ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕೇವಲ ಊಹಾಪೆÇೀಹ – ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ, ಏ.18-ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದು ಕೇವಲ ಊಹಾಪೆÇೀಹ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಎರಡೂ ಸ್ಪರ್ಧೆ ಮಾಡುವುದಾಗಿ ಕೇಳಿಯೇ ಇಲ್ಲ. ಅದಕ್ಕೆ ನಾನು ಅಡ್ಡಿ ಪಡಿಸಿಯೂ ಇಲ್ಲ. ಇದು ಕೇವಲ ಊಹಾಪೆÇೀಹ. ಮಾಧ್ಯಮಗಳ ಕಲ್ಪನೆ ಎಂದು ಹೇಳಿದರು.
ಬಾದಾಮಿಯಿಂದ ಡಾ.ದೇವರಾಜ್ ಮತ್ತು ಡಿ.ಬಿ.ಚಿಮ್ಮನಕಟ್ಟಿ ನಡುವೆ ಪೈಪೆÇೀಟಿ ಇದೆ. ಹೈಕಮಾಂಡ್ ಸದ್ಯದಲ್ಲೇ ಬಾದಾಮಿ ಅಭ್ಯರ್ಥಿ ಘೋಷಣೆ ಮಾಡಲಿದೆ. ಸ್ಪರ್ಧೆ ಮಾಡಿದವರೆಲ್ಲ ಕಾಂಗ್ರೆಸ್ ಅಭ್ಯರ್ಥಿಗಳೇ ಆಗಿದ್ದಾರೆ ಎಂದರು.
ಸಿಎಂ ಮತ್ತು ನನ್ನ ನಡುವೆ ಯಾರ ಕೈ ಮೇಲಾಯಿತು, ಕೆಳಗಾಯಿತು ಎಂಬ ಪ್ರಶ್ನೆ ಯಿಲ್ಲ. ನಾವೆಲ್ಲ ಒಟ್ಟಾಗಿ ಕುಳಿತು ಚರ್ಚಿಸಿ ಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಹೈಕಮಾಂಡ್ ನಿರ್ಣಯಕ್ಕೆ ಎಲ್ಲರೂ ತಲೆ ಬಾಗುತ್ತೇವೆ. ಬಿಜೆಪಿಯನ್ನು ಸೋಲಿಸುವುದು ನಮ್ಮ ಏಕೈಕ ಗುರಿ. ರಾಜ್ಯದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಕೇಂದ್ರ ಸರ್ಕಾರದ ನೋಟು ಅಮಾನಿಕರಣ ಪಾಲಿಸಿ ಸಂಪೂರ್ಣ ವಿಫಲವಾಗಿದೆ. ನಗದು ಕೊರತೆ ಇಲ್ಲ ಎನ್ನುವ ಹಣಕಾಸು ಸಚಿವ ಅರುಣ್‍ಜೇಟ್ಲಿ ಅವರ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ದೇಶದ ಜನ ನಗದು ಕೊರತೆಯನ್ನು ಎದುರಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಆಡಳಿತ ಸಂಪೂರ್ಣವಾಗಿ ಹೊಲಸಾಗಿದೆ ಎಂದು ಆರೋಪಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ