ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನಟರಾಜ್ ವಿರುದ್ಧ ಕ್ರಿಮಿನಲ್ ಪ್ರಕರಣ :

ಕನಕಪುರ, ಏ.8- ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನಟರಾಜ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಇವರನ್ನು ಬೆಸ್ಕಾಂ ಕಚೇರಿಗೆ ವರ್ಗಾವಣೆ ಮಾಡಿ ಐಜಿಪಿ ದಯನಂದ್ ಅವರು ಆದೇಶಿಸಿದ್ದಾರೆ.
ಅರಳಾಳುಸಂದ್ರ ಗ್ರಾಮದಲ್ಲಿ ನಡೆದಿದ್ದ ಪ್ರಕರಣದಲ್ಲಿ ಮಹಿಳೆಯರು ಹಾಗೂ ಮಕ್ಕಳನ್ನು ಠಾಣೆಗೆ ಕರೆತುಂದು ಸಬ್‍ಇನ್ಸ್‍ಪೆಕ್ಟರ್ ನಟರಾಜ್ ಹಲ್ಲೆ ನಡೆಸಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಕನಕಪುರ ಜೆಎಂಎಫ್‍ಸಿ ನ್ಯಾಯಾಲಯವು ಪುರಠಾಣೆಗೆ ಸ್ವಯಂ ಪ್ರೇರಿತ ದೂರು ದಾಖಲು ಮಾಡಲು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ವಾರ ಐಜಿಪಿ ದಯಾನಂದ್ ಅವರು ಕನಕಪುರ ಠಾಣೆಗೆ ಭೇಟಿ ನೀಡಿ ಈ ಬಗ್ಗೆ ವರದಿ ಪಡೆದುಕೊಂಡಿದ್ದರು. ಗ್ರಾಮಾಂತರ ಠಾಣೆ ಸಬ್‍ಇನ್ಸ್‍ಪೆಕ್ಟರ್ ನಟರಾಜ್ ವಿರುದ್ಧ ಸ್ಥಳೀಯ ಪೆÇಲೀಸರ ಮಟ್ಟದಲ್ಲಿ ತನಿಖೆ ಮಾಡಬಾರದೆಂದು ನಿರ್ಧರಿಸಿ ದಯಾನಂದ್ ಅವರು ಬೆಂಗಳೂರು ಗ್ರಾಮಾಂತರ ಎಸ್‍ಪಿ ಅವರಿಗೆ ತನಿಖೆಗೆ ಆದೇಶಿಸಿದ್ದಾರೆ.
ಈ ನಡುವೆ ನಟರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾದ ಸಂಬಂಧ ಠಾಣೆಯಲ್ಲಿ ಮುಂದುವರೆಯಬಾರದೆಂಬ ಹಿನ್ನೆಲೆಯಲ್ಲಿ ಬೆಸ್ಕಾಂಗೆ ಅವರನ್ನು ವರ್ಗ ಮಾಡಿ ಐಜಿಪಿ ದಯಾನಂದ್ ಆದೇಶಿಸಿದ್ದಾರೆ.
ಕನಕಪುರ ಠಾಣೆಯಲ್ಲಿ ನಟರಾಜ್ ವಿರುದ್ಧ ಹಲ್ಲೆ , ಪ್ರಾಣ ಬೆದರಿಕೆ, ಅಪಹರಣ, ಅಕ್ರಮ ಬಂಧನ ಸೇರಿಂತೆ ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಾಗಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ