ನಗರದ 28 ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ 9113095: ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್

ಬೆಂಗಳೂರು,ಏ.30-ನಗರದ 28 ವಿಧಾನಸಭಾ ಕ್ಷೇತ್ರಗಳ ಒಟ್ಟು ಮತದಾರರ ಸಂಖ್ಯೆ 9113095 ಆಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 4604191 ಪುರುಷ ಮತದಾರರು, 4192706 ಮಹಿಳಾ ಮತದಾರರು ಹಾಗೂ 1439 ಇತರರು ಸೇರಿದಂತೆ ಒಟ್ಟು 8798335 ಮತದಾರರು ಇದ್ದರು. ಜನವರಿ 23ರಿಂದ ಏ.17ರವರೆಗೆ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ ನಂತರ 9113095ಕ್ಕೆ ಮತದಾರರ ಸಂಖ್ಯೆ ಹೆಚ್ಚಳವಾಗಿದೆ ಎಂದು ಹೇಳಿದರು.

ಈ ಪರಿಷ್ಕರಣೆ ಸಂದರ್ಭದಲ್ಲಿ 439226 ಹೊಸ ಮತದಾರರ ಸೇರ್ಪಡೆ ಮಾಡಲಾಗಿದೆ. 85248 ಜನರನ್ನು ಪಟ್ಟಿಯಿಂದ ಕೈ ಬಿಟ್ಟಿದ್ದೇವೆ. 39129 ಮತದಾರರು ಪಟ್ಟಿಯಲ್ಲಿ ತಿದ್ದುಪಡಿ ಮಾಡಿಸಿದ್ದಾರೆ. 11878 ಜನ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಗೊಂಡಿದ್ದಾರೆ. ಅಂತಿಮವಾಗಿ 28 ವಿಧಾನಸಭಾ ಕ್ಷೇತ್ರದಲ್ಲಿ 4760794 ಪುರುಷ ಹಾಗೂ 4350672 ಮಹಿಳಾ ಮತದಾರರು, 1629 ಇತರರು ಸೇರಿದಂತೆ ಅಂತಿಮ ಮತದಾರರ ಪಟ್ಟಿಯಲ್ಲಿ 9113095 ಮತದಾರರಿದ್ದಾರೆ ಎಂದು ವಿವರಿಸಿದರು.
ವಶ: ನೀತಿ ಸಂಹಿತೆ ಜಾರಿಯಾದ ನಂತರ ಇದುವರೆಗೆ ಬೆಂಗಳೂರು ನಗರದಲ್ಲಿ 5.86 ಕೋಟಿ ಹಣ, 4702 ವಸ್ತುಗಳು, 1680 ಲೀಟರ್ ಲಿಕ್ಕರ್ ವಶಪಡಿಸಿಕೊಳ್ಳಲಾಗಿದೆ. 31 ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೇಳಿದರು.

ಗುರುತಿನ ಚೀಟಿಗೆ ಪರ್ಯಾಯ:
ಮತದಾರರ ಪಟ್ಟಿಯಲ್ಲಿ ಹೆಸರಿದ್ದು , ಗುರುತಿನಚೀಟಿ ಹೊಂದಿಲ್ಲದವರು ಪಾಸ್‍ಪೆÇೀರ್ಟ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ 12 ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ