ತಮ್ಮ ಮನೆ ಮುಂದೆಯೇ ಮಹಿಳೆಯ 90 ಗ್ರಾಂ ಸರ ಎಗರಿಸಿ ಸರಗಳ್ಳರು ಪರಾರಿ

ಬೆಂಗಳೂರು, ಏ.24- ತಮ್ಮ ಮನೆ ಮುಂದೆಯೇ ಮಹಿಳೆಯ 90 ಗ್ರಾಂ ಸರ ಎಗರಿಸಿ ಸರಗಳ್ಳರು ಪರಾರಿಯಾಗಿರುವ ಘಟನೆ ಜೆ.ಪಿ.ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಜಯನಗರ 9ನೆ ಬ್ಲಾಕ್ ನಿವಾಸಿ ಶಕುಂತಲಮ್ಮ ಸರ ಕಳೆದುಕೊಂಡ ಮಹಿಳೆ.
ಇಂದು ಮುಂಜಾನೆ 5.40ರಲ್ಲಿ ಶಕುಂತಲಮ್ಮ ಅವರು ಮನೆ ಮುಂದೆ ಇದ್ದಾಗ ಬೈಕ್‍ನಲ್ಲಿ ಬಂದ ಇಬ್ಬರು ಸರಗಳ್ಳರ ಪೈಕಿ ಒಬ್ಬಾತ ಇವರ ಕೊರಳಲ್ಲಿದ್ದ 90 ಗ್ರಾಂನ 2 ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.

ಸಹಾಯಕ್ಕಾಗಿ ಕೂಗಿಕೊಂಡರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಜೆ.ಪಿ.ನಗರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ