ಕರ್ನಾಟಕ ಅಣ್ಣಾ ಡಿಎಂಕೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಶೀಘ್ರ ನಿರ್ದಾರ

ಬೆಂಗಳೂರು, ಏ.20-ಕರ್ನಾಟಕ ಅಣ್ಣಾ ಡಿಎಂಕೆ ಶೀಘ್ರವೇ ಪದಾಧಿಕಾರಿಗಳ ಸಭೆ ಕರೆದು ಚುನಾವಣೆಯಲ್ಲಿ ಸ್ಪರ್ಧಿಸಬೇಕೇ ಅಥವಾ ಈಗಾಗಲೇ ಸ್ಪರ್ಧಿಸಿರುವ ಪಕ್ಷಗಳಿಗೆ ಬೆಂಬಲ ನೀಡಬೇಕೇ ಎಂಬುದನ್ನು ನಿರ್ಧರಿಸಲಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಕೆ.ಆರ್.ಕೃಷ್ಣರಾಜು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಅಣ್ಣಾ ಡಿಎಂಕೆ, ತಮಿಳುನಾಡಿನ ಅಣ್ಣಾ ಡಿಎಂಕೆಯ ಬಾಲಂಗೋಚಿಯಲ್ಲ. ಕರ್ನಾಟಕದ ನಾಡು, ನುಡಿಗಾಗಿ ಕಟೀಬದ್ಧವಾಗಿ ಹೋರಾಟ ಮಾಡುತ್ತದೆ. ಸುಮಾರು 80 ಸಾವಿರ ಕಾರ್ಯಕರ್ತರನ್ನು ಹೊಂದಿದೆ ಎಂದು ಹೇಳಿದರು.

ತಮಿಳುನಾಡಿನಲ್ಲಿ ಅಮ್ಮಾ ಕ್ಯಾಂಟೀನ್ ಮಾದರಿಯಲ್ಲಿ ಅಣ್ಣಾ ಡಿಎಂಕೆ ಬೆಂಗಳೂರಿನಲ್ಲಿ ಅಮ್ಮಾ ಮೆಸ್ ಆರಂಭಿಸಿತ್ತು. ಇದನ್ನು ರಾಜ್ಯ ಸರ್ಕಾರದ ಗಮನಕ್ಕೆ ತಂದಾಗ ಇಂದಿರಾ ಕ್ಯಾಂಟೀನ್ ಯೋಜನೆ ರೂಪುಗೊಂಡಿದೆ ಎಂಬ ವಿಷಯ ತಿಳಿದಿತ್ತು ಎಂದರು.
ಈ ಚುನಾವಣೆಯಲ್ಲಿ ಯಾವ ಪಕ್ಷವನ್ನು ಬೆಂಬಲಿಸಬೇಕು ಎಂಬ ಬಗ್ಗೆ ಅಥವಾ ನಾವೇ ಸ್ಪರ್ಧಿಸುವುದೇ ಎಂಬುದನ್ನು ಶೀಘ್ರವೇ ನಿರ್ಧರಿಸುವುದಾಗಿ ಸ್ಪಷ್ಟಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ