ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಉದಯ ಗರುಡಾಚಾರ್ 2ಕೋಟಿ ಕಿಕ್ ಬ್ಯಾಕ್: ಎನ್.ಆರ್.ರಮೇಶ್ ಆರೋಪವನ್ನು ತನಿಖೆ ನಡೆಸಬೇಕೆಂದು ಕಾಂಗ್ರೆಸ್‍ನ ಐಟಿ ವಿಭಾಗ ದೂರು

ಬೆಂಗಳೂರು,ಏ.10- ಕೇಂದ್ರ ಸಚಿವ ಅನಂತಕುಮಾರ್ ಅವರಿಗೆ ಉದ್ಯಮಿ ಉದಯ ಗರುಡಾಚಾರ್ ಅವರು ಎರಡು ಕೋಟಿ ರೂ. ಕಿಕ್ ಬ್ಯಾಕ್ ನೀಡಿ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ ಎಂದು ಎನ್.ಆರ್.ರಮೇಶ್ ಮಾಡಿರುವ ಆರೋಪವನ್ನು ತನಿಖೆ ನಡೆಸಬೇಕೆಂದು ಕಾಂಗ್ರೆಸ್‍ನ ಐಟಿ ವಿಭಾಗ ದೂರು ನೀಡಿದೆ.

ರಾಜಾಜಿನಗರ ಕ್ಷೇತ್ರದ ಐಟಿ ತಂತ್ರಜ್ಞಾನ ವಿಭಾಗದ ಮುಖಂಡರು ಚುನಾವಣಾ ಆಯೊಗದ ರಾಜ್ಯ ಮುಖ್ಯ ಅಧಿಕಾರಿಯನ್ನು ಭೇಟಿ ಮಾಡಿ ದೂರು ನೀಡಿದ್ದು, ಬಿಜೆಪಿ ವಕ್ತಾರರಾದ ಎನ್.ಆರ್.ರಮೇಶ್ ಮಾಡಿರುವ ಆರೋಪವನ್ನು ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಚುನಾವಣಾ ಆಯೋಗ ಚುನಾವಣೆಯ ವೆಚ್ಚವನ್ನು 28 ಲಕ್ಷ ರೂ.ಗೆ ಸೀಮಿತಗೊಳಿಸಿದೆ. ಹಾಗಿರುವ ಎರಡು ಕೋಟಿ ಹಣ ಯಾವುದೇ ರೀತಿ ಸಂದಾಯವಾಗಿದೆ ಎಂಬುದು ತನಿಖೆಯಾಗಬೇಕು. ಅನಂತಕುಮಾರ್ ಮತ್ತು ಉದಯ ಗರುಡಾಚಾರ್ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡರಾದ ಮನೋಹರ್, ದರ್ಶನ್ ಮತ್ತಿತರರು ಆಯೊಗವನ್ನು ಒತ್ತಾಯಿಸಿದ್ದಾರೆ.

ಬಿಜೆಪಿಯವರು ಪದೆ ಪದೇ ಕಾಂಗ್ರೆಸ್ ವಿರುದ್ಧ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಾರೆ. ಅವರ ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರೆ ಬಿಡುಗೆಡ ಮಾಡಲಿ ಎಂದು ಮನೋಹರ್ ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ