ಕಾರಾಗೃಹಗಳಿಗೆ ವೈದ್ಯಕೀಯ ತಪಾಸಣಾ ಉಪಕರಣಗಳ ಖರೀದಿಗಾಗಿ ರಾಜ್ಯ ಸರ್ಕಾರದಿಂದ 23,50,000 ರೂ. ಬಿಡುಗಡೆ

ಬೆಂಗಳೂರು,ಮಾ.25- ರಾಜ್ಯದ 27 ವಿವಿಧ ಕಾರಾಗೃಹಗಳಿಗೆ ವೈದ್ಯಕೀಯ ತಪಾಸಣಾ ಉಪಕರಣಗಳ ಖರೀದಿಗಾಗಿ 23,50,000 ರೂ.ಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.

09 ಕೇಂದ್ರ ಕಾರಾಗೃಹಗಳು, 21 ಜಿಲ್ಲಾ ಬಂಧಿಖಾನೆಗಳು, 27 ತಾಲ್ಲೂಕು ಉಪ ಜೈಲುಗಳು ಸೇರಿದಂತೆ ರಾಜ್ಯದ ವಿವಿಧ ಕಾರಾಗೃಹಗಳಿಗೆ ವೈದ್ಯಕೀಯ ಉಪಕರಣಗಳನ್ನು ಖರೀದಿ ಮಾಡಲು ಅನುಕೂಲವಾಗುವಂತೆ ಹಣ ಬಿಡುಗಡೆ ಮಾಡಿದೆ.

ಮೂರು ವರ್ಷಗಳ ಉಚಿತ ನಿರ್ವಹಣೆ ಮಾಡುವ ಷರತ್ತಿಗೊಳಪಟ್ಟು ಬೆಂಗಳೂರಿನ ಡಿಸ್ಟ್ರಿಕ್ಟ್ ಸಪ್ಲೈ ಅಂಡ್ ಮಾರ್ಕೆಟಿಂಗ್ ಕೋ-ಆಪರೇಟಿಂಗ್ ಸೊಸೈಟಿಗೆ ಹಣ ಮಂಜೂರು ಮಾಡಿದ್ದು, ಇಸಿಜಿ, ಡಿಜಿಟಲ್ ಬಿಪಿ, ಡಿಜಿಟಲ್ ಥರ್ಮಮೀಟರ್, ಸ್ಟೆಥಸ್ಕೋಪ್, ಗ್ಲೊಕೊಮೀಟರ್, ನೆಬ್ಲೈಜರ್, ಡಿಜಿಟಲ್ ವೇಟಿಂಗ್, ಡಿಜಿಟಲ್ ಪಲ್ಸ್ ಆಕ್ಸಿಮೀಟರ್, ನಾರ್ಮಲ್ ಬಿಪಿ ಉಪಕರಣಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ.

ಉತ್ತಮ ಗುಣಮಟ್ಟದ ವೈದ್ಯಕೀಯ ಉಪಕರಣಗಳನ್ನು ಖರೀದಿಸಿರುವುದನ್ನು ದೃಢಪಡಿಸಿ ಒಳಾಡಳಿತ ಇಲಾಖೆ ಸರ್ಕಾರಕ್ಕೆ ವರದಿ ಮಾಡಬೇಕಾಗಿದೆ.
ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಡಿ ಖರೀದಿಸಲು ಸರ್ಕಾರ ಅನುಮೋದನೆ ನೀಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ