ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​ ರಿಂದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಭೇಟಿ

ಬೆಂಗಳೂರು:ಏ-25: ಆಸ್ಟ್ರೇಲಿಯಾದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​ ಅವರು ಇಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ.

ಬೆಂಗಳೂರಿನ ಪದ್ಮನಾಭನಗರದ ದೇವೇಗೌಡರ ನಿವಾಸದಲ್ಲಿ ಜನರಲ್ ಜಾನ್ ಭೇಟಿಯಾದರು. ಈ ವೇಳೆ ರಾಜ್ಯ ವಿಧಾನಸಭೆ ಚುನಾವಣೆಯ ಕುರಿತು ಚರ್ಚೆ ನಡೆಸಿ ಮಾಹಿತಿ ಪಡೆದರು.

ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡೆಪ್ಯೂಟಿ ಕಾನ್ಸುಲೇಟ್​ ಜನರಲ್​ ಜಾನ್​ ಬೋನಾರ್​, ಆಸ್ಟ್ರೇಲಿಯಾ, ಭಾರತ ಎರಡೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರಗಳಾಗಿವೆ. ಹೀಗಾಗಿ ಇವತ್ತಿನ ಭೇಟಿಯಲ್ಲಿ ಚುನಾವಣೆ ಕುರಿತು ಸಾಕಷ್ಟು ವಿಚಾರಗಳನ್ನು ಚರ್ಚಿಸಿದ್ದೇವೆ. ರಾಜ್ಯದಲ್ಲಿನ ಭ್ರಷ್ಟಾಚಾರ, ಕಾವೇರಿ ನದಿ ವಿವಾದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದೆವು. ಕರ್ನಾಟಕದ ಜನರ ಬಗ್ಗೆ ದೇವೇಗೌಡ ಅಭಿಮಾನ ಹೊಂದಿದ್ದಾರೆ. ಪ್ರಧಾನಿಯಾಗಿದ್ದಾಗ ದೇವೇಗೌಡರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಹೇಳಿದರು.

ನಂತರ ಮಾತನಾಡಿದ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡ, ಪ್ರಸ್ತುತ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆ ಜಾನ್​ ಬೋನಾರ್​ ಮಾಹಿತಿ ಪಡೆದರು. ಚುನಾವಣೆಗಳು ನಡೆಯುವಾಗ ಹೀಗೆ ರಾಜಕೀಯ ಮುಖಂಡರೊಂದಿಗೆ ಅವರು ಚರ್ಚೆ ನಡೆಸುವುದು ಸಾಮಾನ್ಯ ಸಂಗತಿ. ಭೇಟಿ ವೇಳೆ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಬಗ್ಗೆಯೂ ಮಾಹಿತಿ ಪಡೆದರು ಎಂದರು.

Australia Deputy Consulate General John Bonnar, Former Prime Minister HD DeveGowda,Meet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ