ಜೈಲಿನಿಂದ ಕೈದಿಗಳೂ ತಪ್ಪಿಸಿಕೊಳ್ಳುವ ಯತ್ನ: ಕಾರಾಗೃಹದಲ್ಲಿ ಭುಗಿಲೆದ್ದ ಗಲಭೆ, ಭೀಕರ ಅಗ್ನಿ ದುರಂತದಲ್ಲಿ ಪೆÇಲೀಸರೂ ಸೇರಿದಂತೆ 68 ಸೆರೆಯಾಳುಗಳು ಮೃತ:

ಕ್ಯಾರಕಾಸ್, ಮಾ.29-ಜೈಲಿನಿಂದ ಕೈದಿಗಳೂ ತಪ್ಪಿಸಿಕೊಳ್ಳುವ ಯತ್ನದಲ್ಲಿ ಕಾರಾಗೃಹದಲ್ಲಿ ಭುಗಿಲೆದ್ದ ಗಲಭೆ ವೇಳೆ ಭೀಕರ ಅಗ್ನಿ ದುರಂತದಲ್ಲಿ ಪೆÇಲೀಸರೂ ಸೇರಿದಂತೆ 68 ಸೆರೆಯಾಳುಗಳು ಮೃತಪಟ್ಟ ಘಟನೆ ವೆನಿಜುವೆಲಾದ ವೆಲೆನ್ಸಿಯಾದಲ್ಲಿ ನಿನ್ನೆ ನಡೆದಿದೆ. ಈ ಘಟನೆಯಲ್ಲಿ ಅನೇಕರು ತೀವ್ರ ಗಾಯಗೊಂಡಿದ್ದು, ಸಾವು ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ ಎಂದು ಉನ್ನತ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಂತರ ಕೈದಿಗಳ ಬಂಧು-ಮಿತ್ರರು ಜೈಲಿನ ಮುಂಭಾಗ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಪೆÇಲೀಸರೊಂದಿಗೆ ಘರ್ಷಣೆಗೆ ಇಳಿದ ಕಾರಣ ಕೆಲಕಾಲ ಉದ್ರಿಕ್ತ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು ಭಾರೀ ಬಂದೋಬಸ್ತ್ ಮಾಡಲಾಗಿದೆ. ಬಂದೀಖಾನೆಯಿಂದ ತಪ್ಪಿಸಿಕೊಳ್ಳಲು ಕೈದಿಗಳ ಗುಂಪೆÇಂದು ಯತ್ನಿಸಿತು. ಇದೇ ಸಂದರ್ಭದಲ್ಲಿ ಗಲಭೆ, ಹೊಡೆದಾಟಗಳು ನಡೆದು ಬೆಂಕಿ ಹೊತ್ತಿಕೊಂಡಿತು. ಅಗ್ನಿಯ ಕೆನ್ನಾಲಿಗೆ ಜೈಲಿನಲ್ಲಿ ವ್ಯಾಪಿಸಿ ಪೆÇಲೀಸರು, ಕೈದಿಗಳೂ ಸೇರಿದಂತೆ 68 ಮಂದಿ ಮೃತಪಟ್ಟರು ಎಂದು ತನಿಖಾಧಿಕಾರಿ ತರೇಕ್
ವಿಲಿಯಂ ಸಾಬ್ ಹೇಳಿದ್ದಾರೆ.
ಪೆÇಲೀಸ್ ಠಾಣೆಗೆ ಹೊಂದಿಕೊಂಡಿರುವ ಕಾರಾಗೃಹದಲ್ಲಿ 60 ಕೈದಿಗಳಿಗೆ ಮಾತ್ರ ಸ್ಥಳಾವಕಾಶವಿದೆ. ಆದರೆ ಈ ಸೆರೆಮನೆ ಬಂದಿಯಾಳುಗಳಿಂದ ಕಿಕ್ಕಿರಿದು ತುಂಬಿತ್ತು. ಇವರ ಪಹರೆಗೆ ಕಡಿಮೆ ಸಂಖ್ಯೆ ಸಿಬ್ಬಂದಿ ಇದ್ದರು. ಸಮಯಸಾಧಿಸಿದ ಕೈದಿಗಳ ಗುಂಪೆÇಂದು ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಗಲಭೆ ನಡೆಯಿತು.
ಕೈದಿಗಳು ಹಾಸಿಗೆಗಳಿಗೆ ಬೆಂಕಿ ಹಚ್ಚಿ, ಭದ್ರತಾ ಗಾರ್ಡ್‍ಗಳಿಂದ ಬಂದೂಕಗಳನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದರು. ಅಗ್ನಿ ಜೈಲಿನಲ್ಲಿ ವ್ಯಾಪಿಸಿ ಕೆಲವರು ಸುಟ್ಟ ಗಾಯಗಳಿಂದ ಮತ್ತು ಇನ್ನು ಹಲವರು ಉಸಿರುಗಟ್ಟಿ ಮೃತಪಟ್ಟರು. ಕೈದಿಯನ್ನು ಭೇಟಿಯಾಗಲು ಬಂದಿದ್ದ ಇಬ್ಬರು ಮಹಿಳೆಯರೂ ಸಹ ಅಸುನೀಗಿದ್ದಾರೆ.
ಇದೇ ಸಂದರ್ಭದಲ್ಲಿ ಪೆÇಲೀಸರು ಗುಂಡು ಹಾರಿಸಿದರು. ಜೈಲಿನಲ್ಲಿ ಬೆಂಕಿ ಹೊತ್ತಿಕೊಂಡು ವ್ಯಾಪಿಸಿದ್ದರಿಂದ 68 ಮಂದಿ ಮೃತಪಟ್ಟರು ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಗ್ಗೆ ತನಿಖೆಗಾಗಿ ನಾಲ್ವರು ಉನ್ನತಾಧಿಕಾರಿಗಳನ್ನು ನೇಮಿಸಲಾಗಿದೆ. ವೆನಿಜುವೆಲಾದ ಜೈಲುಗಳಲ್ಲಿ ಆಗಾಗ ಗಲಭೆ-ಹಿಂಸಾಚಾರಗಳು ನಡೆದು ಸಾವು-ನೋವುಗಳು ಸಂಭವಿಸುವುದು ಸಾಮಾನ್ಯ ಸಂಗತಿಯಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ