ಕೊಪ್ಪಳ:ಏ-10: ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರಿಗೆ ದ್ರೋಹ ಬಗೆದಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ಸತ್ಯ, ನಾನು ಪ್ರಮಾಣ ಮಾಡುತ್ತೇನೆ. ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಒಂದು ಲಕ್ಷ ಕೋಟಿ ಹಣ ಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯ ಸರ್ಕಾರ ರೈತರಿಗೆ ಅನ್ಯಾಯ ಮಾಡಿದೆ. ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಬೇರೆ ಕೆಲಸ ನಿಂತರೂ ಪರವಾಗಿಲ್ಲ ರೈತರ ಕೆಲಸ ಮಾಡ್ತಿವಿ. ನೀರಾವರಿಗಾಗಿ ಒಂದು ಲಕ್ಷ ಕೋಟಿ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಅಮಿತ್ ಶಾ ರಾಜ್ಯಕ್ಕೆ ಬಂದಾಗ ರೈತರ ಸಮಸ್ಯೆಗಳನ್ನ ತಿಳಿದುಕೊಂಡಿದ್ದಾರೆ. ರೈತ ಹೋರಾಟಗಾರರ ಮೇಲೆ ಸಿದ್ದರಾಮಯ್ಯ ಕೇಸ್ ಹಾಕಿದ್ದಾರೆ. ನಾವು ಅಧಿಕಾರಕ್ಕೆ ಬಂದ ಒಂದು ತಿಂಗಳ ಒಳಗೆ ಎಲ್ಲ ಕೇಸ್ ತೆಗೆದು ಹಾಕುತ್ತೇವೆ.
ರೈತರಿಗೆ ಕನಿಷ್ಟ 12 ಗಂಟೆ ನಾನು ವಿದ್ಯತ್ ಕೊಡುತ್ತೇನೆ ಎಂದಿದ್ದ ಸಿದ್ದರಾಮಯ್ಯ ಏನು ಮಾಡಿದ್ರು..?ಸಿದ್ದರಾಮಯ್ಯ ರೈತರ ಸಾಲಮನ್ನಾ ಹೆಸರಲಿ ನಾಟಕ ಮಾಡ್ತೀದಾರೆ. ಸಿದ್ದರಾಮಯ್ಯ ಹೋಗುವ ವೇಳೆ ರಾಜ್ಯದ ಎಲ್ಲ ಖಜಾನೆ ಖಾಲಿ ಮಾಡುವ ಕೆಲಸ ಮಾಡ್ತಿದಾರೆ.ನಮ್ಮ ಸರ್ಕಾರ ಭತ್ತ ಬೆಳೆಗಾರರ ಜೊತೆ ಇರುತ್ತದೆ ಎಂದರು. ತುಂಗಭದ್ರಾ ಅಚ್ಚು ಕಟ್ಟು ಪ್ರದೇಶದಲ್ಲಿ ನೀರು ನಿರ್ವಹಣೆ ಸರಿಯಾಗಿಲ್ಲದ್ದರಿಂದ ಈ ಭಾಗದ ರೈತರ ಬೆಳೆಗಳಿಗೆ ಸಮಸ್ಯೆಯಾಗಿದೆ.
ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕೂಡಲೇ ನೀರಾವರಿ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಲಿದೆ. ಅಧಿಕಾರಕ್ಕೆ ಬಂದ ಕೂಡಲೇ ಡಿಸಿಗಳೊಂದಿಗೆ ಸಮೀಕ್ಷೆ ಮಾಡಿಸಿ ಪರಿಹಾರ ನೀಡಲಾಗುವುದು. ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳ ಒಳಗಾಗಿ ದಿನಕ್ಕೆ 12 ಗಂಟೆ ವಿದ್ಯುತ್ ನೀಡಲಿದೆ ಎಂದರು.
ಕಾರಟಗಿ ಸಮೀಪದ ರೈಸ್ ಟೆಕ್ನಾಲಜಿ ಪಾರ್ಕ್ ನಮ್ಮ ಸರ್ಕಾರ ಮಂಜೂರು ಮಾಡಿದೆ. ಈ ಯೋಜನೆಗೆ ಕಾಂಗ್ರೆಸ್ ನಯಾಪೈಸೆ ಹಣ ನೀಡಿಲ್ಲ.
ರಾಜ್ಯದಲ್ಲಿ ಮಾರುಕಟ್ಟೆ ಭದ್ರತಾ ಯೋಜನೆ ಜಾರಿ ಮಾಡಲಿದೆ. ಸುಮಾರು 5 ಸಾವಿರ ಕೋಟಿ ಆವೃತ್ತ ನಿಧಿ ಮೀಸಲಿಡಲಾಗುವುದು. ಫಲಸ್ ಭಿಮಾ ಯೋಜನೆಯನ್ನು ನೀರಾವರಿ ಬೆಳೆಗೂ ಅನ್ವಯ ಆಗುವಂತೆ ಪ್ರಧಾನಿ ಮೋದಿ ಜೊತೆ ಮಾತಾಡ್ತಿನಿ.ಸೋನಾ ಮಸೂರಿ ಅಕ್ಕಿಗೆ ಬೌಗೋಳಿಕ ಸೂಚಂಕ ನೀಡಲು ಪ್ರಯತ್ನ ಮಾಡುತ್ತೇನೆ. ಮೋದಿ ಕಲ್ಪನೆಯ ನದಿ ಜೋಡಣೆ ಯೋಜನೆ ಮಾಡಲಾಗುವುದು. ನಾನು ಭರವಸೆ ನೀಡುತ್ತಿಲ್ಲ, ನೂರಕ್ಕೆ ನೂರು ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದಲ್ಲಿ ಹಣಕಾಸಿನ ಸಮಸ್ಯೆ ಇಲ್ಲ. ರೈತರ ಕಷ್ಟಕ್ಕೆ ಸ್ಪಂದಿಸುವ ಮನಸ್ಸು ಬೇಕು. ನಾನು ಕೊಪ್ಪಳಕ್ಕೆ ರಾಜಕಾರಣ ಮಾಡುವುದಕ್ಕೆಬಂದಿಲ್ಲ ಭತ್ತ ಕಟಾವು ಮಾಡುವ ಮೊದಲು ಡಿಸಿ ಸ್ಥಳಕ್ಕೆ ಆಗಮಿಸಿ ಭತ್ತದ ಬೆಳೆ ನಾಶ ಆಗಿರೋದು ಪರಿಶೀಲಿಸಬೇಕು ಎಂದರು. ಇದೇ ವೇಳೆ ಕೊಪ್ಪಳ ಭಾಗದಿಂದ ರೈತ ಹೋರಾಟಗಾರರನ್ನು ಮೇಲ್ಮನೆಗೆ ಆಯ್ಕೆ ಮಾಡುವ ಸಲಹೆ ಪರಿಶೀಲಿಸುತ್ತೇನೆ ಎಂದು ಹೇಳಿದರು.
Assembly election,B S yeddyurappa, koppala, farmers meet