ಅಣಕು ಮತದಾನ ಪ್ರದರ್ಶನ ಮೂಲಕ ಸಾರ್ವಜನಿಕರಲ್ಲಿ ಅರಿವು

ಬೆಂಗಳೂರು, ಮೇ 7- ನಗರದ ಖಾಸಗಿ ಕಾಲೇಜಿನಲ್ಲಿ ಅಣಕು ಮತದಾನ ಪ್ರದರ್ಶನ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಅಧಿಕಾರಿಗಳು ಅರಿವು ಮೂಡಿಸಿದರು.
ಖಾಸಗಿ ಕಾಲೇಜಿನಲ್ಲಿ ಇಂದು ಹಮ್ಮಿಕೊಂಡಿದ್ದ ಈ ಅಣಕು ಮತದಾನದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಏಜೆಂಟರು ಪಾಲ್ಗೊಂಡಿದ್ದರು.

ಕಾಲೇಜಿನ ಮೇಲ್ಭಾಗದ ಕೊಠಡಿಯಲ್ಲಿ ಅಕಣು ಮತದಾನ ಪ್ರದರ್ಶನ ಹಮ್ಮಿಕೊಂಡಿದ್ದರಿಂದ ಕೆಲವು ವಿಕಲಚೇತನ ಅಧಿಕಾರಿಗಳು ಮೆಟ್ಟಿಲು ಹತ್ತಲಾಗದೆ ತೊಂದರೆ ಅನುಭವಿಸಬೇಕಾಯಿತು.

ಈ ರೀತಿ ಬೇರೆ ಎಲ್ಲೂ ಆಗದಂತೆ ನೋಡಿಕೊಳ್ಳಬೇಕು. ಸಾಧ್ಯವಾದಷ್ಟು ಕೆಳ ಮಹಡಿಯಲ್ಲೇ ವಿಕಲಚೇತನರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು. ಒಂದು ವೇಳೆ ಮಹಡಿಯಲ್ಲಿ ಕಚೇರಿ ಇದ್ದರೆ ಲಿಫ್ಟ್ ವ್ಯವಸ್ಥೆ ಇರಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡಲಾಯಿತು.
ಕಾಲೇಜಿನಲ್ಲಿ ಭದ್ರತಾ ಕೊಠಡಿಯನ್ನು ತೆರೆಯಲಾಗಿದ್ದು , ತಹಶೀಲ್ದಾರ್ ಮಂಜುನಾಥ್, ಉಪವಿಭಾಗಾಧಿಕಾರಿ ಜಗದೀಶ್ ಪರಿಶೀಲನೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ