50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶ

ಬೆಂಗಳೂರು, ಮಾ.23- ಕಾನೂನು ಬಾಹಿರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೆÇಲೀಸರು ಬಂಧಿಸಿ 50ಸಾವಿರ ರೂ. ಬೆಲೆಯ ವಿದೇಶಿ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಶೋಕ್ (65) ಬಂಧಿತ ಆರೋಪಿಯಾಗಿದ್ದು, ಈತನಿಂದ ವಿದೇಶಿ ಕಂಪೆನಿಯ 610 ಸಿಗರೇಟ್ ಪ್ಯಾಂಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈತ ಸಿಗರೇಟ್ ಅಂಗಡಿಯನ್ನು ಇಟ್ಟುಕೊಂಡು ಐಟಿಪಿ ಕಂಪೆನಿಯ ಸಿಗರೇಟ್‍ಗಳ ಜತೆ ವಿದೇಶಿ ಕಂಪೆನಿಯ ಸಿಗರೇಟ್ ಪ್ಯಾಕ್‍ಗಳನ್ನು ಇಟ್ಟುಕೊಂಡು ಸರ್ಕಾರದ ನಿಯಮ ಉಲ್ಲಂಘಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದನು.
ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೆÇಲೀಸರು ಸಿಟಿ ಮಾರ್ಕೆಟ್ ವ್ಯಾಪ್ತಿಯ ಶ್ರೀ ಏಜೆನ್ಸೀಸ್ ಎಂಬ ಅಂಗಡಿ ಮೇಲೆ ದಾಳಿ ಮಾಡಿ ಅಶೋಕ್‍ನನ್ನು ಬಂಧಿಸಿ ಸಿಗರೇಟ್ ಪ್ಯಾಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ವಿರುದ್ಧ ಸಿಟಿ ಮಾರ್ಕೆಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ