ಗುಂಡ್ಲುಪೇಟೆ ಪಂಚಾಯತ್‍ರಾಜ್ ಸಹಾಯಕ ಅಭಿಯಂತರ ಎನ್.ರವಿಕುಮಾರ್ ಅವರ ಅತಿ ಹೆಚ್ಚು ಚರ ಸ್ಥಿರ ಆಸ್ತಿ ಪತ್ತೆ

ಬೆಂಗಳೂರು, ಮೇ 7-ಕಳೆದ ನಾಲ್ಕರಂದು ನಾಲ್ಕು ಸರ್ಕಾರಿ ಅಧಿಕಾರಿಗಳ ಮೇಲೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳು ದಾಳಿ ಮಾಡಿದ್ದ ವೇಳೆ ಗುಂಡ್ಲುಪೇಟೆ ಪಂಚಾಯತ್‍ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಅಭಿಯಂತರ ಎನ್.ರವಿಕುಮಾರ್ ಅತಿ ಹೆಚ್ಚು ಚರ ಸ್ಥಿರ ಆಸ್ತಿ ಹೊಂದಿರುವುದು ಪತ್ತೆಯಾಗಿದೆ.
ಎಸಿಬಿ ಅಧಿಕಾರಿಗಳು ನಾಲ್ಕು ಅಧಿಕಾರಿಗಳ ವಿರುದ್ಧ ದಾಳಿ ನಡೆಸಿ ಪರಿಶೀಲನೆ ವೇಳೆ ಪತ್ತೆಯಾದ ಚರ ಸ್ಥಿರ ಆಸ್ತಿಗಳ ವಿವರವನ್ನು ಪ್ರಕಟಿಸಿದ್ದು ಈ ಕೆಳಗಿನಂತಿದೆ.

ಎನ್.ರವಿಕುಮಾರ್ ಬೆಂಗಳೂರಿನ ಕೆಂಗೇರಿ ಹೋಬಳಿ ಕೆಂಚೇನಹಳ್ಳಿಯಲ್ಲಿ ಒಂದು ವಾಸದ ಮನೆ, ಮೈಸೂರಿನ ರಾಮಕೃಷ್ಣ ನಗರದಲ್ಲಿ ಒಂದು ಮನೆ, ಒಂದು ವಾಣಿಜ್ಯ ಮಳಿಗೆ, 2 ನಿವೇಶನ, ನಂಜನಗೂಡಿನ ವಿವಿಧ ಸರ್ವೆ ನಂಬರ್‍ಗಳಲ್ಲಿ 8 ಎಕರೆ 13 ಗುಂಟೆ ಕೃಷಿ ಜಮೀನು, 658 ಗ್ರಾಂ ಚಿನ್ನ, 8.16 ಕೆಜಿ ಬೆಳ್ಳಿ, 1 ಡಸ್ಟರ್ ಕಾರು, 3 ದ್ವಿಚಕ್ರ ವಾಹನ, 8.61 ಲಕ್ಷ ನಗದು, ವಿವಿಧ ಬ್ಯಾಂಕ್ ಖಾತೆಗಳಲ್ಲಿ 40 ಲಕ್ಷ, ಠೇವಣಿ ಹಾಗೂ ಪಾಲಿಸಿಗಳು 45 ಲಕ್ಷ ಮತ್ತು 14.20 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.

ಎಸ್.ಅಡಪ್ಪ ಅವರು ಬಳ್ಳಾರಿ ಕೆಎನ್‍ಎನ್‍ಎಲ್ ಕೆನಾಲ್ ಡಿವಿಷನ್ ಕಾರ್ಯಪಾಲಕ ಅಭಿಯಂತರರು. ಇವರು ಬಳ್ಳಾರಿಯಲ್ಲಿನ ಗಾಂಧಿನಗರ ಸಿದ್ಧಾರ್ಥ ಕಾಲೋನಿಯಲ್ಲಿ ಒಂದು ವಾಸದ ಮನೆ, ಬಳ್ಳಾರಿ, ಹೊಸಪೇಟೆ ಹಾಗೂ ದಾವಣಗೆರೆಯ ವಿವಿಧ ಸ್ಥಳಗಳಲ್ಲಿ 7 ನಿವೇಶನಗಳು, ಬಳ್ಳಾರಿಯಲ್ಲಿ ಒಂದು ಎಕರೆ ಜಮೀನು, 1 ಕೆಜಿ 600 ಗ್ರಾಂ ಚಿನ್ನ, 14 ಕೆಜಿ 680 ಗ್ರಾಂ ಬೆಳ್ಳಿ, ಒಂದು ಹೋಂಡಾ ಜಾಝ್ ಕಾರು, 2 ದ್ವಿಚಕ್ರ ವಾಹನ, 5.71 ಲಕ್ಷ ನಗದು, ವಿವಿಧ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ, ಠೇವಣಿ 3.5 ಲಕ್ಷ ಮತ್ತು 25.95 ಲಕ್ಷ ಗೃಹೋಪಯೋಗಿ ವಸ್ತುಗಳು ಕಂಡುಬಂದಿದೆ.

ರಾಜಶೇಖರ್ ಸುರೇಶ್ ಗಜಕೋಶ್ ಅವರು ವಿಜಯಪುರ ಜಿಲ್ಲೆ ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇಡಿಯಲ್ಲಿ ಡಿಪೆÇೀ ಮ್ಯಾನೇಜರ್ ಇವರು ವಿಜಯಪುರದಲ್ಲಿ ಒಂದು ವಾಸದ ಮನೆ, ನಾಲ್ಕು ನಿವೇಶನಗಳು, ಇಂಡಿ ತಾಲೂಕಿನ ಬಟ್ಟಕುರ್ಕಿ ಗ್ರಾಮದ ವಿವಿಧ ಸರ್ವೆ ನಂಬರ್‍ಗಳಲ್ಲಿ 4.37 ಎಕರೆ ಕೃಷಿ ಜಮೀನು, 262 ಗ್ರಾಂ ಚಿನ್ನ, ಒಂದು ಮಾರುತಿ ವಿಟಾರಾ ಬ್ರೀಜಾ ಕಾರು, 2 ದ್ವಿಚಕ್ರ ವಾಹನ, ವಿವಿಧ ಬ್ಯಾಂಕ್ ಖಾತೆಗಳಲ್ಲಿ 13.73 ಲಕ್ಷ , 1.57 ಲಕ್ಷ ಠೇವಣಿ, 7.5 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಎಚ್.ವೈ.ಅಶ್ವತ್ಥಪ್ಪ ಅವರು ಕೋಲಾರ ತಾಲೂಕು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಇವರು ಕೋಲಾರ ನಗರದಲ್ಲಿ ಒಂದು ವಾಸದ ಮನೆ ಹಾಗೂ ಬಂಗಾರಪೇಟೆ ತಾಲೂಕಿನಲ್ಲಿ ಒಂದು ವಾಸದ ಮನೆ ಹೊಂದಿದ್ದಾರೆ.

ಅಲ್ಲದೆ 16.37 ಎಕರೆ ಕೃಷಿ ಜಮೀನು, 166 ಗ್ರಾಂ ಚಿನ್ನ, 380 ಗ್ರಾಂ ಬೆಳ್ಳಿ, ಒಂದು ದ್ವಿಚಕ್ರ ವಾಹನ, 49 ಸಾವಿರ ನಗದು, ಬ್ಯಾಂಕ್ ಖಾತೆಗಳಲ್ಲಿ ಠೇವಣಿ 1.87 ಲಕ್ಷ ಮತ್ತು 3.86 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ. ಈ ನಾಲ್ಕು ಅಧಿಕಾರಿಗಳ ಪ್ರಕರಣಗಳಲ್ಲಿ ತನಿಖೆ ಮುಂದುವರೆದಿದೆ ಎಂದು ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ