ಬೆಂಗಳೂರಿನಲ್ಲಿ ಮತ್ತೊಂದು ಶೂಟೌಟ್: ಆತ್ಮರಕ್ಷಣೆಗಾಗಿ ಪೊಲೀಸರಿಂದ ರೌಡಿಗಳ ಮೇಲೆ ಗುಂಡಿನ ದಾಳಿ

ಬೆಂಗಳೂರು;ಏ-1: ರಾಜಧಾನಿ ಬೆಂಗಳೂರುನಲ್ಲಿ ರೌಡಿಗಳ ಅಟ್ಟಹಾಸವನ್ನು ಮಟ್ಟಹಾಕಲು ಮತ್ತೆ ಕಾರ್ಯಾಚರಣೆಗಿಳಿದಿದ್ದು, ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ರೌಡಿ ಶೀಟರ್ ಗಳಿಬ್ಬರ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗಂಡಿನದಾಳಿ ನಡೆಸಿದ್ದಾರೆ.

ತಲಘಟ್ಟಪುರ ಪೊಲೀಸ್​ ಠಾಣೆ ವ್ಯಾಪ್ತಿಯ ರೌಡಿಶೀಟರ್​ಗಳನ್ನು ಬಂಧಿಸಲು ತೆರಳಿದಾಗ ರೌಡಿಗಳು ಪೊಲೀಸರ ಮೇಲೆ ದಾಳಿಗೆ ಯತ್ನಿಸಿದ್ದಾರೆ ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಗಳ ಮೇಲೆ ಶೂಟೌಟ್ ಮಾಡಿದ್ದಾರೆ.

ಕೊಲೆ ಕೇಸ್ ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಪರಮೇಶ್ ಹಾಗೂ ಅವನ ಸಹಚರ ಸಂತೋಷ್ ನನ್ನು ಪೊಲೀಸರು ಬಂಧಿಸಲೆಂದು ತಡರಾತ್ರಿ ಬನಶಂಕರಿಯ ಚಿಕ್ಕೇಗೌಡನ ಪಾಳ್ಯಕ್ಕೆ ತೆರಳಿದ್ದ ವೇಳೆ
ಪಿಸ್ತೂಲ್​ನಿಂದ ಪೊಲೀಸರ ಮೇಲೆ ಫೈರಿಂಗ್ ಮಾಡಲು ಯತ್ನಿಸಿದ್ದಾರೆ. ಅಲ್ಲದೆ, ಹೆಡ್​ ಕಾನ್ಸ್​ಟೆಬಲ್‌ ಸುರೇಶ್, ಪೇದೆ ನೇಮಿನಾಥ್ ಮೇಲೆ ರೌಡಿಶೀಟರ್​ಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಆತ್ಮರಕ್ಷಣೆಗೆ ರೌಡಿಶೀಟರ್​ಗಳ ಮೇಲೆ ಇನ್ಸ್​ಪೆಕ್ಟರ್ ಶಿವಸ್ವಾಮಿ, ಎಸ್​ಐ ಶಿವಕುಮಾರ್ ಏರ್ ಫೈರ್ ಮಾಡಿದ್ದಾರೆ. ರೌಡಿಶೀಟರ್​ಗಳ ಕಾಲಿಗೆ ಗುಂಡು ತಗುಲಿದ್ದು, ಗಾಯಾಳುಗಳನ್ನ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಕುರಿತು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಮಾಹಿತಿ ನೀಡಿದ್ದಾರೆ.

Firing,Rowdy sheeter,Shoot out,Thalaghatpura police

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ