ಶಿವಮೊಗ್ಗ :ಮೇ-೨: ಚಾಮುಂಡೇಶ್ವರಿ, ಬದಾಮಿಯಲ್ಲಿ ದಯನೀಯ ಸೋಲು ನಿಶ್ಚಿತ ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಮುಖ್ಯಮಂತ್ರಿಯನ್ನ ಸೋಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.
ಶಿವಮೊಗ್ಗದಲ್ಲಿ ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಯಡಿಯೂರಪ್ಪ,ಸಿದ್ದರಾಮಯ್ಯ, ಪರಮೇಶ್ವರ್, ಖರ್ಗೆ ಮೂರು ಜನ ಒಟ್ಟಾಗಿ ಓಡಾಡದಂತಹ ಉಸಿರುಗಟ್ಟಿಸುವ ವಾತಾವರಣ ಇದೆ. ಚಾಮುಂಡೇಶ್ವರಿ, ಬದಾಮಿಯಲ್ಲಿ ದಯನೀಯ ಸೋಲು ನಿಶ್ಚಿತ, ಕಾಂಗ್ರೆಸ್ ಮುಖಂಡರೇ ಕಾಂಗ್ರೆಸ್ ಮುಖ್ಯಮಂತ್ರಿ ಯನ್ನ ಸೋಲಿಸಲಿದ್ದಾರೆ. ಕಾಂಗ್ರೆಸ್ 50 ರಿಂದ 60 ಸ್ಥಾನ ದಾಟುವುದಿಲ್ಲ ಎಂದರು.
ಸಿದ್ಧರಾಮಯ್ಯರನ್ನು ಸೋಲಿಸುವ ದೃಷ್ಠಿಯಿಂದಲೇ, ಶ್ರೀರಾಮುಲು ಅವರನ್ನು ಬದಾಮಿ ಕ್ಷೇತ್ರದಲ್ಲಿ ಕಣಕ್ಕಿಳಿಸಲಾಗಿದೆ. ಸಿದ್ಧರಾಮಯ್ಯ, 2+1 ಬಳ್ಳಾರಿಯಲ್ಲಿ ಯಾರು ಗೆಲ್ಲಬಹುದು ನೋಡಿ ಟಿಕೆಟ್ ನೀಡಲಾಗಿ. ಜನಾರ್ಧನ್ ರೆಡ್ಡಿಯವರಿಂದ 2 – 3 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲೋದಾದರೆ, ಅವರು ಪ್ರಚಾರಕ್ಕೆ ಬರಲಿ. ಶಿವಮೊಗ್ಗ ನಗರದ ಅಭಿವೃದ್ಧಿ ನಿಟ್ಟಿನಲ್ಲಿ, ವಿಮಾನ ನಿಲ್ದಾಣ ಆದ್ಯತೆಯ ಮೇರೆಗೆ ಪೂರ್ಣಗೊಳಿಸಲಾಗುವುದು. ನಗರದ ಬೆಳವಣಿಗೆ ದೃಷ್ಠಿಯಿಂದ ರಿಂಗ್ ರಸ್ತೆ, ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು.
ದೇವೆಗೌಡ ಕುರಿತಂತೆ ಮೋದಿಯವರಿಗೆ ಗೌರವ ಇದೆ ಅಷ್ಟೆ. ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ ಬಿಎಸ್ ವೈ, ಶಕುನಿ ಕೆಲಸ ಮಾಡುವವರು, ಎಲ್ಲಾ ಕಾಲದಲ್ಲಿ ಇರುತ್ತಾರೆ. ಈಶ್ವರಪ್ಪ ಗೆಲುವಿಗೆ ಶ್ರಮಿಸಲಾಗುತ್ತಿದೆ. 25 ಸಾವಿರ ಮತಗಳ ಅಂತರದಿಂದ ಗೆಲ್ಲುವುದು ಖಚಿತ. ಹಣಕಾಸಿನ ಇತಿಮಿತಿ ನೋಡಿ, ರಾಜ್ಯದ ರೈತರ ರಾಷ್ಟ್ರಿಕೃತ ಹಾಗೂ ಸಹಕಾರಿ ಸಾಲ ಮನ್ನಾಕ್ಕೆ ಆದ್ಯತೆ ನೀಡಲಾಗುತ್ತದೆ.1 ಲಕ್ಷ ಕೋಟಿ ನೀರಾವರಿ ಯೋಜನೆಗೆ ಮೀಸಲು ಇಡಲಾಗುವುದು ಎಂದರು.
ಇನ್ನು ವಿಜೇಂದ್ರ ಮೈಸೂರು ಹಾಗೂ ಚಾಮರಾಜನಗರ ದಲ್ಲಿ ಬಿಜೆಪಿ ಅಭ್ಯರ್ಥಿಪರ ಪ್ರಚಾರ ನಡೆಸಲಿದ್ದಾರೆ. ಚುನಾವಣೆ ಮುಗಿಯುವವರೆಗೂ ಅಲ್ಲಿಯೇ ಇರುತ್ತಾರೆ. ಅವರ ಮೇಲೆ ಕೇಳಿ ಬರುತ್ತಿರುವ ಆರೋಪ ಊಹಾಪೋಹ ಎಂದರು.
karnataka assembly election,Shivamogga,B. S. Yeddyurappa