ಸಂಸತ್ ಅಧಿವೇಶನ ಗದ್ದಲ-ಕೋಲಾಹಲಕ್ಕೆ ಬಲಿ: ಲೋಕಸಭೆ, ರಾಜ್ಯಸಭೆ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ಏ-6: ಈ ಬಾರಿಯ ಸಂಸತ್ ಅಧಿವೇಶನ ಯಾವುದೇ ರೀತಿಯ ಫಲಪ್ರದ ಚರ್ಚೆ ಇಲ್ಲದೇ ಕೊನೆಗೂ ಗದ್ದಲ-ಕೋಲಾಹಲದಲ್ಲಿಯೇ ಅಂತ್ಯವಾಗಿದೆ. ಲೋಕಸಭೆ ಮತ್ತು ರಾಜ್ಯಸಭೆ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಲಾಗಿದೆ.

ಕಳೆದ ಮಾರ್ಚ್ 5ರಂದು ಆರಂಭವಾಗಿದ್ದ ಸಂಸತ್ ಕಲಾಪ ಒಂದೇ ಒಂದು ಮಸೂದೆಯನ್ನೂ ಅಂಗೀಕಾರ ಮಾಡದೇ ಕೇವಲ ಗದ್ದಲ-ಗೊಂದಲದಲ್ಲೇ ಅಂತ್ಯಗೊಂಡಿದೆ. ಈಶಾನ್ಯ ಭಾರತ ರಾಜ್ಯದ ವಿಧಾನಸಭಾ ಚುನಾವಣೆ ಬಳಿಕ ನಡೆದ ಪ್ರತಿಮೆ ಧ್ವಂಸ ವಿಚಾರದಿಂದ ಆರಂಭವಾದ ವಿಪಕ್ಷಗಳ ಗಲಾಟೆ, ಪ್ರತಿಭಟನೆ ಕಾವೇರಿ ನಿರ್ವಹಣಾ ಮಂಡಳಿ ರಚನೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನದವರೆಗೂ ಮುಂದುವರೆದಿತ್ತು.

ಅತ್ತ ತಮಿಳುನಾಡಿನ ಎಐಎಡಿಎಂಕೆ ಮತ್ತು ಡಿಎಂಕೆ ಸದಸ್ಯರು ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಿದರೆ, ಇತ್ತ ಆಂಧ್ರ ಪ್ರದೇಶದ ಸಂಸದರು ವಿಶೇಷ ಸ್ಥಾನಮಾನಕ್ಕೆ ಆಗ್ರಸಿಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಮತ್ತೊಂದೆಡೆ ಎಸ್ ಎಸ್ ಎಸ್ ಟಿ ಕಾಯ್ದೆ ಗದ್ದಲ ಕೂಡ ಸಂಸತ್ ಕಲಾಪಕ್ಕೆ ಅಡ್ಡಿಯಾಗಿತ್ತು. ಏತನ್ಮಧ್ಯೆ ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲವು ಮುಂದಾಗಿಈ ವಿಚಾರ ಬರೊಬ್ಬರಿ ಒಂದು ವಾರದ ಕಲಾಪವನ್ನು ನುಂಗಿ ಹಾಕಿತ್ತು.

ಒಟ್ಟಾರೆ ವಿಪಕ್ಷಗಳ ಗದ್ದಲ ಮತ್ತೊಮ್ಮೆ ಸಂಸತ್ ಕಲಾಪವನ್ನು ನುಂಗಿ ಹಾಕಿದ್ದು, ರಾಜ್ಯಸಭೆ ಹಾಗೂ ಲೋಕಸಭೆ ಕಲಾಪ ಅನಿರ್ಧಾಷ್ಟಾವಧಿಗೆ ಮುಂದೂಡಲಾಗಿದೆ.

Parliament, Lok Sabha, Rajya Sabha, adjourned

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ