ಹವೇಲಿ, ಜಯನಗರ, ವಿವೇಕಾನಂದ ನಗರ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಬಾಗಲಕೋಟ,03- ಬಾಗಲಕೋಟ ನಗರದ ಹೊರವಲಯ ಹವೇಲಿ, ಮುಚಖಂಡಿ ಕ್ರಾಸ್‍ನ ಜಯನಗರ ಹಾಗೂ ವಿವೇಕಾನಂದ ನಗರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ನಡೆಸಿ ಮುಂಬರುವ ವಿಧಾನಸಭೆ ಚುನಾವಣೆಯ ಸಿದ್ಧತೆಯ ಕುರಿತು ಚರ್ಚೆ ನಡೆಸಲಾಯಿತು. ಹಾಗೂ ಈ ಸಂದರ್ಭದಲ್ಲಿ ಬ್ಲಾಕ್ ಮಟ್ಟದ ಕಾರ್ಯಕರ್ತರಿಗೆ ಒಂದು ಪುಟ ಒಂದು ಕುಟುಂಬದ ಕುರಿತು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಶಾಸಕ ಎಚ್.ವೈ.ಮೇಟಿ ಮಾತನಾಡಿ ಮುಂಬರುವ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷದಿಂದ ಯಾರೇ ಸ್ಪರ್ಧಿಸಲಿ ಅವರ ಆಯ್ಕೆಗೆ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಿನಿಂದ ಶ್ರಮ ವಹಿಸಬೇಕು ಹಾಗು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರದ ಸಾಧನೆಗಳನ್ನು ಯೋಜನೆಗಳನ್ನು ಕಾರ್ಯಕರ್ತರು ಮನೆ-ಮನೆಗೆ ತಲುಪಿಸಬೇಕೆಂದು ಕರೆ ನೀಡಿದರು.

ಅವರು ಮುಂದುವರೆದು ಮಾತನಾಡುತ್ತ ತಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ 48 ಗಂಟೆಗಳಲ್ಲಿ ಬಾಗಲಕೋಟ ನಗರದಲ್ಲಿನ ನೀರಿನ ಬವಣೆ ತಪ್ಪಿಸಲು 44 ಕೊಳವೆ ಬಾವಿಗಳನ್ನು ಕೊರೆಯಿಸಿ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಿದೆ. ನಗರದಲ್ಲಿ ನಗರೋತ್ಥಾನ ಯೋಜನೆಯಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಸಿದ್ದರಾಮಯ್ಯ ನೇತೃತ್ವದ ಸರಕಾರ ನೇಕಾರರ, ರೈತರ ಸಾಲಮನ್ನಾ ಹಾಗೂ ಆಶ್ರಯ ಯೋಜನೆಯ ಫಲಾನುಭವಿಗಳ ಸಾಲಮನ್ನಾ ಮಾಡುವ ಮೂಲಕ ಬಡವರ ಪರ ಸರಕಾರ ಎಂದು ಸಾಬೀತು ಪಡಿಸಿದ್ದಾರೆ ಎಂದರು.

ಸಭೆಯಲ್ಲಿ ಮಾಜಿ ಶಾಸಕ ಪಿ.ಎಚ್.ಪೂಜಾರ, ನಿಂಗನಗೌಡ ಪಾಟೀಲ, ಮೈನುದ್ದೀನ ನಬಿವಾಲೆ, ನಾಗರಾಜ ಹದ್ಲಿ, ನಾರಾಯಣ ದೇಸಾಯಿ, ಅಕ್ಬರ ಮುಲ್ಲಾ, ಹಾಜಿಸಾಬ ದಂಡಿನ, ಬಂದೇನವಾಜ ಪಿತಲಿ, ನಾಗೇಶ ಹೊಸೂರ, ಗಂಗಾರಾಮ ಬೋವಿ, ಬಸವಂತಪ್ಪ ಜಮ್ಮನಕಟ್ಟಿ, ಖಾಜಾಸಾಬ ಸೂಳಿಭಾವಿ, ಈರಪ್ಪ ಯಲಗನ್ನವರ, ರಮೇಶ ಲಮಾಣಿ, ಡೋಂಗ್ರಿಸಾಬ ಕಡಪೆ, ಅಲ್ಲಾಬಕ್ಷ ವಾಲೀಕಾರ, ಮಹಬೂಬ ವಾಲೀಕಾರ, ರಾಮಣ್ಣ ಬಡಿಗೇರ, ಯಲಗುರಪ್ಪ ಬಿಲ್ಲಾರ, ಬಸಪ್ಪ ಆದಪುರ, ಉಮೇಶ ಕೆಂದೂರ, ಕೃಷ್ಣಪ್ಪ ದಾಸರ, ಶಂಕ್ರಪ್ಪ ಹಡಪದ, ಸಿಕಂದರ ಬದಾಮಿ, ಅರ್ಜುನ ಬಿಲ್ಲಾರ, ಗೋವಿಂದಪ್ಪ ಆದಪುರ, ಶ್ರೀಕಾಂತ ಪೂಜಾರ, ಶಿವಾನಂದ ಬಸರಕೋಡ, ಪರಶುರಾಮ ಅಂಬಿಗೇರ, ಸಾವಿತ್ರಿ ಪೂಜಾರ, ಮಿಯಾ ಚಾವೂಸ, ಮಹಬೂಬ ಹುನಗುಂದ ಸೇರಿದಂತೆ ಇತರರು ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ