ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಬಿಜೆಪಿಗೆ ರಾಜಿನಾಮೆ: ಪಕ್ಷದ ನಾಯಕರ ನಡೆಗೆ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಣೆ

ರಾಯಚೂರು;ಮೇ-2: ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಯಿಂದ ಮತ್ತೊಂದು ವಿಕೆಟ್ ಪತನವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ವಿಧಾನ ಸಭಾ ಕ್ಷೇತ್ರದ ಮತ್ತೊಬ್ಬ ಹಿರಿಯ ಮುಖಂಡ ಮಲ್ಲಪ್ಪ‌ ಚಿತಾಪುರ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಟಿಕೆಟ್ ವಂಚಿತರಾಗಿ ಅಸಮಧಾನ ಗೊಂಡು ಹಿರಿಯ ಮುಖಂಡ ಮಹದೇವಪ್ಪಗೌಡ ಪಾಟೀಲ್ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಇದರ ಬೆನ್ನಲ್ಲೇ ಈಗ ಮಲ್ಲಪ್ಪ ಪಕ್ಷಕ್ಕೆ ಗುದ್ ಬೈ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ಮಲ್ಲಪ್ಪ ಅವರು, ಬಿಜೆಪಿ‌‌ ಮತ್ತು ಆರ್. ಎಸ್ ಎಸ್. ಮುಖಂಡರ‌ ನಿಂದನೆಗೆ ಬೇಸರ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ನನಗೆ ನಿರ್ಲಕ್ಷ್ಯ ಮಾಡಿದ್ದಕ್ಕೆ ಬೇಸರಗೊಂಡು ಪಕ್ಷಕ್ಕೆ ರಾಜಿನಾಮೆ ನೀಡಿ ರಾಜಕೀಯ ನಿವೃತ್ತಿ ಘೋಷಣೆ ಮಾಡುತ್ತಿದ್ದೇನೆ ಅಂತ ಕಣ್ಣಿರು ಹಾಕಿದರು.

ಇನ್ನು ೪೦ ವರ್ಷಗಳಿಂದ ಪಕ್ಷ ಸಂಘಟನೆ ಮಾಡಿ, ಪಕ್ಷಕ್ಕೆ ಅಭ್ಯರ್ಥಿಗಳು ಸಿಗದ ಸಂದರ್ಭದಲ್ಲಿ ನಾನು ಕಷ್ಟ ಪಟ್ಟು ಪಕ್ಷವನ್ನು ಒಂದು ಹಂತಕ್ಕೆ ತಂದಿದ್ದೆ. ಜೊತೆಗೆ ಸ್ವತಃ ನನ್ನ ಪತ್ನಿ, ಮಗನನ್ನು‌ ಒಂದೊಂದು‌ ಕ್ಷೇತ್ರದಲ್ಲಿ ನಿಲ್ಲಿಸಿ ಅವರನ್ನು ಗೆಲ್ಲಿಸಿ‌ ಪಕ್ಷದ ಅಸ್ತಿತ್ವ ಉಳಿಸಿದ್ದೇನೆ. ಪಕ್ಷಕ್ಕಾಗಿ ಜಿಲ್ಲೆಯಲ್ಲಿ ಏಕಾಂಗಿಯಾಗಿ ಪಕ್ಷದ ಬಾವುಟ ‌ಹಿಡಿದು‌ ಪಕ್ಷ ಸಂಘಟನೆ ಮಾಡಿದವರು ನಾವು, ಆದ್ರೆ ಸದ್ಯದ ಆಗುಹೋಗುಗಳು, ಪಕ್ಷದ ಚಟುವಟಿಕೆ ಮತ್ತು ಹಿರಿಯರ ಬಗ್ಗೆ ನಿರ್ಲಕ್ಷದ ನಿಂದನೆಗಳು ನನಗೆ ತುಂಬಾ ಬೇಸರ ತಂದಿದೆ ಎಂದು ತಮ್ಮ ನೋವನ್ನು ತೊಡಿಕೊಂಡರು..

karnataka assembly election, Maski BJP leader,mallappa chitapura Resign

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ