ನಾಪತ್ತೆಯಾಗಿದ್ದ ಎಸ್ಟೇಟ್ ಮಾಲೀಕ ಶವವಾಗಿ ಪತ್ತೆ!

ಗೌರೀಬಿದನೂರು ,ಮೇ 7- ತಾಲ್ಲೂಕಿನ ಗೊಡ್ಡಾವಲಹಳ್ಳಿ ಗ್ರಾಮದ ತೋಟದ ಮನೆಗೆ ಪತ್ನಿಯೊಂದಿಗೆ ಬಂದು ನಾಪತ್ತೆಯಾಗಿದ್ದ ಎಸ್ಟೇಟ್ ಮಾಲೀಕ, ಬೆಂಗಳೂರಿನ ನಿವಾಸಿ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರು ಆರ್‍ಟಿ.ನಗರ ಬಡಾವಣೆಯ ಬಿಇಎಲ್ ಸಂಸ್ಥೆಯ ನಿವೃತ್ತ ನೌಕರ ಕರೀಂಖಾನ್ ಕೊಲೆಯಾಗಿರುವ ಎಸ್ಟೇಟ್ ಮಾಲೀಕ. ತಾಲೂಕಿನ ಗೊಡ್ಡಾವಲಹಳ್ಳಿ ಗ್ರಾಮದ ಹೊರಹೊಲಯದಲ್ಲಿ ಕರೀಂಖಾನ್ ತೋಟವನ್ನು ಖರೀದಿ ಮಾಡಿದ್ದು, ಆಗಾಗ್ಗೆ ತೋಟದ ಮನೆಗೆ ಬಂದು ವ್ಯವಸಾಯ ಮಾಡಿಸುತ್ತಿದ್ದರು ಎನ್ನಲಾಗಿದೆ.
ಮೇ 2ರಂದು ಅವರು ತಮ್ಮ ಪತ್ನಿಯೊಂದಿಗೆ ತೋಟದ ಮನೆಗೆ ಆಗಮಿಸಿದ್ದರು. ರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಇವರು ಮರುದಿನ ಬೆಳೆಗ್ಗೆ 6 ಗಂಟೆಯಲ್ಲಿ ಕರೀಂಖಾನ್ ಅವರು ಲುಂಗಿ, ಬನೀನ್‍ನಲ್ಲೇ ಹೊರಗೆ ಹೋಗಿದ್ದಾಗ ನಾಪತ್ತೆಯಾಗಿದ್ದರು. ಇದೇ ಸಮಯದಲ್ಲೇ ತೋಟದ ಕೆಲಸಕ್ಕಿದ್ದ ಅಸ್ಸೋಂ ಮೂಲದ ದಂಪತಿ ಸಹ ಕಾಣೆಯಾಗಿದ್ದರು.
ಇದರಿಂದ ಗಾಬರಿಯಾದ ಕರೀಂಖಾನ್ ಅವರ ಪತ್ನಿ ತಮ್ಮ ಮಗನಿಗೆ ವಿಷಯ ತಿಳಿಸಿ ಪೆÇಲೀಸರ ನೆರವು ಪಡೆಯುವಂತೆ ಹೇಳಿದ್ದರು.
ಈ ನಡುವೆ ಮೇ 3ರಂದು ಕರೀಂಖಾನ್‍ರ ಮಗನ ಮೊಬೈಲ್‍ಗೆ ಕರೆ ಮಾಡಿದ ಅನಾಮದೇಯ ವ್ಯಕ್ತಿ ನಿಮ್ಮ ತಂದೆಯನ್ನು ನಾವು ಅಪಹರಿಸಿದ್ದೇವೆ. 70 ಲಕ್ಷ ರೂ. ನೀಡಿದರೆ ಬಿಡುವುದಾಗಿ ತಿಳಿಸಿದ್ದಾರೆ.
ಇದರಿಂದ ಗಾಬರಿಯಾದ ಕರೀಂಖಾನ್‍ರ ಮಗ ಅಯೂಬ್‍ಖಾನ್, ಹಣಹೊಂದಿಸಲು ತಮಗೆ ಒಂದು ದಿನ ಕಾಲಾವಕಾಶ ಕೊಡಬೇಕೆಂದು ಕೋರಿದ್ದರಿಂದ ಮೇ 4 ರಂದು ಅಪಹರಣಕಾರರು ಪೆÇೀನ್ ಕರೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಅಪಹರಣಕಾರರಿಂದ ಯಾವುದೇ ಕರೆ ಬಾರದ ಕಾರಣ ಭಯಬೀತನಾಗಿ ಅಯೂಬ್‍ಖಾನ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ತನಿಖೆ ನಡೆಸಿದಾಗ ಎಸ್ಟೇಟ್ ಸಮೀಪದ ಪಾಳುಬಾವಿಯಲ್ಲಿ ಅನುಮಾನಾಸ್ಪದವಾಗಿ ಬಿದ್ದಿದ್ದ ಮೂಟೆಯನ್ನು ತೆಗೆದು ನೋಡಿದಾಗ ಅದರಲ್ಲಿ ಕರಿಂಖಾನ್ ಅವರ ಶವ ಪತ್ತೆಯಾಗಿದೆ.
ದುಷ್ಕರ್ಮಿಗಳು ಇವರನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ಕಟ್ಟಿ ಪಾಳು ಬಾವಿಗೆ ಎಸೆದು ಪರಾರಿಯಾಗಿರುವುದು ಗಮನಕ್ಕೆ ಬಂದಿದೆ.
ತೋಟದಲ್ಲಿ ಕೆಲಸಕ್ಕಿದ್ದ ಅಸ್ಸೋಂ ಮೂಲದ ದಂಪತಿ ಬಗ್ಗೆ ಪೆÇಲೀಸರು ಅನುಮಾನ ವ್ಯಕ್ತಪಡಿಸಿ ತನಿಖೆ ಕೈಗೊಂಡರು.
ದಂಪತಿ ರೈಲಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಎಸ್‍ಪಿ ಕಾರ್ತಿಕ್‍ರೆಡ್ಡಿ ಅವರು, ಖುದ್ದು ಸಿಬ್ಬಂದಿಗಳೊಂದಿಗೆ ವಿಮಾನದಲ್ಲಿ ತೆರಳಿ ಕೋಲ್ಕತ್ತಾದಲ್ಲಿ ಇಳಿದು ಔರಾ ರೈಲ್ವೆ ನಿಲ್ದಾಣಕ್ಕೆ ಬಂದು ದಂಪತಿಯನ್ನು ವಶಕ್ಕೆ ತೆಗೆದುಕೊಂಡು ಗೌರಿಬಿದನೂರಿಗೆ ವಾಪಾಸ್ ಆಗಿದ್ದಾರೆ.
ದಂಪತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ಪ್ರಕರಣದಲ್ಲಿ ಇನ್ನಿಬ್ಬರ ಕೈವಾಡ ಇರುವ ಬಗ್ಗೆ ಮಾಹಿತಿ ಪಡೆದು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಗ್ರಾಮಾಂತರ ಠಾಣೆ ಎಸೈ ಚಂದ್ರಶೇಖರ್ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ