ಕಡಿಮೆ ದರದಲ್ಲಿ ಪಬ್ಲಿಕ್ ಟ್ಯಾಕ್ಸಿ ಸೇವೆ ಆರಂಭ

ಬೆಂಗಳೂರು, ಮಾ.30-ಓಲಾ ಮತ್ತು ಊಬರ್ ಟ್ಯಾಕ್ಸಿ ಸೇವೆಗಳಿಗಿಂತ ಕಡಿಮೆ ದರದಲ್ಲಿ ನಗರದ ನಾಗರೀಕರಿಗೆ ಪಬ್ಲಿಕ್ ಟ್ಯಾಕ್ಸಿ ಸೌಲಭ್ಯವನ್ನು (ಸೇವೆ) ಇಂದಿನಿಂದ ಆರಂಭಿಸಿದ್ದೇವೆ ಎಂದು ಕ್ಯಾಬ್ ಚಾಲಕ ಭರಮೇಗೌಡ ತಿಳಿಸಿದರು.

ಇಂದು ಪ್ರೆಸ್‍ಕ್ಲಬ್ ಆವರಣದಲ್ಲಿ ಪಬ್ಲಿಕ್ ಟ್ಯಾಕ್ಸಿ ಕ್ಯಾಬ್‍ಗೆ ಚಾಲನೆ ನೀಡಿ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಓಲಾ ಮತ್ತು ಊಬರ್‍ಗಿಂತ ಶೇ.25ರಷ್ಟು ಕಡಿಮೆ ದರದಲ್ಲಿ ಸೇವೆ ಒದಗಿಸಲಾಗುವುದು. ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಶೇ.2ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಹೇಳಿದರು.

ಪ್ರಯಾಣಿಕರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್ ಅಳವಡಿಸಲಾಗುವುದು, ಆಟೋಗೆ ನಾಲ್ಕು ಕಿ.ಮೀ.ಗೆ 25 ರೂ., ಕಾರಿಗೆ ಪ್ರತಿ ಕಿಲೋ ಮೀಟರ್ 4 ರೂ. ನಗದು ರಹಿತ ಸೇವೆಗೆ ಶೇ.2ರಷ್ಟು ರಿಯಾಯಿತಿ ದರ, ಮೊದಲ ಮೂರು ರೈಡ್‍ಗೆ 15ರಷ್ಟು ರಿಯಾಯಿತಿ ನೀಡಲಾಗುವುದು. ಅಲ್ಲದೆ, ಪಬ್ಲಿಕ್ ಟ್ಯಾಕ್ಸಿ ಆ್ಯಪ್ ಡೌನ್‍ಲೋಡ್‍ಗೆ ಕಂಪೆನಿಯಿಂದ 50 ರೂ.ಗಳು ಮರುಪಾವತಿಸಲಾಗುವುದು ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ