140ಕ್ಕೂ ಹೆಚ್ಚು ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ : ಸಂಭವನೀಯ ಅಭ್ಯರ್ಥಿಗಳ ಬಗ್ಗೆ ಇಲ್ಲಿದೆ ಮಾಹಿತಿ

ಬೆಂಗಳೂರು, ಏ.9- ಹೊಸದಾಗಿ ಪಕ್ಷ ಸೇರ್ಪಡೆಯಾದ ಜೆಡಿಎಸ್‍ನ ಏಳು ಬಂಡಾಯ ಶಾಸಕರೂ ಸೇರಿದಂತೆ ಸುಮಾರು 140ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಖಚಿತಪಡಿಸಿದೆ.
ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದಂತೆ ಕಾಂಗ್ರೆಸ್ ತನ್ನ ಪಕ್ಷದ ಅಭ್ಯರ್ಥಿಗಳನ್ನು ಅಖೈರುಗೊಳಿಸಲು ಇಂದಿನಿಂದ ದೆಹಲಿಯಲ್ಲಿ ಮೂರು ದಿನಗಳ ಕಾಲ ಮಹತ್ವದ ಸಭೆ ಆರಂಭಿಸಿದೆ.
ಕಳೆದ ಚುನಾವಣೆಯಲ್ಲಿ 122 ಕ್ಷೇತ್ರಗಳನ್ನು ಗೆದ್ದು ಅಧಿಕಾರ ಹಿಡಿದಿದ್ದ ಕಾಂಗ್ರೆಸ್, ಈ ಬಾರಿಯೂ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದೆ.
ಹೀಗಾಗಿ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡುತ್ತಿದೆ. ಈಗಾಗಲೇ ಎರಡು ಹಂತದಲ್ಲಿ ರಾಜ್ಯಮಟ್ಟದ ಚುನಾವಣಾ ಸಮಿತಿಯ ಸಭೆ ನಡೆದು 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
ಸುಮಾರು 100ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಶಿಫಾರಸು ಮಾಡಲಾಗಿದೆ. ಹಾಲಿ ಶಾಸಕರಾಗಿರುವ ಅಂಬರೀಶ್, ಶ್ಯಾಮನೂರು ಶಿವಶಂಕರಪ್ಪ, ರೋಷನ್‍ಬೇಗ್ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದ್ದು, ಬೇಲೂರು, ಹುಮ್ನಾಬಾದ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಹೆಸರುಗಳು ಶಿಫಾರಸ್ಸಾಗಿವೆ.
ಇನ್ನು ಜೆಡಿಎಸ್‍ನಿಂದ ಕಾಂಗ್ರೆಸ್‍ಗೆ ಬಂದಿರುವ ಚೆಲುವರಾಯಸ್ವಾಮಿ, ಜಮೀರ್‍ಅಹಮ್ಮದ್‍ಖಾನ್, ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯಕ್, ಇಕ್ಬಾಲ್ ಅನ್ಸಾರಿ, ರಮೇಶ್ ಬಂಡಿಸಿದ್ದೇಗೌಡ ಅವರಿಗೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಜತೆಗೆ ಇತ್ತೀಚೆಗೆ ಕಾಂಗ್ರೆಸ್ ಸೇರಿದ ಅಶೋಕ್‍ಖೇಣಿ, ಆನಂದ್‍ಸಿಂಗ್, ನಾಗೇಂದ್ರ ಅವರಿಗೂ ಟಿಕೆಟ್ ನೀಡುವ ಸಾಧ್ಯತೆಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಎಚ್.ಸಿ.ಮಹದೇವಪ್ಪ, ಟಿ.ಬಿ.ಜಯಚಂದ್ರ, ರಾಮಲಿಂಗಾರೆಡ್ಡಿ, ಶಾಸಕ ಕೆ.ಎನ್.ರಾಜಣ್ಣ ಸೇರಿದಂತೆ ಸುಮಾರು 30ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು, ಸಚಿವರ ಮಕ್ಕಳು ಈ ಬಾರಿ ವಿಧಾನಸಭೆ ಟಿಕೆಟ್ ಚುನಾವಣೆ ಆಕಾಂಕ್ಷಿಗಳಾಗಿದ್ದಾರೆ.
ಗೆಲುವನ್ನೇ ಪ್ರಮುಖ ಮಾನದಂಡವಾಗಿಟ್ಟುಕೊಂಡಿರುವ ಕಾಂಗ್ರೆಸ್, ಈ ಬಾರಿ ಅಪ್ಪ-ಮಕ್ಕಳು ಎಂಬುದನ್ನೂ ನೋಡದೆ ಗೆಲ್ಲುವ ಯುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ಮುಂದಾಗಿದೆ.
ಹೀಗಾಗಿ ಹಲವಾರು ಕ್ಷೇತ್ರಗಳಲ್ಲಿ ಬಹಳ ದಿನಗಳಿಂದ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾಂಗ್ರೆಸ್ಸಿಗರು ಅಸಮಾಧಾನಗೊಂಡು ಪರ್ಯಾಯ ದಾರಿಯತ್ತ ಮುಖ ಮಾಡಿದ್ದಾರೆ.
ಈಗಾಗಲೇ ಚುನಾವಣೆ ದಿನಾಂಕ ಘೋಷಣೆಯಾಗಿ ಅಭ್ಯರ್ಥಿಗಳ ಆಯ್ಕೆಗೆ ಸಾಕಷ್ಟು ಕಸರತ್ತುಗಳು ನಡೆಯುತ್ತಿದೆ. ಏ.17 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಅಷ್ಟರೊಳಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಖೈರು ಗೊಳಿಸಲು ಕಾಂಗ್ರೆಸ್ ಸರ್ಕಸ್ ಮಾಡುತ್ತಿದೆ. ಬಹುತೇಕ ಏ.15 ರಂದು ಪಟ್ಟಿ ಅಂತಿಮಗೊಂಡು ಪ್ರಕಟಗೊಳ್ಳುವ ಸಾಧ್ಯತೆ ಇದೆ.

ಸಂಭವನೀಯ ಅಭ್ಯರ್ಥಿಗಳು

ಅಫ್ಜಲ್‍ಪುರ ಎಂ.ವೈ.ಪಾಟೀಲ್
ಅಳಂದ ಬಿ.ಆರ್.ಪಾಟೀಲ್
ಆನೇಕಲ್ ಬಿ.ಶಿವಣ್ಣ
ಅರಕಲಗೂಡು ಎ.ಮಂಜು
ಔರಾದ್ ಭೀಮಸೇನರಾವ್ ಸಿಂಧೆ
ಬಿ.ಟಿ.ಎಂ.ಲೇಔಟ್ ರಾಮಲಿಂಗಾರೆಡ್ಡಿ
ಬಬಲೇಶ್ವರ ಎಂ.ಬಿ.ಪಾಟೀಲ್
ಬಾದಾಮಿ ಬಿ.ಬಿ.ಚಿಮ್ಮನಕಟ್ಟಿ/ಸಿದ್ದರಾಮಯ್ಯ
ಬಾಗಲಕೋಟೆ ಎಚ್.ವೈ.ಮೇಟಿ
ಬಂಗಾರಪೇm ನಾರಾಯಣಸ್ವಾಮಿ
ಬಂಟ್ವಾಳ ರಮಾನಾಥ್ ರೈ
ಬಸವನಬಾಗೇವಾಡಿ ಶಿವಾನಂದ ಪಾಟೀಲ್
ಬಳ್ಳಾರಿ ಎನ್.ವೈ.ಗೋಪಾಲಕೃಷ್ಣ
ಬಳ್ಳಾರಿನಗರ ಅನಿಲ್ ಲಾಡ್
ಬೆಳ್ತಂಗಡಿ ಕೆ.ವಸಂತ ಬಂಗೇರ
ಬಾಲ್ಕಿ ಈಶ್ವರ್ ಖಂಡ್ರೆ
ಬೀದರ್ ರಹೀಂ ಖಾನ್
ಬಿಜಾಪುರನಗರ ಮಕ್ಬುಲ್ ಭಾಗವಾನ್
ಬೀಳಗಿ ಜಿ.ಟಿ.ಪಾಟೀಲ್
ಬ್ಯಾಡಗಿ ಬಸವರಾಜ ನೀಲಪ್ಪ ಶಿವಣ್ಣನವರ್
ಬ್ಯಾಟರಾಯನಪುರ ಕೃಷ್ಣ ಬೈರೇಗೌಡ
ಬೈಂದೂರು ಗೋಪಾಲ ಪೂಜಾರಿ
ಚಳ್ಳಕೆರೆ ಟಿ.ರಘುಮೂರ್ತಿ
ಚಾಮರಾಜ(ಮೈಸೂರು) ವಾಸು
ಚಾಮರಾಜನಗರ ಸಿ.ಪಾಂಡುರಂಗ ಶೆಟ್ಟಿ
ಚಾಮರಾಜಪೇಟೆ ಬಿ.ಝಡ್.ಜಮೀರ್ ಅಹಮದ್ ಖಾನ್
ಚಾಮುಂಡೇಶ್ವರಿ ಸಿದ್ದರಾಮಯ್ಯ
ಚನ್ನಗಿರಿ ವಡ್ನಾಳ್ ರಾಜಣ್ಣ
ಚನ್ನಪಟ್ಟಣ ಗಂಗಾಧರ್ / ಶರತ್‍ಚಂದ್ರ
ಚಿಕ್ಕಪೇಟೆ ಆರ್.ವಿ.ದೇವರಾಜ್
ಚಿಕ್ಕಬಳ್ಳಾಪುರ ಡಾ.ಕೆ.ಸುಧಾಕರ್
ಚಿಕ್ಕೊಡಿ-ಸದಲಗ ಗಣೇಶ್ ಹುಕ್ಕೇರಿ
ಚಿಂಚೋಳಿ ಡಾ.ಉಮೇಶ್ ಜಾದವ್
ಚಿತ್ತಾಪುರ ಪ್ರಿಯಾಂಕ್ ಖರ್ಗೆ
ದಾವಣಗೆರೆ ಉತ್ತರ ಎಸ್.ಎಸ್.ಮಲ್ಲಿಕಾರ್ಜುನ್
ದಾವಣಗೆರೆ ದಕ್ಷಿಣ ಶಾಮನೂರು ಶಿವಶಂಕರಪ್ಪ
ದೇವದುರ್ಗ ರಾಜಶೇಖರ್ ನಾಯಕ್
ದೇವನಹಳ್ಳಿ ನಾರಾಯಣಸ್ವಾಮಿ
ಧಾರವಾಡ ವಿನಯಕುಲಕರ್ಣಿ
ದೊಡ್ಡಬಳ್ಳಾಪುರ ಟಿ.ವೆಂಕಟರಮಣಯ್ಯ
ಗದಗ ಎಚ್.ಕೆ.ಪಾಟೀಲ್
ಗಾಂಧಿನಗರ ದಿನೇಶ್ ಗುಂಡೂರಾವ್
ಗಂಗಾವತಿ ಇಕ್ಬಾಲ್ ಅನ್ಸಾರಿ
ಗೌರಿಬಿದನೂರು ಎಚ್.ಎನ್.ಶಿವಶಂಕರ ರೆಡ್ಡಿ
ಗೋಕಾಕ್ ರಮೇಶ್ ಜಾರಕಿಹೊಳಿ
ಗೋವಿಂದರಾಜನಗರ ಪ್ರಿಯಾಕೃಷ್ಣ
ಕಲಬುರ್ಗಿಗ್ರಾ.À ಜಿ.ರಾಮಕೃಷ್ಣ
ಗುಂಡ್ಲುಪೇಟೆ ಗೀತಾ ಮಹದೇವಪ್ರಸಾದ್
ಗುರುಮಿಟ್ಕಲ್ ಬಾಬುರಾವ್ ಚಿಂಚನಸೂರ್
ಹೂವಿನಹಡಗಲಿ ಪಿ.ಟಿ.ಪರಮೇಶ್ವರ್ ನಾಯಕ್
ಹಳಿಯಾಳ ಆರ್.ವಿ.ದೇಶಪಾಂಡೆ
ಹಾನಗಲ್ ಮನೊಹರ್ ತಹಸೀಲ್ದಾರ್
ಹನೂರು ಆರ್.ನರೇಂದ್ರ
ಹಾವೇರಿ ರುದ್ರಪ್ಪ ಮಾನಪ್ಪ ಲಮಾಣಿ
ಹೆಬ್ಬಾಳ ಬೈರತಿ ಸುರೇಶ್/ ರೆಹಮಾನ್ ಖಾನ್ ಷರೀಫ್
ಹಿರೇಕೆರೂರು ಬಿ.ಸಿ.ಪಾಟೀಲ್
ಹಿರಿಯೂರು ಡಿ.ಸುಧಾಕರ್
ಹೊಳಲ್ಕೆರೆ ಎಚ್.ಆಂಜನೇಯ
ಹೊನ್ನಾಳಿ ಜಿ.ಶಾಂತನಗೌಡ
ಹೊಸದುರ್ಗ ಬಿ.ಜಿ.ಗೋವಿಂದಪ್ಪ
ಹೊಸಕೋಟೆ ಎಂ.ಟಿ.ಬಿ.ನಾಗರಾಜ್
ಹು-ಧಾ ಪೂರ್ವ ಅಬ್ಬಯ್ಯ ಪ್ರಸಾದ್
ಹುನಗುಂದ ವಿಜಯಾನಂದ ಕಾಶಪ್ಪನವರ್
ಹುಣಸೂರು ಎಚ್.ಪಿ.ಮಂಜುನಾಥ್
ಇಚಿಡಿ ವೈ.ವಿ.ಪಾಟೀಲ್
ಜಗಳೂರು ಎಚ್.ಪಿ.ರಾಜೇಶ್
ಜಮಖಂಡಿ ಸಿದ್ದುನ್ಯಾಮೇಗೌಡ
ಜೇವರ್ಗಿ ಅಜಯ್ ಧರ್ಮಸಿಂಗ್
ಕೆ.ಆರ್.ಪುರಂ ಬೈರತಿ ಬಸವರಾಜ್
ಕಲಘಟಗಿ ಸಂತೋಷ್ ಲಾಡ್
ಕನಕನಗಿರಿ ಶಿವರಾಜ್ ತಂಗಡಗಿ
ಕನಕಪುರ ಡಿ.ಕೆ.ಶಿವಕುಮಾರ್
ಕಾಪುವಿನಯ್ ಕುಮಾರ್‍ಸೊರಕೆ
ಕಿತ್ತೂರು ಡಿ.ಬಿ.ಇನಾಂದಾರ್
ಕೊಳ್ಳೆಗಾಲ ಎಸ್.ಜಯಣ್ಣ
ಕೊಪ್ಪಳ ರಾಘವೇಂದ್ರ ಹಿಟ್ನಾಳ್
ಕೊರಟಗೆರೆ ಡಾ.ಜಿ.ಪರಮೇಶ್ವರ್
ಕೃಷ್ಣರಾಜ ಎಂ.ಕೆ.ಸೋಮಶೇಖರ
ಕೂಡ್ಲಗಿ ನಾಗೇಂದ್ರ
ಕುಂದಗೋಳ ಸಿ.ಎಸ್.ಶಿವಳ್ಳಿ
ಮಧುಗಿರಿ ಕೆ.ಎನ್.ರಾಜಣ್ಣ
ಮಾಗಡಿ ಬಾಲಕೃಷ್ಣ/
ಮಳವಳ್ಳಿ ಪಿ.ಎಂ.ನರೇಂದ್ರ ಸ್ವಾಮಿ
ಮಲ್ಲೇಶ್ವರಂ ಬಿ.ಕೆ.ಶಿವರಾಮ್
ಮಂಡ್ಯ ಅಂಬರೀಶ್
ಮಂಗಳೂರು ಯು.ಟಿ.ಖಾದರ್
ಮಂಗಳೂರುದಕ್ಷಿಣ ಜೆ.ಆರ್.ಲೋಬೋ
ಮಂಗಳೂರುಉತ್ತರ ಬಿ.ಎ.ಮೊಯಿದ್ದೀನ್ ಬಾವ
ಮಾನ್ವಿ ಹಂಪಾನಾಯಕ
ಮಸ್ಕಿ ಪ್ರತಾಪಗೌಡ ಪಾಟೀಲ್
ಮಾಯಕೊಂಡಕೆ.ಶಿವಮೂರ್ತಿ
ಮೂಡಬಿದರೆ ಕೆ.ಅಭಯಚಂದ್ರ ಜೈನ್
ಮುದ್ದೇಬಿಹಾಳ ಅಪ್ಪಾಜಿನಾಡಗೌಡ
ಮುದೋಳ್ ಆರ್.ಬಿ.ತಿಮ್ಮಾಪುರ್
ಮೂಡಿಗೆರೆ ಮೊಟಮ್ಮ
ಮುಳಬಾಗಿಲು ಕೊತ್ತನೂರು ಮಂಜುನಾಥ್/ ಅಂಬರೀಶ್
ನಾಗಮಂಗಲ ಚಲುವರಾಯಸ್ವಾಮಿ
ನಾಗಠಾಣ ರಾಜುಅಲಗೂರು
ನಂಜನಗೂಡು ಕಳಲೆ ಕೇಶವಮೂರ್ತಿ
ನರಸಿಂಹರಾಜ ತನ್ವೀರ್‍ಸೆಠ್
ನರಗುಂದ ಬಿ.ಆರ್.ಯಾವಗಲ್
ಪಾವಗಡ ವೆಂಕಟರವಣಪ್ಪ
ಪಿರಿಯಾಪಟ್ಟಣ ಕೆ.ವೆಂಕಟೇಶ್
ಪುಲಕೇಶಿನಗರ ಅಖಂಡ ಶ್ರೀನಿವಾಸಮೂರ್ತಿ/ ಪ್ರಸನ್ನಕುಮಾರ್
ಪುತ್ತೂರು ಶಕುಂತಲಾ ಶೆಟ್ಟಿ
ರಾಜರಾಜೇಶ್ವರಿನಗರ ಮುನಿರತ್ನ
ರಾಮದುರ್ಗ ಪಿ.ಎಂ.ಅಶೋಕ್
ರಾಣಿಬೆನ್ನೂರು ಕೆ.ಬಿ.ಕೋಳಿವಾಡ
ರೋಣ ಜಿ.ಎಸ್.ಪಾಟೀಲ್
ಸಾಗರ ಕಾಗೋಡು ತಿಮ್ಮಪ್ಪ
ಸಂಡೂರು ಇ.ತುಕಾರಾಂ
ಸರ್ವಜ್ಞನಗರ ಕೆ.ಜೆ.ಜಾರ್ಜ್
ಸೇಡಂ ಡಾ.ಶರಣಪ್ರಕಾಶ್ ಪಾಟೀಲ್
ಶಾಂತಿನಗರ ಎನ್.ಎ.ಹ್ಯಾರಿಸ್
ಶಿಕಾರಿಪುರ ಎಚ್.ಎಸ್.ಶಾಂತವೀರಪ್ಪಗೌಡ
ಶಿವಮೊಗ್ಗ ಕೆ.ಬಿ.ಪ್ರಸನ್ನಕುಮರ್
ಶಿರಹಟ್ಟಿ ರಾಮಕೃಷ್ಣ ದೊಡ್ಡಮನಿ
ಶಿವಾಜಿನಗರ ಆರ್.ರೋಷನ್ ಬೇಗ್/ ರುಮಾನ್ ಬೇಗ್
ಸುರಪುರ ರಾಜಾವೆಂಕಟಪ್ಪ ನಾಯಕ
ಶ್ರೀರಂಗಪಟ್ಟಣ ರಮೇಶ್ ಬಂಡಿಸಿದ್ದೇಗೌಡ
ಸಿಂಧನೂರು ಹಂಪನಗೌಡ ಬಾದರ್ಲಿ
ಶಿರಾ ಟಿ.ಬಿ.ಜಯಚಂದ್ರ
ಶಿರಗೊಪ್ಪ ಬಿ.ಎಂ.ನಾಗರಾಳ
ಶ್ರೀನಿವಾಸಪುರ ಕೆ.ಆರ್.ರಮೇಶ್ ಕುಮಾರ್
ಟಿ.ನರಸೀಪುರ ಎಚ್.ಸಿ.ಮಹದೇವಪ್ಪ/ ಸುನೀಲ್ ಬೋಸ್
ತರಿಕೆರೆ ಜಿ.ಎಚ್.ಶ್ರೀನಿವಾಸ
ತೆರದಾಳ ಉಮಾಶ್ರೀ
ತಿಪಟೂರು ಕೆ.ಷಡಕ್ಷರಿ
ತೀರ್ಥಹಳ್ಳಿ ಕಿಮ್ಮನೆ ರತ್ನಾಕರ್
ತುಮಕೂರು ನಗರ ಡಾ.ರಫಿಕ್ ಅಹಮದ್
ಉಡುಪಿ ಪ್ರಮೋದ್ ಮದ್ವರಾಜ್
ವರುಣಾ ಡಾ.ಯತೀಂದ್ರ
ವಿಜಯನಗರ ಎಂ.ಕೃಷ್ಣಪ್ಪ
ವಿಜಯನಗರ(ಹೊಸಪೇಟೆ) ಆನಂದ್ ಸಿಂಗ್
ಯಾದಗಿರಿ ಎ.ಬಿ.ಮಾಲಕರೆಡ್ಡಿ
ಯಲಬುರ್ಗ ಬಸವರಾಜ್ ರಾಯರೆಡ್ಡಿ
ಯಲ್ಲಾಪುರ ಶಿವರಾಮ್ ಹೆಬ್ಬಾರ್
ಯಮಕನಮರಡಿ ಸತೀಶ್ ಜಾರಕಿಹೊಳಿ
ಯಶವಂತಪುರ ಎಸ್.ಟಿ.ಸೋಮಶೇಖರ್
ಹುಮ್ನಾಬಾದ್ ರಾಜಶೇಖರ್ ಪಾಟೀಲ್
ಅರಸೀಕೆರೆ ಬಿ.ಶಿವರಾಮು
ಬೆಳಗಾವಿ(ಗ್ರಾಮಾಂತರ) ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ (ಉತ್ತರ) ಫಿರೋಜ್ ಸೇಠ್
ಬೀದರ್ (ದಕ್ಷಿಣ) ಅಶೋಕ್ ಖೇಣಿ/ ಚಂದ್ರ ಸಿಂಗ್
ಬಟ್ಕಳ ಮಂಕಾಳ ಸುಬ್ಬ ವೈದ್ಯ
ಹಗರಿಬೊಮ್ಮನಹಳ್ಳಿ ಭೀಮಾನಾಯಕ್/……
ಹೊಳೆನರಸೀಪುರ ಎಸ್.ಜಿ.ಅನುಪಮಾ/ಮಂಜೇಗೌಡ
ಕಾರವಾರ ಸತೀಶ್ ಶೈಲ್ /ಕೃಷ್ಣ
ರಾಜಾಜೀನಗರ ಪದ್ಮಾವತಿ/ಮಂಜುಳಾನಾಯ್ಡು/
ಮಂಜುನಾಥ್‍ಗೌಡ
ಶಹಾಪುರ ಶರಣಬಸಪ್ಪ ದರ್ಶನಾಪುರ
ಶಿಡ್ಲಘಟ್ಟವಿ .ಮುನಿಯಪ್ಪ
ರಾಮನಗರ ಇಕ್ಬಾಲ್ ಹುಸೇನ್
ಚಿಕ್ಕನಾಯಕನಹಳ್ಳಿ ಸಂತೋಷ್ ಜಯಚಂದ್ರ/ ಸಾಸಲು ಸತೀಶ್
ತುಮಕೂರು (ಗ್ರಾ.) ನಿಂಗಪ್ಪ/ರಾಜೇಂದ್ರ/ರಾಯಸಂದ್ರ ರವಿ
ಸಿ.ವಿ.ರಾಮನ್‍ನಗರ ಸಂಪತ್‍ರಾಜ್/ಎಚ್.ಸಿ.ಮಹದೇವಪ್ಪ/
ಪಿ.ರಮೇಶ್/ಪ್ರಸನ್ನಕುಮಾರ್
ಹೆಗ್ಗಡದೇವನಕೊಟೆ ಅನಿಲ್ ಚಿಕ್ಕಮಾದು
ಜಯನಗರ ಸೌಮ್ಯರೆಡ್ಡಿ/ಎಂ.ಸಿ.ವೇಣುಗೋಪಾಲ್
ಕುಣಿಗಲ್ ಬಿ.ಬಿ.ರಾಮಸ್ವಾಮಿಗೌಡ/ಡಾ.ರಂಗನಾಥ್
ಮಹದೇವಪುರ ಎ.ಸಿ.ಶ್ರೀನಿವಾಸ್/ ನಲ್ಲೂರನಹಳ್ಳಿ ನಾಗೇಶ್
ಮಹಾಲಕ್ಷ್ಮಿಲೇಔಟ್ ಗಿರೀಶ್ ಕೆ.ನಾಶಿ/ಕೇಶವಮೂರ್ತಿ/
ಮಂಜುಳ ಪುರುಷೋತ್ತಮ
ತುರುವೇಕೆರೆ ಚೌದ್ರಿರಂಗಪ್ಪ/
ಗೀತಾರಾಜಣ್ಣ/ಎಂ.ಡಿ.ಲಕ್ಷ್ಮೀನಾರಾಯಣ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ