ದೇಶದ ಹಿತದೃಷ್ಟಿಯಿಂದ ಬಿಜೆಪಿಯನ್ನು ಹೊರಗಿಡಬೇಕಾದ ಅಗತ್ಯವಿದೆ – ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಮೇ 1- ದೇಶದ ಹಿತದೃಷ್ಟಿಯಿಂದ ಬಿಜೆಪಿಯನ್ನು ಹೊರಗಿಡಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಇಂದಿಲ್ಲಿ ಪ್ರತಿಪಾದಿಸಿದರು.
ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ದುರ್ಬಲವಾಗಿರುವ ಬಿಜೆಪಿಗೆ ಟಾನಿಕ್ ನೀಡಲು ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಅವರು ಬಂದು ಏನು ಮಾಡುತ್ತಾರೆ. ಅವರು ನೀಡಿದ ಯಾವುದೇ ಭರವಸೆ ಈಡೇರಿಲ್ಲ. ಜನರ ಮುಂದೆ ಬರುವುದಕ್ಕೆ ಅವರಿಗೆ ಮುಖವಿಲ್ಲ ಎಂದು ಟೀಕಿಸಿದರು.
ಮೋದಿ ಅವರು ಇಲ್ಲಿ ಬಂದರೇನು ಮುಖ್ಯಮಂತ್ರಿಯಾಗುತ್ತಾರಾ..? ನಾವು ಮಾಡಿದ ಜನಪರ ಯೋಜನೆ ಕೆಲಸಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ. ಆದರೆ, ಪ್ರಧಾನಿ ಮೋದಿ ಏನು ಕೆಲಸ ಮಾಡಿದ್ದಾರೆಂದು ಮತ ಕೇಳುತ್ತಾರೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಗೆ ಹೇಳಲಿಕ್ಕೆ ಏನೂ ವಿಷಯವಿಲ್ಲ. ಬಾಹಿಯೋ ಔರ್ ಬೆಹನೋ ಎಂದು ಹೇಳಬಹುದಷ್ಟೆ. ಮೋದಿ ಅವರು ಇಲ್ಲಿಯವರೆಗೆ ಎಷ್ಟು ಜನಕ್ಕೆ ಉದ್ಯೋಗ ಕೊಟ್ಟಿದ್ದಾರೆ, ಆರ್ಥಿಕ ಸಹಾಯ ಮಾಡಿದ್ದಾರೆ, ಎಷ್ಟು ಕಪ್ಪು ಹಣ ತಂದಿದ್ದಾರೆ, ಬಡವರಿಗೆ ಅವರಿಂದ ಎಷ್ಟು ಅನುಕೂಲವಾಗಿದೆ, ಎಲ್ಲ ಕಾಪೆರ್Çರೇಟ್ ಕುಳಗಳಿಗೆ ನೆರವು ನೀಡಿದ್ದಾರೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ