ಬೆಂಗಳೂರು:ಮೇ-6: ಕಾಂಗ್ರೆಸ್ ಶಾಸಕ, ಮಾಜಿ ಸಚಿವ, ಹಿರಿಯ ನಟ ಅಂಬರೀಷ್ ಅವರು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಇಮ್ಮಡಿಗೊಳಿಸಿದೆ.
ಕಾಂಗ್ರೆಸ್ ವಿರುದ್ಧ ತೀವ್ರ ಅಸಮಾಧಾನ ಹೊಂದಿರುವ ನಟ, ಅಂಬರೀಷ್ ಅವರನ್ನು ಎಚ್.ಡಿ.ಕುಮಾರಸ್ವಾಮಿ ನಿನ್ನೆ ರಾತ್ರಿ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಗಾಲ್ಫ್ ಕ್ಲಬ್ ಬಳಿ ಇರುವ ಅಂಬರೀಷ್ ಅವರ ನಿವಾಸಕ್ಕೆ ಆಗಮಿಸಿದ ಎಚ್ಡಿಕೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ.
ನನ್ನನ್ನು ಕೇಳದೆ ಸಚಿವ ಸ್ಥಾನದಿಂದ ಕಿತ್ತು ಹಾಕಿ ಕಾಂಗ್ರೆಸ್ ನನಗೆ ಅವಮಾನ ಮಾಡಿದೆ ಎಂದು ಅಂಬರೀಷ್ ಅವರು ಎಚ್ಡಿಕೆ ಅವರ ಬಳಿ ನೋವು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಅಂಬರೀಷ್ ಅವರು ಚುನಾವಣಾ ರಾಜಕೀಯದಿಂದ ಈಗಾಗಲೆ ಹಿಂದೆ ಸರಿದಿದ್ದು, ಕೊನೆ ಕ್ಷಣದಲ್ಲಿ ಜೆಡಿಎಸ್ ಪರ ಪ್ರಚಾರ ನಡೆಸುತ್ತಾರೊ ಎಂದು ಕಾದು ನೋಡಬೇಕಾಗಿದೆ.
Karnataka assembly election,H D Kumaraswami, Ambareesh