2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ:

ನವದೆಹಲಿ, ಏ.30-ಕೇಂದ್ರ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳಿಂದಾಗಿ 2017-18ನೇ ಸಾಲಿನಲ್ಲಿ ನೇರ ತೆರಿಗೆಗಳಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 1.5 ಲಕ್ಷ ಕೋಟಿ ರೂ.ಗಳನ್ನು ಕ್ರೋಢೀಕರಿಸಿ, ದಾಖಲೆ ಸಂಖ್ಯೆಯ ಹೊಸ ತೆರಿಗೆದಾರರನ್ನು (ಡಿಟಿಪಿ) ಹೊಂದಿದ್ದರೆ, ಇತ್ತ ಆದಾಯ ತೆರಿಗೆ ಅಧಿಕಾರಿಗಳು ಕಳೆದ ವರ್ಷ ಆದಾಯ ತೆರಿಗೆ ವಿವರ ಸಲ್ಲಿಸದ (ಐಟಿ ರಿಟನ್ರ್ಸ್) 65 ಲಕ್ಷಕ್ಕೂ ಅಧಿಕ ಮಂದಿ ಬೆನ್ನಟ್ಟಲಾರಂಭಿಸಿದೆ.
ಕಳೆದ ವರ್ಷ ಐಟಿ ಇಲಾಖೆ ತೆರಿಗೆ ಪಾವತಿದಾರರ ಆಧಾರವನ್ನು 9.3 ಕೋಟಿಗೆ ವಿಸ್ತರಿಸು ಮಹತ್ವಾಕಾಂಕ್ಷೆ ಹೊಂದಿತ್ತು. ಆದರೆ ನಿರೀಕ್ಷಿತ ಫಲ ನೀಡಿಲ್ಲ. 65 ಲಕ್ಷಕ್ಕೂ ಹೆಚ್ಚು ಮಂದಿ ಐಟಿ ರಿಟನ್ರ್ಸ್ ಸಲ್ಲಿಸದೇ ಸರ್ಕಾರಕ್ಕೆ ತಲೆನೋವು ತಂದಿದ್ದಾರೆ.
ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್), ಮೂಲದಲ್ಲೆ ತೆರಿಗೆ ಸಂಗ್ರಹ(ಟಿಸಿಎಸ್), ಮುಂಗಡ ತೆರಿಗೆ ಪಾವತಿಗಳು, ಸ್ವ_ಘೋಷಿತ ತೆರಿಗೆ ಹಾಗೂ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಲಾಭಾಂಶ ವಿತರಣೆ ತೆರಿಗೆ-ಇವುಗಳಿಗೆ ಸಂಬಂಧಪಟ್ಟಂತೆ ತೆರಿಗೆ ವಿವರ ಸಲ್ಲಿಸುವ ತೆರಿಗೆದಾರರೂ ಈ ಪಾವತಿದಾರರ ಆಧಾರದಲ್ಲಿ ಒಳಗೊಂಡಿದ್ದಾರೆ.
ತೆರಿಗೆ ಪಾವತಿದಾರರ ಆಧಾರವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಸಂದೇಶಗಳು(ಟೆಕ್ಸ್ಟ್ ಮೆಸೇಜ್) ಮತ್ತು ಈ-ಮೇಲ್ ಅಭಿಯಾನಗಳ ಮೂಲಕ ಕ್ರಮ ಕೈಗೊಂಡಿದೆ. 2017-18ನೇ ಸಾಲಿನಲ್ಲಿ ಮೊದಲ ಬಾರಿಗೆ 1.07 ಕೋಟಿ ಜನರು ಪ್ರಾಮಾಣಿಕವಾಗಿ ತಮ್ಮ ಐಟಿ ರಿಟನ್ರ್ಸ್‍ಗಳನ್ನು ಸಲ್ಲಿಸಿದ್ದಾರೆ. 2016ರ ನವೆಂಬರ್‍ನಲ್ಲಿ ಕೇಂದ್ರ ಕೈಗೊಂಡ ನೋಟು ಅಮಾನ್ಯೀಕರಣ ಕ್ರಮದಿಂದಾಗಿ ಇದು ಸಾಧ್ಯವಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ಹೇಳಿದ್ದಾರೆ. ಸರ್ಕಾರವು ನೇರ ತೆರಿಗೆಗಳಿಂದ (ಹೆಚ್ಚುವರಿ ತೆರಿಗೆ) 10 ಲಕ್ಷ ಕೋಟಿ ರೂ.ಗಳ ನ್ನು ಸಂಗ್ರಹಿಸುವಲ್ಲಿ ಸಫಲವಾಗಿದೆ. 2016-17ನೇ ಸಾಲಿನಲ್ಲಿ ಇದು 8.5 ಲಕ್ಷ ಕೋಟಿ ರೂ.ಗಳಷ್ಟಿತ್ತು.
ಆದರೆ ಐಟಿ ಇಲಾಖೆಯು ತೆರಿಗೆ ವಿವರ ಸಲ್ಲಿಸುವಂತೆ ಪುನರಾವರ್ತಿತ ಮನವಿಗಳನ್ನು ಮಾಡಿಕೊಂಡರೂ 65 ಲಕ್ಷಕ್ಕೂ ಅಧಿಕ ಮಂದಿ 2017-18ನೇ ಸಾಲಿನ ಮಾಹಿತಿ ನೀಡಿಲ್ಲ. ಈ ಮಂದಿಯ ಬೆನ್ನಟ್ಟಿ ಐಟಿ ರಿಟನ್ರ್ಸ್‍ನನ್ನು ಕ್ರಮಬದ್ಧಗೊಳಿಸಲು ಇಲಾಖೆ ಮುಂದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ