ಕ್ರಿಯೇಟಿವ್ ಸಮ್ಮರ್ ಕ್ಯಾಂಪ್‍ನಿಂದ ಬೇಸಿಗೆ ಶಿಬಿರ

ಬೆಂಗಳೂರು,ಮಾ.31- ಕ್ರಿಯೇಟಿವ್ ಸಮ್ಮರ್ ಕ್ಯಾಂಪ್‍ನಿಂದ 3ರಿಂದ 13 ವರ್ಷದ ಮಕ್ಕಳಿಗಾಗಿ ಏ.5ರಿಂದ 29ರವರೆಗೆ ಜೆನಪಿನಗರದ ಓಂ ಕಿಡ್ಸ್‍ನಲ್ಲಿ ಸಾಂಸ್ಕøತಿಕ ಬೇಸಿಗೆ ಶಿಬಿರವನ್ನು ಆಯೋಜಿಸಿದೆ.
ಶಿಬಿರದಲ್ಲಿ ಕಸೂತಿ, ಚಿತ್ರಕಲೆ, ಹಾಡುಗಾರಿಕೆ, ನೃತ್ಯ, ಧ್ಯಾನ, ದೇಸಿ ಆಟಗಳು, ಬೆಂಕಿ ರಹಿತ ಅಡುಗೆ, ಬೊಂಬೆ ತಯಾರಿಕೆ ಇತ್ಯಾದಿಗಳನ್ನು ನುರಿತ ತಜ್ಞರದಿಂದ ತರಬೇತಿ ಕೊಡಿಸಲಾಗುತ್ತದೆ.

ಜೆಪಿನಗರದ 3ನೇ ಫೇಸ್, 2ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆಯಲ್ಲಿರುವ ಓಂ ಕಿಡ್ಸ್‍ನಲ್ಲಿ ಏ.3ರಿಂದ ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಸಲಾಗುತ್ತದೆ ಎಂದು ಕ್ಯಾಂಪ್‍ನ ಅಧ್ಯಕ್ಷೆ ಹೇಮಲತಾ.ಎಚ್.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಮೊ:9844999669/8197315823 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ