃತಿ ಪ್ರದರ್ಶನ ಮಾಡುವಂತಿಲ್ಲ.
________
* ಯಾವುದಕ್ಕೆ ಅನ್ವಯಿಸಲ್ಲ

ಶವಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ನಿಷೇಧಾಜ್ಞೆ ಅನ್ವಯಿಸುವುದಿಲ್ಲ.

* ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಯಮಗಳನ್ನು ಪಾಲಿಸಬೇಕು.

* ಉಲ್ಲಂಘಿಸಿದರೆ ಕ್ರಮ ನಿಶ್ಚಿತ.

* ಈ ಆದೇಶ ಮತದಾನ ಸಿಬ್ಬಂದಿ, ಅಧಿಕಾರಿಗಳಿಗೆ, ಪೆÇಲೀಸ್ ಅಧಿಕಾರಿಗಳಿಗೆ ಹಾಗೂ ಒಬ್ಬೊಬ್ಬರಾಗಿ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುವ ಮತದಾರರಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.
________
* ಪಾನ ನಿರೋಧ ದಿನ ಘೋಷಣೆ

ಮೇ ಹತ್ತರ ಸಂಜೆ ಐದರಿಂದ ಮೇ ಹದಿಮೂರರ ಬೆಳಿಗ್ಗೆ ಆರರವರೆಗೆ ಹಾಗೂ ಮತ ಎಣಿಕೆ ಪ್ರಯುಕ್ತ ಮೇ ಹದಿನಾಲ್ಕರ ಮಧ್ಯರಾತ್ರಿಯಿಂದ ಮೇ ಹದಿನಾರರ ಬೆಳಿಗ್ಗೆ ಆರರವರೆಗೆ ಪಾನ ನಿರೊಧ ದಿನ ಘೋಷಿಸಿ ಆದೇಶಿಸಲಾಗಿದೆ.
________

ಎಲ್ಲರೂ ತಪ್ಪದೇ ಮತದಾನ ಮಾಡಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ