ಪದ್ಮನಾಭನಗರದಲ್ಲಿ ಬಿಜೆಪಿಯ ಪರ ಟೆಕ್ಕಿಗಳ ಚುನಾವಣಾ ಪ್ರಚಾರ

ಬೆಂಗಳೂರು ಎ14: ಇಂದು ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಮಾಜಿ ಉಪ ಮುಖ್ಯಮಂತ್ರಿ ಶ್ರೀ ಆರ್. ಅಶೋಕ್ ಪರ ಚುನಾವಣೆ ಪ್ರಚಾರಕ್ಕೆ ಟೆಕ್ಕಿಗಳು ಕಣಕ್ಕಿಳಿದರು.

ಬಿಜೆಪಿಯ ಐ ಟಿ ಸೆಲ್ ಸಂಚಾಲಕರಾದ ಅಮರೇಶ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ “ಮೆಗಾ ಔಟ್ ರೀಚ್”, ಪದ್ಮನಾಭನಗರದ ಮತದಾರರನ್ನು ಬಿಜೆಪಿ ಪರ ಮತ ಹಾಕಲು ಪ್ರೇರೇಪಿಸುವ ಸಿದ್ಧತೆ ನಡೆಯಿತು. ಒಟ್ಟು 50 ಹೇಚ್ಚು ಟೆಕ್ಕಿಗಳು ಈ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

“ಬೆಂಗಳೂರು ಭಾರತದ ಸಿಲಿಕನ್ ಸಿಟಿ ಎಂದು ಪ್ರಸಿದ್ದಿ, ಇಲ್ಲಿ ನೆಲಸಿರುವ ಟೆಕ್ಕಿಗಳು ಕೆಲಸದ ಜೊತೆಗೆ ರಾಜಕೀಯದಲ್ಲೂ ಸಕ್ರಿಯವಾಗಿ ಕೆಲಸ ಮಾಡಲು ಇಚ್ಛಿಸುವರು ಬಹಳಜನ ಇದ್ದಾರೆ. ಬಿಜೆಪಿಯ ಐ ಟಿ ಸೆಲ್ ಭಾರತದಲ್ಲಿ ಅತಿ ದೊಡ್ಡ ಟೆಕ್ಕಿಗಳ ತಂಡ ಹಾಗು ಇಲ್ಲಿರುವ ಹಲವಾರು ಮಂದಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರು ಒಂದು ಸ್ಫೂರ್ತಿ. ಹಾಗಾಗಿ ನಮ್ಮ ಜೊತೆ ಕೆಲಸ ಮಾಡಲು ಸದಾ ಸಿದ್ಧವಾಗಿರುತ್ತಾರೆ” ಎಂದು ಬಿಜೆಪಿಯ ಐ ಟಿ ಸೆಲ್ ರಾಜ್ಯ ಸಂಚಾಲಕರಾದ ಅಮರೇಶ್ ಹೇಳಿದರು.

ಟೆಕ್ಕಿಗಳೆಂದರೆ ಯಾವಾಗಲೂ ದೊಡ್ಡ ದೊಡ್ಡ ಬಿಲ್ಡಿಂಗ್ ಗಳಲ್ಲಿ, ಎಸಿ ರೂಮ್ ಗಳಲ್ಲಿ ಕಂಪ್ಯೂಟರ್ಗಳ ಮುಂದೆ ಕೆಲಸ ಮಾಡುವವರು ಎಂದೇ ಪ್ರಖ್ಯಾತಿ. ಆದರೆ ಇವತ್ತು ಮಠ ಮಠ ಮಧ್ಯಾಹ್ನ ಉರಿ ಬಿಸಿಲಿನಲ್ಲೂ ಚುನಾವಣೆ ಪ್ರಚಾರ ಮಾಡಬಹುದೆಂದು ಬಿಜೆಪಿಯ ಐ ಟಿ ಸೆಲ್ ನವರು ತೋರಿಸಿದರು.

“ಟೆಕ್ಕಿಗಳು ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು. ನಾವು ಈ ಹಿಂದೆ 2014 ಲೋಕಸಭಾ ಚುನಾವಣೆಯಲ್ಲೂ ಹೀಗೆ ಪ್ರಭಾವ ಚಟುವಟಿಗಳನ್ನು ಮಾಡಿ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಗೆಲ್ಲಿಸಿದ್ದೆವು, ಈಗಲೂ ನಾವು ನಮ್ಮ ರಾಜ್ಯಾಧ್ಯಕ್ಷರಾದ ಶ್ರೀಯುತ ಯಡಿಯೂರಪ್ಪ ನವರನ್ನು ಗೆಲ್ಲಿಸುತ್ತೇವೆ” ಎಂದು ರಾಜ್ಯ ಸಹ ಸಂಚಾಲಕರಾದ ಚಂದ್ರಕಾಂತ್ ಹೇಳಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ