ಕೆಲವು ಕಡೆ ಸುರಿದ ಭಾರೀ ಗಾಳಿ ಮಳೆಯಿಂದ ಫಸಲಿಗೆ ಬಂದಿದ್ದ ಬಾಳೆತೋಟದ ಮೇಲೆ ಟ್ರಾನ್ಸ್‍ಫಾರ್ಮ್ ಕಂಬ ಬಿದ್ದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ

ಮಾಗಡಿ, ಮಾ.19-ತಾಲೂಕಿನ ಕೆಲವು ಕಡೆ ಸುರಿದ ಭಾರೀ ಗಾಳಿ ಮಳೆಯಿಂದ ಫಸಲಿಗೆ ಬಂದಿದ್ದ ಬಾಳೆತೋಟದ ಮೇಲೆ ಟ್ರಾನ್ಸ್‍ಫಾರ್ಮ್ ಕಂಬ ಬಿದ್ದ ಪರಿಣಾಮ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ.

ರಾತ್ರಿ ತಾಲೂಕಿನ ಬಸವೇನಹಳ್ಳಿ ಬಳಿ ಗುಡುಗು ಮಿಂಚು ಸಹಿತ ಗಾಳಿ ಮಳೆಯಾಗಿದ್ದು, ರೈತ ಜಯರಾಮಯ್ಯ ಅವರ ಬಾಳೇತೋಟದಲ್ಲಿ ಹಾದುಹೋಗಿದ್ದ ಟ್ರಾನ್ಸ್‍ಫಾರ್ಮ್ ವಿದ್ಯುತ್ ಕಂಬ ನೆಲಕ್ಕುರುಳಿ ಸುಮಾರು 300ಕ್ಕೂ ಹೆಚ್ಚು ಫಸಲಿಗೆ ಬಂದಿದ್ದ ಏಲಕ್ಕಿ ಬಾಳೆ ಬೆಳೆ ನಾಶವಾಗಿದೆ.

ಇನ್ನೇನು ಕೆಲವೇ ದಿನಗಳಲ್ಲಿ ಬಾಳೆ ಗೊನೆಗಳನ್ನು ಕಟಾವು ಮಾಡಬೇಕಿತ್ತು. ರಾತ್ರಿ ಸುರಿದ ಮಳೆಯಿಂದ ಕೈಗೆ ಬಂದ ಫಸಲು ಬಾಯಿಗೆ ಬಾರದಂತಾಗಿದೆ. ಫಸಲು ನಷ್ಟದಿಂದ ಜಯರಾಮಯ್ಯ ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

ಸ್ಥಳಕ್ಕೆ ಕೆಪಿಟಿಸಿಎಲ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ವಿದ್ಯುತ್ ಟ್ರಾನ್ಸ್‍ಫಾರ್ಮ್ ದುರಸ್ತಿಗೆ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ