ಬೆಂಗಳೂರು:ಮೇ-4:ರಾಜ್ಯ ವಿಧಾನಸಭಾ ಚುನಾವಣೆಗೆ ಕ್ಷಣ ಗನನೆ ಆರಂಭವಾಗಿದ್ದು, ಮತದಾರರ ಮನಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಘಟನಾನು ಘಟಿ ನಾಯಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಈ ನಡುವೆ ಬಿಜೆಪಿ ತನ್ನ ಬರಪೂರ ಭರವಸೆಗಳ ಪಟ್ಟಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನಮ್ಮ ಕರ್ನಾಟಕಕ್ಕೆ ನಮ್ಮ ವಚನ’ ಹೆಸರಿನ ಪ್ರಣಾಳಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್, ಜಗದೀಶ್ ಶೆಟ್ಟರ್, ಮುರಳೀಧರ್ ರಾವ್ ಮುಂತಾದವರು ಉಪಸ್ಥಿತರಿದ್ದರು.
* ರೈತರ ಲಕ್ಷದವರೆಗಿನ ಕೃಷಿಸಾಲ ಮನ್ನಾ
* ರೈತರಿಗೆ 2 ಲಕ್ಷ ಅಪಘಾತ ವಿಮೆ – ಅಧಿಕಾರಕ್ಕೇರಿದ ಮೊದಲ ದಿನವೇ ಘೋಷಣೆ
* ಸ್ತ್ರೀಶಕ್ತಿಗೆ 3ರ ಬಡ್ಡಿದರದಲ್ಲಿ 2 ಲಕ್ಷ ಸಾಲ
* ಹಳ್ಳಿಗಳಲ್ಲಿ 24 ಗಂಟೆ ವಿದ್ಯುತ್
* ಬಿಪಿಎಲ್ ಕುಟುಂಬಗಳಿಗೆ ಉಚಿತ ಮೊಬೈಲ್, ಮಿಕ್ಸಿ
* ಎಸ್ಟಿ ಮತಗಳಿಗೆ ಬಿಜೆಪಿ ಗಾಳ ಹಾಕಿದ್ದು, ಮನೆ ನಿರ್ಮಾಣಕ್ಕೆ ಮದಕರಿ ವಸತಿ ಯೋಜನೆ
* ಕಾಲೇಜಿಗೆ ಸೇರುವ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್
* ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತಕ್ಕೆ ಪೂರ್ಣಾಧಿಕಾರ ನೀಡುವ ತೀರ್ಮಾನ
* ಪಿಎಫ್ಐ, ಕೆಎಫ್ ಡಿ ಸಂಘಟನೆಗಳ ನಿಷೇಧ
* ಗೋಹತ್ಯೆ ತಡೆ ಮಸೂದೆ ಜಾರಿ
* ಭ್ರಷ್ಟಾಚಾರದ ಪ್ರಕರಣ ಬಯಲಿಗೆ ಎಳೆಯುವವರ ರಕ್ಷಣೆಗಾಗಿ ವಿಷಲ್ ಬ್ಲೋವರ್ ಪಾಲಿಸಿ ರಚನೆ
* ಪ್ರತಿ ಜಿಲ್ಲೆಯಲ್ಲಿ 3 ಹಾಗೂ ತಾಲ್ಲೂಕಿಗೆ 1 ಅನ್ನಪೂರ್ಣ ಕ್ಯಾಂಟೀನ್
* 20 ಲಕ್ಷ ಸಣ್ಣ ರೈತರಿಗೆ ತಲಾ 10,000 ನೀಡುವ ನೇಗಿಲಯೋಗಿ ಯೋಜನೆ
* 400 ವಿದ್ಯಾರ್ಥಿಗಳಿಗೆ ವಿದೇಶ ವ್ಯಾಸಂಗಕ್ಕೆ ಸಹಾಯ