ನವದೆಹಲಿ:ಏ-20: ಕಾಶ್ಮೀರ ಕಣಿವೆಯಲ್ಲಿ ಶಾಂತಿ ಸ್ಥಾಪಿಸಲು ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಬರಬೇಕೆಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಕರೆ ನೀಡಿದ್ದಾರೆ.
ಇಂದಿಗೂ ಕಾಶ್ಮೀರ ವಿವಾದ ನಮಗೆಲ್ಲಾ ದೊಡ್ಡ ವಿಚಾರವಾಗಿದೆ. ಹೀಗಾಗಿ ಕಾಶ್ಮೀರದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ನಾವೆಲ್ಲರೂ ಮುಂದಕ್ಕೆ ಬರಬೇಕಿದೆ ಎಂದು ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನ ಪದೇ ಪದೇ ನಡೆಸುತ್ತಿರುವ ಕದನ ವಿರಾಮ ಉಲ್ಲಂಘನೆ ಹಾಗೂ ಉಗ್ರರ ಚಟುವಟಿಕೆಗಳಿಂದ ಕಾಶ್ಮೀರದಲ್ಲಿ ಶಾಂತಿ ಹದಗೆಡುತ್ತಿರುವ ಹಿನ್ನಲೆಯಲ್ಲಿ ಉಪ ರಾಷ್ಟ್ರಪತಿ ಅವರು ಈ ಕರೆ ನೀಡಿದ್ದಾರೆ.
ಒಂದಲ್ಲ ಒಂದು ದಿನ ಕದಮ ವಿರಾಮ ಉಲ್ಲಂಘನೆ ನಡೆಯುತ್ತಲೇ ಇದೇ. ಅಲ್ಲದೆ, ಪಾಕಿಸ್ತಾನ ಕಾಶ್ಮೀರದಲ್ಲಿ ಶಾಂತಿ ಕದಡಲು ತನ್ನ ವಿನಾಶಕಾರಿ ಚಟುವಟಿಕೆಯನ್ನು ಮುಂದುವರೆಸಿಕೊಂಡು ಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಗಡಿ ನಿಯಂತ್ರಣ ರೇಖೆ(LoC) ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ 2018ನೇ ಪ್ರಸಕ್ತ ಸಾಲಿನ ಎರಡು ತಿಂಗಳಲ್ಲೇ 633 ಬಾರಿ ಕದಮ ವಿರಾಮ ಉಲ್ಲಂಘನೆ ಮಾಡಿದೆ. 2017ನೇ ವರ್ಷದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ 860 ಬಾರಿ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ 111 ಬಾರಿ ಉಲ್ಲಂಘನೆ ಮಾಡಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ವರದಿ ನೀಡಿದೆ.
Come forward to create peaceful atmosphere, in Kashmir,Venkaiah Naidu