ಕೇಂದ್ರ ಸರ್ಕಾgದÀ 1988ರ ಅರಣ್ಯ ಕಾಯ್ದೆ ತಿದ್ದುಪಡಿಗೆ ಆಕ್ಷೇ¥ಣೆÀ: ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಮನವಿ

ಬೆಂಗಳೂರು, ಏ.3- ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ 1988ರ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಸರ್ಕಾರದ ಒಡೆತನದಲ್ಲಿರುವ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ನೆಡುತೋಪು ಮಾಡಲು ಹೊಸ ಅರಣ್ಯ ನೀತಿ ತರಲು ಹೊರಟಿದ್ದು, ಇದಕ್ಕೆ ಪಕ್ಷಭೇದ ಮರೆತು ಆಕ್ಷೇಪಣೆ ಸಲ್ಲಿಸಬೇಕೆಂದು ಪರಿಸರ ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಮನವಿ ಮಾಡಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಇಲಾಖೆಯ ಡೆಪ್ಯೂಟಿ ಇನ್ಸ್‍ಪೆಕ್ಟರ್ ಜನರಲ್ ಆಫ್ ಫಾರೆಸ್ಟ್ ನೋಯಲ್ ಥಾಮಸ್ ಇವರು ಕರಡೊಂದನ್ನು ಮಾ.14ರಂದು ಪ್ರಕಟಿಸಿದ್ದು, ಇದರ ಪ್ರಕಾರ, ಘೋಷಿತ ಅರಣ್ಯಗಳಲ್ಲಿ ಶೇ.40ರಷ್ಟು ಜಾಳು ಆರಣ್ಯಗಳಿದ್ದು, ಅವುಗಳನ್ನು ಖಾಸಗಿ ಕಂಪೆನಿಗಳವರಿಗೆ ಬೇಕಾದ ಮರಮುಟ್ಟುಗಳನ್ನು ಬೆಳೆದುಕೊಳ್ಳಲು ಅವಕಾಶ ಕಲ್ಪಿಸುವುದಾಗಿದೆ. ಈ ಬಗ್ಗೆ ಸಾರ್ವಜನಿಕರು ಒಂದು ತಿಂಗಳಲ್ಲಿ ಅಂದರೆ ಏ.14ರೊಳಗೆ ಆಕ್ಷೇಪಣೆ ಸಲ್ಲಿಸಲು ದಿನಾಂಕ ನಿಗದಿ ಮಾಡಲಾಗಿದೆ.

ಅರಣ್ಯ ನೆಡುತೋಪುಗಳ ಹೆಚ್ಚಳ, ಅರಣ್ಯಾಧಾರಿತ ಕೈಗಾರಿಕೆಗಳಿಗೆ ಕಚ್ಚಾ ಸಾಮಗ್ರಿ ದೊರೆಯುವಂತೆ ಮಾಡುವುದು, ಖಾಸಗಿಯವರಿಗೆ ಅರಣ್ಯ ಬೆಳೆಸಲು ಅವಕಾಶ ನೀಡುವ ಮಾರ್ಗದರ್ಶಿ ಸೂತ್ರಗಳನ್ನು 2015ರಲ್ಲಿ ಕೇಂದ್ರ ಸರ್ಕಾರ ಪ್ರಕಟಿಸಿತ್ತು.
ಈ ಯೋಜನೆಗೆ 1998ರ ಅರಣ್ಯ ಕಾಯ್ದೆ ಅಡ್ಡಿಯಾಗಿತ್ತು. ಈ ಕಾಯ್ದೆಗೆ ತಿದ್ದುಪಡಿ ತಂದು ವಿದೇಶದ ಬಹುರಾಷ್ಟ್ರೀಯ ಕಂಪೆನಿಗಳಿಗೆ ಬಂಡವಾಳ ತೊಡಗಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಡಿ ದರ್ಜೆಯ ಅರಣ್ಯ ಭೂಮಿಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ನೆಡುತೋಪು ನಿರ್ಮಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಡುವುದೆಂದು ಕರಡಿನಲ್ಲಿ ಹೇಳಲಾಗಿದೆ.

34 ದಶಲಕ್ಷ ಹೆಕ್ಟೇರ್‍ನಷ್ಟು ಅರಣ್ಯವನ್ನು ಡಿ ದರ್ಜೆ ಅರಣ್ಯವೆಂದು ಗುರುತಿಸಲಾಗಿದ್ದು, ಖಾಸಗಿ ಕಂಪೆನಿಗಳಿಗೆ ಕೊಡುವ ಪ್ರಸ್ತಾವನೆ ಇದಾಗಿದೆ. ಮಲೆನಾಡಿನ ಕಾಡಿಗಂತೂ ಈ ಕಾಯ್ದೆ ಮರಣ ಶಾಸನವಾಗಿದೆ. ಇಲ್ಲಿನ ಕಾಡು ಸ್ವಾಭಾವಿಕವಾಗಿ ಬೆಳೆಯಬೇಕೆ ಹೊರತು ಅರಣ್ಯ ಬೆಳೆಸುವ ನೀತಿ ಪರಿಸರದ ಮೇಲೆ ತುಂಬ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನೀಲಗಿರಿ, ಅಕೇಶಿಯಾ, ಪ್ಲಾಂಟೇಷನ್ ಗಿಡಗಳಿಂದ ಸಾಬೀತಾಗಿದೆ.

ವಿದೇಶಿ ತಳಿಗಳನ್ನು ಬೆಳೆಸುವುದರಿಂದ ಸ್ವಾಭಾವಿಕವಾದ ಕಾಡು ತನ್ನ ತನವನ್ನು ಕಳೆದುಕೊಂಡು ಬರಡಾಗುತ್ತದೆ. ಪ್ರಾಣಿ-ಪಕ್ಷಿಗಳು, ಮನುಷ್ಯರಿಗೂ ಕೂಡ ತೊಂದರೆಯಾಗುತ್ತದೆ. ಪಶ್ಚಿಮಘಟ್ಟದ ಕಾಡುಗಳನ್ನು ರಕ್ಷಿಸಿದರೆ ತಾನೇ ತಾನಾಗಿ ಅಭಿವೃದ್ಧಿಯಾಗುತ್ತದೆ. ಸ್ವಾಭಾವಿಕವಾದ ಕಾಡುಗಳಲ್ಲಿ ಅರಣ್ಯ ಕೃಷಿ ಮಾಡಿದರೆ ಪರಿಸರಕ್ಕೆ ತುಂಬಲಾರದ ನಷ್ಟವಾಗುತ್ತದೆ. ಕೇಂದ್ರ ಸರ್ಕಾರದ ಬಹು ರಾಷ್ಟ್ರೀಯ ಖಾಸಗಿ ಕಂಪೆನಿಗಳಿಗೆ ನಮ್ಮ ಅರಣ್ಯದಲ್ಲಿ ಬಂಡವಾಳ ತೊಡಗಿಸಿ ನೆಡುತೋಪು ಬೆಳೆಸುವುದನ್ನು ಪ್ರತಿಯೊಬ್ಬರೂ ತಿರಸ್ಕರಿಸಬೇಕು.

ಕೇಂದ್ರ ಸರ್ಕಾರ ಬಹುರಾಷ್ಟ್ರೀಯ ಕಂಪೆನಿಗಳಿಗೆ ಕಾಂಟ್ರಾಕ್ಟಿಂಗ್ ಫಾರ್ಮಿಂಗ್ ಹೆಸರಿನಲ್ಲಿ ಗುತ್ತಿಗೆ ಕೊಡುವುದನ್ನು ಕಾನೂನುಬದ್ಧಗೊಳಿಸಿದೆ. ಈಗಾಗಲೇ 48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ತಮಗೆ ಬೇಕಾದ ಬೆಳೆಯನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಕಳೆದ ವರ್ಷ ಈ ಕಾಯ್ದೆಗೆ ಸಾರ್ವಜನಿಕ ಆಕ್ಷೇಪಣೆ ಸಲ್ಲಿಸಲು ಪ್ರಕಟಣೆ ಹೊರಡಿಸಿದಾಗ ಯಾರೂ ಆಕ್ಷೇಪಣೆ ಸಲ್ಲಿಸಲಿಲ್ಲ. ಈ ಕಾಯ್ದೆ 2015 ಟೆನೆಂಟ್ ಆ್ಯಕ್ಟ್ ಆಗಿ ಕಾನೂನಾಗಿದೆ.

ದೇಶದಲ್ಲಿ ರೈತರೆಲ್ಲರೂ ಬಹುರಾಷ್ಟ್ರೀಯ ಕಂಪೆನಿಗಳ ಕೂಲಿಗಳಾಗಬೇಕಾಗುತ್ತದೆ. ಈ ಬಗ್ಗೆ ಆಡಳಿತ ಪಕ್ಷವಾಗಲಿ, ವಿರೋಧ ಪಕ್ಷವಾಗಲಿ ದನಿ ಎತ್ತಿಲ್ಲ. ಖಾಸಗೀಕರಣದ ಇಂದಿನ ದಿನಗಳಲ್ಲಿ ಅರಣ್ಯ, ಕೃಷಿ ಎಲ್ಲವೂ ವಿದೇಶಿ ಕಂಪೆನಿಗಳ ಪಾಲಾಗುತ್ತಿದೆ. ನಮ್ಮ ಸರ್ಕಾರಗಳು ವಿದೇಶಿ ಕಂಪೆನಿಗಳ ಏಜೆಂಟರ್‍ಗಳಾಗುತ್ತಿದ್ದಾರೆ. ಮಲೆನಾಡಿಗರಿಗೆ ಮಾರಕವಾದ ಕಸ್ತೂರಿ ರಂಗನ್ ವರದಿಯ ನಿರ್ಣಾಯಕ ಸಭೆಯಲ್ಲಿ ನಮ್ಮ ಸಂಸದರು ಭಾಗವಹಿಸಲು ಬೇಜವಾಬ್ದಾರಿ ವಹಿಸಿದ್ದಾರೆ.

ಇದಕ್ಕೂ ಸರಿಯಾದ ಆಕ್ಷೇಪಣೆ ವ್ಯಕ್ತಪಡಿಸಲಿಲ್ಲ. ಈಗಲಾದರೂ ಅರಣ್ಯವನ್ನು ಖಾಸಗಿ ಕಂಪೆನಿಗಳಿಗೆ ಕೊಡುವ ಮಸೂದೆಗೆ ದೊಡ್ಡ ಸಂಖ್ಯೆಯಲ್ಲಿ ಪಕ್ಷಭೇದ ಮರೆತು ಆಕ್ಷೇಪಣೆ ಸಲ್ಲಿಸಬೇಕು. ಆಕ್ಷೆಪಣೆ ಸಲ್ಲಿಸುವ ವಿಳಾಸ: ಇಂದಿರಾ ಪರ್ಯಾವರಣ ಭವನ, ವಾಯುವಿಂಗ್, 6ನೆ ಹಂತ, ಜೋಬಾರ್ಗ್ ರೋಡ್, ಆಲಿಗಂಜ್, ನವದೆಹಲಿ-110003.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ