ರಾಯಚೂರು: ಏ-೩೦: ರಾಜ್ಯದ ಬಿಜೆಪಿ ನಾಯಕರು ಪಾಪಾ ಪಾಂಡು ಇದ್ದಂತೆ. ಸಿಎಂ ಪದವಿ ಬಿಎಸ್ವೈ ಗೆ ಹಗಲು ಕನಸು ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸರಕಾರದ ಮುಖ್ಯ ಸಚೇತಕರು ಐವಾನ್ ಡಿಸೋಜಾ ವ್ಯಂಗವಾಡಿದ್ದಾರೆ.
ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಸುದ್ದಿಗೊಷ್ಟಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ನಾಯಕರು ಬಿಎಸ್ವೈ ಅವರನ್ನು ಸಿಎಂ ಮಾಡಲು ಕನಸ್ಸು ಕಾಣುತ್ತಿದ್ದಾರೆ. ಆದರೆ ಅದು ರಾಜ್ಯದಲ್ಲಿ ನಡೆಯೋದಿಲ್ಲ. ಅಮೀತ್ ಶಾ, ಬಿಎಸ್ವೈ ತಂತ್ರ ನಡೆಯದ ಹಿನ್ನಲೆ ಭ್ರಷ್ಟ ರೆಡ್ಡಿ ಬ್ರದರ್ಸ್ ಹಿಂದೆ ಬಿದ್ದಿದ್ದಾರೆ. ಉಪ ಮುಖ್ಯಂಮಂತ್ರಿ ಸ್ಥಾನ ಕೊಡಿಸುವುದಾಗಿ ಆಸೆ ತೋರಿಸಿ ಅವರ ಹಿಂದೆ ಬಿದ್ದಿದ್ದಾರೆ ಎಂದರು.
ರಾಜ್ಯದುದ್ದಕ್ಕೂ ಪ್ರವಾಸ ಕೈಗೊಂಡಿದ್ದು ಹೈ.ಕ ಬಾಗದಲ್ಲಿ ಕಾಂಗ್ರೆಸ್ಗೆ ಜನರು ಒಲವು ವ್ಯಕ್ತಪಡಿಸಿ ಸರಕಾರದ ಅನ್ನಬಾಗ್ಯ ಯೋಜನೆ ಬಡವರಿಗೆ ತಲುಪಿದೆ. ಆದುದರಿಂದ ಹೆಚ್ಚಿನ ಆಸಕ್ತಿಯನ್ನು ಕಾಂಗ್ರೆಸ್ಗೆ ತೋರುತ್ತಿದ್ದಾರೆ. ಅವರ ಭಾವನೆಗಳನ್ನು ಕಾಂಗ್ರೆಸ್ ಪಕ್ಷ ಅರಿತುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ನ ಸಾಧನೆಗಳೇ ಶ್ರೀರಕ್ಷೆ.ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿ ಜನರಿಗೆ ತಲುಪಿದೆ.
ಬಿಜೆಪಿ ನಾಯಕರು ಆರೋಪಗಳನ್ನು ಮಾತ್ರ ಮಾಡಲು ಯೊಗ್ಯವಾಗಿದ್ದಾರೆ. ಜನರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ನ್ನು ಅಧಿಕಾರಕ್ಕೆ ತರಲಿದ್ದಾರೆ. ಬಿಜೆಪಿಯವರು ಅಧಿಕಾರಕ್ಕೆ ಬರಲು ಹರ ಸಾಹಸ ಮಾಡುತ್ತಿರುವುದೇ ಹಿನ್ನಡೆ ಎಂದು ವ್ಯಂಗ್ಯವಾಡಿದರು.
ದೇಶದಲ್ಲಿ 22 ರಾಜ್ಯದಲ್ಲಿ ಅಧಿಕಾರ ವಹಿಸಿದರೆ ರಾಜ್ಯದಲ್ಲಿ ಇವರ ಆಟ ಏನೂ ನಡೆಯೋದಿಲ್ಲ. ಕಾಂಗ್ರೆಸ್ 130 ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.
ಕರಾವಳಿಯಲ್ಲಿ ಆದ ಘಟನೆಗಳಿಗೆ ಬಿಜೆಪಿಯವರೇ ಹೊಣೆಗಾರರು. ಹಿಂದುತ್ವ ಎಂದು ಬೀಗುತ್ತಿದ್ದು ಅವರಿಗೆ ಅದೇ ಮುಳುವಾಗಲಿದೆ ಎಂದು ಭವಿಷ್ಯ ನುಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ,ರಾಜ್ಯ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್.ರಾಣಿ ರಿಚ್ರ್ಡ, ಬಾಬುರಾವ್, ಸೇರಿದಂತೆ ಇನ್ನಿತರರು ಇದ್ದರು.
Assembly election,Raichur,Ivan D’Souza,Congress