130ಕಿಮೀ ಉದ್ದದ ರಸ್ತೆ ಲೋಕಾರ್ಪಣೆ

ಬೆಂಗಳೂರು, ಮಾ.24- ಕೇರಳ ಗಡಿಯಿಂದ ಕೊಳ್ಳೆಗಾಲ ವಿಭಾಗದವರೆಗೆ 586 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಒಟ್ಟು 130ಕಿಮೀ ಉದ್ದದ ರಸ್ತೆಯನ್ನು ಇಂದು ಕೇಂದ್ರ ರಸ್ತೆ ಸಾರಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಾರ್ಪಣೆಗೊಳಿಸಿದರು.

ಕೆಂಗೇರಿಯ ನೈಸ್ ಜಂಕ್ಷನ್ ಬಳಿಯ ಪಂಚಮುಖಿ ಗಣಪತಿ ದೇವಾಲಯ ಸಮೀಪದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೇವ್ಡ್ ಶೋಲ್ಡರ್‍ನೊಂದಿಗೆ 2/4 ಮಾರ್ಗಗಳ ಅಗಲೀಕರಣ, ರಾಷ್ಟ್ರೀಯ ಹೆದ್ದಾರಿ-2012ರ ಕೇರಳಾ ಗಡಿಯಿಂದ ಕೊಳ್ಳೇಗಾಲದವರೆಗೆ ನಿರ್ಮಿಸಲಾಗಿರುವ ಬೃಹತ್ ರಸ್ತೆಗೆ ಚಾಲನೆ ನೀಡಿದರು.

ಇದೇ ವೇಳೆ 7000 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರು-ಮೈಸೂರು ವಿಭಾಗದ ಆರು ಪಥದ ರಸ್ತೆ ನಿರ್ಮಾಣ ಮಾಡುತ್ತಿದ್ದು, ರಾಷ್ಟ್ರೀಯ ಹೆದ್ದಾರಿ-275ರಲ್ಲಿ ನಿರ್ಮಾಣವಾಗಲಿರುವ 117 ಕಿಮೀ ಉದ್ದದ ರಸ್ತೆ ಕಾಮಗಾರಿ ಮತ್ತು 2000 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ-209ರಲ್ಲಿ 171 ಕಿಮೀ ಉದ್ದದ ರಸ್ತೆ ನಿರ್ಮಾಣ (ಬಿಆರ್‍ಟಿ ಮೀಸಲು ಗಡಿಯಿಂದ ಬೆಂಗಳೂರುವರೆಗೆ 2/4 ಪಥಗಳ ನಿರ್ಮಾಣ) ಹಾಗೂ 600 ಕೋಟಿ ರೂ. ವೆಚ್ಚದಲ್ಲಿ 84 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯ ಐದು ಕಾಮಗಾರಿಗಳ ಜತೆಗೆ ಒಂದು ಆರ್‍ಒಬಿ ಮತ್ತು ಒಂದು ಆರ್‍ಯುಬಿ ಕಾಮಗಾರಿಗಳಿಗೆ ಇಂದು ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್, ರಮೇಶ್ ಜಿಗಜಿಣಗಿ, ಸಂಸದ ಪ್ರತಾಪ್ ಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ