ನವಬೃಂದಾವನದ ಪೂಜಾ ವಿವಾದಕ್ಕೆ ಇಂದು ಸುಪ್ರೀಂ ಕೋರ್ಟ್ ತೆರೆ

ಕೊಪ್ಪಳದ ಗಂಗಾವತಿ ತಾಲೂಕಿನ ನವಬೃಂದಾವನದ ಪೂಜಾ ವಿವಾದಕ್ಕೆ ಇಂದು ಸುಪ್ರೀಂ ಕೋರ್ಟ್ ತೆರೆ ನೀಡಿದೆ. ನವಬೃಂದಾವನದಲ್ಲಿ ಪೂಜೆಸಲ್ಲಿಸಲು ಉತ್ತಾರಧಿಮಠ ಹಾಗೂ ರಾಯರುಮಠದ ಭಕ್ತಾಧಿಗಳು ನಮಗೆ ಪೂಜೆಗೆ ಅವಕಾಶ ಕಲ್ಪಿಸಬೇಕು ಎಂದು ಜಗಳ ಮಾಡಿಕೊಂಡಿದ್ರು. ಪೂರ್ವ, ಮಧ್ಯ ಹಾಗೂ ಉತ್ತರಾಧನೆ ನಡೆಸಲು ನಮಗೆ ಅವಕಾಶ

 

ಕೊಡಬೇಕು ಎಂದು ಉಭಯಮಠಗಳು ಜಗಳ ಮಾಡಿಕೊಂಡು ವಿವಾದ ಮಾಡಿಕೊಂಡಿದ್ರು.ಇದ್ರಿಂದ ಉಭಯಮಠಗಳು ಸುಪ್ರೀಂ ಕೊರ್ಟ್ ಮೊರೆ ಹೋಗಿದ್ರು. ಇಂದು ಐತಿಹಾಸಿಕ ತೀರ್ಪು ನೀಡಿದ ಕೋರ್ಟ್ ಮೂರುದಿನಗಳ ಆರಾಧನೆಯಲ್ಲಿ ಮೊದಲು ಒಂದುವರೆದಿನ ರಾಯರು ಮಠದವರು ಪೂಜೆ ಸಲ್ಲಿಸಿದ್ರೆ, ಇನ್ನುಳಿದ ಒಂದುವರೆದಿನ ಉತ್ತರಾಧಿಮಠದವರು ಪೂಜೆ ಸಲ್ಲಿಸಬೇಕು ಎಂದು ತೀರ್ಪು ನೀಡಿದೆ. ಇನ್ನು ನಾಳೆಯಿಂದ ಕವೀಂದ್ರತಿರ್ಥರ ಮೂರುದಿನಗಳ ಆರಾಧನೆ ನಡೆಯಲಿದ್ದು, ಸಕಲಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ. ನಂತರ ಎಪ್ರೀಲ್ 2,3 ಹಾಗೂ ರಂದು ಸಹ ವಾಗೇಶ ತೀರ್ಥರ ಆರಾಧನೆ ನಡೆಯಲಿದ್ದು, ಈ ಆರಾಧನೆಗಳಿಗೆ ಸುಪ್ರೀಂ ಆದೇಶ ಅನ್ವಯವಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ